‘ಗಲ್ಲಿಬಾಯ್‍’ಗೆ ಒಲಿಯದ ಆಸ್ಕರ್

ಈ ಸುದ್ದಿಯನ್ನು ಶೇರ್ ಮಾಡಿ

ಪ್ರತಿ ಬಾರಿ ಆಸ್ಕರ್ ಪ್ರಶಸ್ತಿಗಳು ಪ್ರಕಟವಾದಾಗ ನಮ್ಮ ಭಾರತೀಯ ಚಿತ್ರರಂಗದ ಯಾವುದಾ ದರೊಂದು ಚಿತ್ರಕ್ಕೆ ಪ್ರಶಸ್ತಿ ದೊರೆಯಬಹುದೇನೋ ಎಂದು ಜಾತಕದ ಪಕ್ಷಿಯಂತೆ ಕಾಯುವವರ ಸಂಖ್ಯೆ ಕಮ್ಮಿಯೇನೂ ಇಲ್ಲ.. ಆದರೆ ಪ್ರತಿ ಬಾರಿಯೂ ನಿರಾಸೆಯ ಕಾರ್ಮೋಡವೇ ಕವಿದಿರುತ್ತದೆ. ಅದರಂತೆ ಈ ವರ್ಷವೂ ಭಾರತ ಚಿತ್ರರಂಗಕ್ಕೆ ಉಳಿದಿದ್ದು ನಿರಾಸೆಯೇ.
ಈ ಬಾರಿಯ ಆಸ್ಕರ್ ಪ್ರಶಸ್ತಿ ಪಟ್ಟಿಯಲ್ಲಿ ಬಾಲಿವುಡ್‍ನ ಗಲ್ಲಿಬಾಯ್ ಚಿತ್ರವು ಬಂದೇ ಬರುತ್ತದೆ ಎಂದು ಹೇಳಲಾಗುತ್ತಿದ್ದಾದರೂ ಕೊನೆಯ ಘಳಿಗೆಯಲ್ಲಿ ಆ ಸಾಲಿನಿಂದ ಎಡವಿ ಬಿದ್ದಿರುವ ಚಿತ್ರವು ಆಸ್ಕರ್ ಪ್ರಶಸ್ತಿ ಆಯ್ಕೆ ಮಂಡಳಿಯ ಮೆಚ್ಚುಗೆಯ 91ನೆ ಚಿತ್ರವಾಗಿದೆ.

ಆಸ್ಕರ್ ಪ್ರಶಸ್ತಿಯ ಆಯ್ಕೆ ಪಟ್ಟಿಯ ಟಾಪ್ 10 ಪಟ್ಟಿಯಲ್ಲಿ ಚಿತ್ರವು ಸ್ಥಾನ ಪಡೆಯದಿರುವುದು ಚಿತ್ರದ ನಿರ್ದೇಶಕ ಜೋಯಾ ಅಖ್ತರ್‍ಗೆ ನಿರಾಸೆ ಮೂಡಿಸಿದೆ ಆದರೂ, ಚಿತ್ರವು ಟಾಪ್ 91 ಸ್ಥಾನದಲ್ಲಿ ನಿಂತಿರುವುದರಿಂದ ನಾಯಕ ರಣವೀರ್‍ಸಿಂಗ್ ಮತ್ತು ಅಲಿಯಾಭಟ್‍ಗೆ ತುಸು ಸಂತಸವನ್ನು ತಂದಿದೆ ಎಂದು ಹೇಳಿದ್ದಾರೆ.

ಗಲ್ಲಿಬಾಯ್ ಚಿತ್ರವು ಗಲ್ಲಿ ಹುಡುಗನೊಬ್ಬನ ಕನಸನ್ನು ತೋರ್ಪಡಿಸುವ ಚಿತ್ರವಾಗಿದೆ. ಒಬ್ಬ ಪ್ರಬುದ್ಧ ಡ್ಯಾನ್ಸರ್ ಆಗಿರುವ ಈತ ಮುಂದೊಂದು ದಿನ ರ್ಯಾಪ್ ಕಲಾವಿದನಾಗಿ ಎಲ್ಲರ ಮೆಚ್ಚುಗೆ ಗಳಿಸಬೇಕೆಂದುಕೊಂಡಿರುತ್ತಾನೆ ಅದಕ್ಕಾಗಿ ಅವರು ಸಾಕಷ್ಟು ಪರಿಶ್ರಮವನ್ನು ಹಾಕುತ್ತಾನೆ, ಅವನು ತನ್ನ ಕನಸನ್ನು ಹೇಗೆ ಈಡೇರಿಸಿಕೊಂಡಿದ್ದಾನೆ ಎಂಬುದನ್ನು ತೆರೆಯ ಮೇಲೆ ನೋಡಿ ತಿಳಿಯಬೇಕು.

ಗಲ್ಲಿ ಬಾಯ್ ಆಗಿ ರಣವೀರ್‍ಸಿಂಗ್ ಕಾಣಿಸಿಕೊಂಡಿದ್ದರೆ, ಅಲಿಯಾಭಟ್, ಸಿದ್ಧಾಂತ್ ಚತುರ್ವೇದಿ, ಕಲ್ಕಿ ಕೊಚ್ಚಿನ್, ವಿಜಯ್ ರಾಜ್ ಮತ್ತಿತರರು ನಟಿಸಿದ್ದಾರೆ. ಇನ್ನು ಆಸ್ಕರ್ ಪ್ರಶಸ್ತಿಯ ವಿಷಯಕ್ಕೆ ಬಂದರೆ ನರ್ಗೀಸ್, ಸುನಿಲ್‍ದತ್ ನಟನೆಯ ಮದರ್ ಇಂಡಿಯಾ (1958), ಸಲಾಮ್ ಬಾಂಬೆ (1989), ಅಮೀರ್‍ಖಾನ್ ನಟನೆಯ ಲಗಾನ್ (2001) ಚಿತ್ರಗಳು ಟಾಪ್ 5ನಲ್ಲಿ ಗುರುತಿಸಿಕೊಂಡಿದ್ದರೂ ವಿಮರ್ಶಕರ ಮನ ಗೆದ್ದು ಆಸ್ಕರ್ ಗೆಲ್ಲುವಲ್ಲಿ ಎಡವಿತ್ತು. ಈಗ ಗಲ್ಲಿಬಾಯ್ ಕೂಡ ಆಸ್ಕರ್ ವಿಮರ್ಶಕರ ಮನ ಗೆಲ್ಲುವಲ್ಲಿ ಎಡವಿದೆಯಾದರೂ ಪ್ರೇಕ್ಷಕರ ಮನ ಗೆದ್ದು ಸಿನಿಮಾ ಸಕ್ಸಸ್ ಕಾಣುವಂತಾಗಲಿ.

Facebook Comments