ಗುಜರಾತ್ ನಲ್ಲಿ ಬೆಳ್ಳಂಬೆಳಿಗ್ಗೆ ಭೂಕಂಪ..!

ಈ ಸುದ್ದಿಯನ್ನು ಶೇರ್ ಮಾಡಿ

ಸೂರತ್, ಫೆ.27 (ಪಿಟಿಐ)- ಗುಜರಾತ್ ರಾಜ್ಯದ ಪ್ರಮುಖ ಕೈಗಾರಿಕಾ ಮತ್ತು ಉದ್ಯಮ ನಗರಿ ಸೂರತ್‍ನಲ್ಲಿ ಶನಿವಾರ ಮುಂಜಾನೆ ಭೂಕಂಪದ ಅನುಭವವಾಗಿದೆ. ಬೆಳಗಿನ ಜಾವ 4.35ಕ್ಕೆ ರಿಕ್ಟರ್ ಮಾಪಕದ 3.1 ತೀವ್ರತೆಯಲ್ಲಿ ಭೂಮಿ ನಡುಗಿರುವ ಘಟನೆ ನಡೆದಿದೆ ಎಂದು ಭೂಕಂಪನ ಸಂಶೋಧನಾ ಸಂಸ್ಥೆ (ಐಎಸ್‍ಆರ್) ವರದಿ ಮಾಡಿದೆ. ಭೂಕಂಪನ ಅನುಭವ ಇಲ್ಲಿನ ಜನತೆ ಆಗಿದೆ.

ದಕ್ಷಿಣ ಗುಜರಾತ್‍ನ ಈಶಾನ್ಯ ಸೂರತ್‍ನಿಂದ 29 ಕಿ.ಮೀ. ದೂರದ ಉತ್ತರದಲ್ಲಿ ಭೂಮಿ ಅಂತರಾಳದಲ್ಲಿ (ಎಪಿಸೆಂಟರ್) ಈ ನಡುಕ ಸಂಭವಿಸಿದೆ. ನಡುಕವು 15 ಕಿ.ಮೀ. ಆಳದಲ್ಲಿ ದಾಖಲಾಗಿದ್ದು, ಸೂರತ್ ನಗರ ಮತ್ತು ಸಮೀಪದ ಪ್ರದೇಶಗಳಲ್ಲಿ ಇದರ ಅನುಭವವಾಗಿದೆ ಎಂದು ಗಾಂನಗರ ಮೂಲದ ಐಎಸ್‍ಆರ್ ಸಂಸ್ಥೆ ತಿಳಿಸಿದೆ.

ಭೂಕಂಪನಕ್ಕೆ ಸಂಬಂಧಪಟ್ಟಂತೆ ಯಾವುದೇ ಸಾವು-ನೋವು ಅಥವಾ ಅಪಘಾತಗಳು ಸಂಭವಿಸಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.

Facebook Comments

Sri Raghav

Admin