ರೆಮ್‌ಡೆಸಿವಿರ್ ಬಳಕೆಗೆ ಮಾರ್ಗಸೂಚಿ ಪ್ರಕಟ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 5- ಕೋವಿಡ್-19 ರೋಗಿಗಳಲ್ಲಿ ರೆಮ್‌ಡಿಸಿವಿರ್ ಇಂಜೆಕ್ಷನ್ ಬಳಕೆಗಾಗಿ‌ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ.ತುರ್ತು ಸಂದರ್ಭದಲ್ಲಿ(ಸೀಮಿತ ಲಭ್ಯವಿರುವ ಪುರಾವೆಗಳ ಆಧಾರದ ಮೇಲೆ ಮತ್ತು ನಿರ್ಧಿಷ್ಟ ಸಂದರ್ಭಗಳಲ್ಲಿ ಮಾತ್ರ) ರೆಮ್‌ಡಿಸಿವಿರ್(ಇಯುಎ)ಬಳಕೆಗೆ ಮಾತ್ರ ಪರಿಗಣಿಸಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ತಿಳಿಸಿದ್ದಾರೆ.

ರೆಮ್‌ಡಿಸಿವಿರ್ ಇಂಜೆಕ್ಷನ್ ಅನ್ನು ಮಧ್ಯಮದಿಂದ ತೀವ್ರವಾದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು (ಪೂರಕ ಆಕ್ಸಿಜನ್ ಅಗತ್ಯವಿರುವ) ಮತ್ತು ಮೂತ್ರಪಿಂಡ ಅಥವಾ ಯಕೃತ್ತಿನ ಸಾಮಾನ್ಯ ಕ್ರಿಯೆ ಇಲ್ಲದವರು ಹತ್ತು ದಿನದೊಳಗಿನ ರೋಗ ಲಕ್ಷಣಗಳಿರುವ ವ್ಯಕ್ತಿಗಳಿಗೆ 4 ದಿನಗಳವರೆಗೆ ದಿನಕ್ಕೆ 200 ಮಿಗ್ರಾಂ IV ಎಫ್/ ಬಿ 100 ಮಿಗ್ರಾಂ ಐವಿ ಒಡಿ ಡೋಸ್ ಅನ್ನು ಶಿಫಾರಸು ಮಾಡಿದೆ. ಆಮ್ಲಜನಕದ ಬೆಂಬಲವಿಲ್ಲದ ಅಥವಾ ಮನೆಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳು ರೆಮ್‌ಡೆಸಿವಿರ್ ಇಂಜೆಕ್ಷನ್‌ಅನ್ನು ಬಳಸಬಾರದು.

ರೆಮ್‌ಡೆಸಿವಿರ್ ಇಂಜೆಕ್ಷನ್‌ಅನ್ನು ಗೊತ್ತುಪಡಿಸಿರುವ ಕೋವಿಡ್-19 ಆರೋಗ್ಯ ಕೇಂದ್ರ ಮತ್ತು ಕೋವಿಡ್-19 ಆಸ್ಪತ್ರೆಯ ವಾರ್ಡ್‌ಗಳಲ್ಲಿ ಬಳಸಲಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Facebook Comments

Sri Raghav

Admin