ಸೌದಿಯಿಂದ ತಾಯ್ನಾಡಿಗೆ ಮರಳಿದ 39 ಕಾರ್ಮಿಕರು

ಈ ಸುದ್ದಿಯನ್ನು ಶೇರ್ ಮಾಡಿ

ಸೌದಿ ಅರೇಬಿಯಾ,ಜೂ.18- ನಿರ್ಮಾಣ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಭಾರತದ 39ಕ್ಕೂ ಹೆಚ್ಚು ಕಾರ್ಮಿಕರು ತಾಯ್ನಾಡಿಗೆ ಮರಳಲಿದ್ದಾರೆ.
ಕಳೆದ ವರ್ಷ ಅರೇಬಿಯಾದ ನಿರ್ಮಾಣ ಕಂಪನಿಯೊಂದರಲ್ಲಿ 60ಕ್ಕೂ ಹೆಚ್ಚು ದಿನಗೂಲಿ ನೌಕರರಾಗಿ ಹೋಗಿದ್ದರು.

ಆದರೆ ಕಳೆದ ಆರು ತಿಂಗಳಿನಿಂದ ಕಾರ್ಮಿಕರಿಗೆ ಸರಿಯಾದ ವೇತನ ನೀಡದೆ, ಊಟೋಪಾಚಾರವನ್ನು ನೀಡದೆ ಅವರನ್ನು ಹೀನಾಯವಾಗಿ ನಡೆಸಿಕೊಂಡಿದ್ದು, ಸಂಬಳವಿಲ್ಲದೆ ಅವರ ಬದುಕು ದುಸರಸ್ತವಾಗಿತ್ತು ಎಂದು ತಿಳಿದುಬಂದಿದೆ.

ದಿನಗೂಲಿ ನೌಕರರಲ್ಲಿ ಹೆಚ್ಚಿನವರು ಕರೀಂನಗರ, ನಿರ್ಮಲ್, ನಿಜಾಮಾಬಾದ್ ಮತ್ತು ಆದಿಲಾಬಾದ್ ಜಿಲ್ಲೆಗಳಿಗೆ ಸೇರಿದವರಾಗಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ತೆಲಾಂಗಣ ರಾಷ್ಟ್ರ ಸಮಿತಿ ಅಧ್ಯಕ್ಷ ಕೆ.ಟಿ.ರಾಮರಾವ್ ರಿಯಾದ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಸೌದಿ ಅರೇಬಿಯಾದಲ್ಲಿ ಸಿಲುಕಿರುವ ಜನರಿಗೆ ಸಹಾಯ ಮಾಡುವಂತೆ ವಿನಂತಿಸಿದರು.

ಇದೀಗ 39ಕ್ಕೂ ಹೆಚ್ಚು ಕಾರ್ಮಿಕರು ಸೌದ ಅರೇಬಿಯಾದಿಂದ ಭಾರತಕ್ಕೆ ಮರಳುತ್ತಿದ್ದಾರೆ.

Facebook Comments