ಅತೃಪ್ತರಲ್ಲಿ ಕೆಲವರಿಗೆ ವಾಪಸ್ ಬರುವ ಮನಸ್ಸಿದೆ : ಜಿಟಿಡಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.11- ಶಾಸಕರಲ್ಲಿ ಕೆಲವರಿಗೆ ವಾಪಸ್ ಬರುವ ಮನಸ್ಸಿದೆ. ಇನ್ನು ಕೆಲವರಿಗೆ ಮರಳಿ ಬರುವ ಮನಸ್ಸಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೆಗೌಡ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ತೆರಳಿದ್ದ ಶಾಸಕರನ್ನು ಭೇಟಿ ಮಾಡಲು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮತ್ತು ನಾವು ಹೋಗಿದ್ದೆವು. ಆದರೆ ಅವಕಾಶ ಸಿಗಲಿಲ್ಲ. ನಾವು ಬುಕ್ ಮಾಡಿದ ರೂಮ್ ಸಹ ರದ್ದು ಮಾಡಿದರು.

ನಾವು ಆಯುಧ ಇಟ್ಟುಕೊಂಡು ಹೋಗಿರಲಿಲ್ಲ. ಮಾಜಿ ಮುಖ್ಯಮಂತ್ರಿ ಆರ್.ಅಶೋಕ್ ಹೋಟೆಲ್‍ನಲ್ಲೇ ಇದ್ದರು. ಆದರೆ ನಮ್ಮನ್ನು ಮಾತ್ರ ಬಿಡಲಿಲ್ಲ ಎಂದು ಜಿಟಿಡಿ ಹೇಳಿದರು.

ಶಾಸಕರ ಪ್ರವಾಸ ರದ್ದು : ಮುಂಬೈಗೆ ಹೊರಟಿದ್ದ ಅತೃಪ್ತ ಶಾಸಕರಿಬ್ಬರು ತಮ್ಮ ಪ್ರವಾಸ ರದ್ದುಪಡಿಸಿದ್ದಾರೆ. ಕ್ಷಿಪ್ರ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಎಂಟಿಬಿ ನಾಗರಾಜ್ ಹಾಗೂ ಕೆ.ಸುಧಾಕರ್ ಇಂದು ಮುಂಬೈಗೆ ತೆರಳಿ ಅತೃಪ್ತ ಶಾಸಕರ ಪಡೆಯನ್ನು ಸೇರುವವರಿದ್ದರು.

ಆದರೆ ಇಂದು ಸುಪ್ರೀಂಕೋರ್ಟ್ ನೀಡಿದ ಆದೇಶದ ಹಿನ್ನೆಲೆಯಲ್ಲಿ ಅತೃಪ್ತ ಶಾಸಕರು ಬೆಂಗಳೂರಿಗೆ ಹಿಂದಿರುಗುತ್ತಿರುವುದರಿಂದ ಈ ಇಬ್ಬರು ಶಾಸಕರು ತಮ್ಮ ಪ್ರವಾಸ ಮೊಟಕುಗೊಳಿಸಿ ಇಲ್ಲೇ ಉಳಿದಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin