ಗಾಂಧಿ ನಾಡಿನಲ್ಲಿ ಹೆಚ್ಚಾಯ್ತು ಕೊರೊನಾ ಕಾಟ

ಈ ಸುದ್ದಿಯನ್ನು ಶೇರ್ ಮಾಡಿ

ಅಹಮದಾಬಾದ್, ಮಾ.26-ಭಾರತದಲ್ಲಿಕೊರೊನಾ ವೈರಸ್ ಸೋಂಕು ಪ್ರಕರಣಗಳು ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದ್ದು, ಗಾಂಧಿ ನಾಡುಗುಜರಾತ್‍ನಲ್ಲಿಯೂ ಹೊಸ ಕೇಸ್‍ಗಳು ಪತ್ತೆಯಾಗುತ್ತಿವೆ.

ಗುಜರಾತ್‍ನ ಭಾವನಗರದಲ್ಲಿಕೊರೊನಾ ಸೊಂಕು ಪೀಡಿತ 70 ವರ್ಷದ ವೃದ್ದರೊಬ್ಬರು ಮೃತಪಟ್ಟಿದ್ದು, ರಾಜ್ಯದಲ್ಲಿ ಸಾವಿನ ಸಂಖ್ಯೆ 3ಕ್ಕೇರಿದೆ. ಅಲ್ಲದೇಅಹಮದಾಬಾದ್, ಸೂರತ್, ಗಾಂಧಿನಗರ ಮತ್ತು ಬಾವನಗರಗಳಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 43ಕ್ಕೇರಿದೆ.

ಮಧ್ಯಪ್ರದೇಶದಲ್ಲಿ ವಿದೇಶಿ ಪ್ರಯಾಣದ ಹಿನ್ನೆಲೆಇರದ ವ್ಯಕ್ತಿಯೊಬ್ಬರುಇಂದು ಮೃತಪಟ್ಟಿದ್ದಾರೆ.  ದೆಹಲಿಯಲ್ಲಿಈವರೆಗೆ 36 ಪ್ರಕರಣಗಳು ಪತ್ತೆಯಾಗಿದೆ. ಪಶ್ಚಿಮಬಂಗಾಳ. ಛತ್ತೀಸ್‍ಗಡ ಸೇರಿದಂತೆಇನ್ನೂ ಕೆಲವು ರಾಜ್ಯಗಳಲ್ಲಿಯೂ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿರುವುದು ಮತ್ತಷ್ಟುಆತಂಕಕ್ಕೆಕಾರಣವಾಗಿದೆ.

Facebook Comments

Sri Raghav

Admin