ರಾಹುಲ್ ಚುನಾಯಿಸಿ ಕೇರಳ ದೊಡ್ಡ ತಪ್ಪುಮಾಡಿದೆ : ಗುಹಾ ವಿಷಾದ

ಈ ಸುದ್ದಿಯನ್ನು ಶೇರ್ ಮಾಡಿ

ಕೋಳಿಕೋಡ್, ಜ.18-ಕಾಂಗ್ರೆಸ್ ನಾಯಕ ರಾಹುಲ್‍ಗಾಂಧಿ ಅವರನ್ನು ವಂಶಪಾರಂಪರ್ಯದ ಐದನೇ ಜನಾಂಗದ ವಂಶಸ್ಥ ಎಂದು ಟೀಕಿಸಿರುವ ಖ್ಯಾತ ಇತಿಹಾಸ ತಜ್ಞ ರಾಮಚಂದ್ರ ಗುಹಾ, ಸಂಸದರನ್ನಾಗಿ ರಾಹುಲ್ ಅವರನ್ನು ಚುನಾಯಿತಿ ಕೇರಳ ದೊಡ್ಡ ತಪ್ಪು ಮಾಡಿದೆ ಎಂದು ವಿಷಾದಿಸಿದ್ದಾರೆ.

ರಾಷ್ಟ್ರ ರಾಜಕಾರಣದಲ್ಲಿ ರಾಹುಲ್ ಎಂದಿಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸರಿಸಮನಾಗುವುದಿಲ್ಲ. ಮೋದಿ ಅವರು ಶ್ರಮಜೀವಿ ಮತ್ತು ಸ್ವಯಂ ನಿರ್ಮಿತ ವ್ಯಕ್ತಿ. ಅವರನ್ನು ಸರಿಗಟ್ಟಲು ಕಾಂಗ್ರೆಸ್ ನಾಯಕನಿಗೆ ಸಾಧ್ಯವಿಲ್ಲ ಎಂದು ರಾಮಚಂದ್ರ ಗುಹಾ, ನಮೋ ಮತ್ತು ರಾಗಾ ವಿರುದ್ಧ ಹೋಲಿಕೆ ಮಾಡಿದ್ದಾರೆ.

ಕೇರಳ ಸಾಹಿತ್ಯ ಉತ್ಸವ (ಕೆಎಲ್‍ಎಫ್) ಸಂದರ್ಭದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಇತಿಹಾಸ ತಜ್ಜರು, ಸ್ವಾತಂತ್ರ ಸಂಗ್ರಾಮದ ಮೇಲೆ ಮಹಾ ಪಕ್ಷವಾಗಿದ್ದ ಕಾಂಗ್ರೆಸ್ ಈಗ ಶೋಚನೀಯ ಕೌಟುಂಬಿಕ ಸಂಸ್ಥೆಯಾಗಿದೆ ಎಂದು ಲೇವಡಿ ಮಾಡಿದರು. ರಾಹುಲ್ ಬಗ್ಗೆ ನನಗೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ರಾಹುಲ್ ತುಂಬಾ ಒಳ್ಳೆಯ ಮತ್ತು ಸಭ್ಯ ವ್ಯಕ್ತಿ. ಅತ್ಯಂತ ಸಂಭಾವಿತರು.

ಆದರೆ ಯುವ ಭಾರತಕ್ಕೆ ಕಾಂಗ್ರೆಸ್ ವಂಶಪಾರಂಪರ್ಯ ಆಡಳಿತದ ಐದನೇ ತಲೆಮಾರಿನ ವ್ಯಕ್ತಿ ಬೇಕಿಲ್ಲ, ನೀವು ಕಳೆದ ಲೋಕಸಭೆ ಚುನಾವಣೆಯಲ್ಲಿ ರಾಹುಲ್‍ಗಾಂಧಿ ಅವರನ್ನು ಸಂಸತ್ತಿಗೆ ಆಯ್ಕೆ ಮಾಡಿ ಕೇರಳ ಜನತೆ ದೊಡ್ಡತಪ್ಪು ಮಾಡಿದ್ದಾರೆ ಎಂದು ವಿಷಾದಿಸಿದ ಅವರು 2024ರಲ್ಲಿ ಇಂಥ ತಪ್ಪು ಪುನರಾವರ್ತನೆಯಾಗುವುದು ಬೇಡ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Facebook Comments