ಅರಮನೆಯಲ್ಲಿ ರಾಜರ ಕಾಲದ ಫಿರಂಗಿಗಳಿಗೆ ಪೂಜೆ

ಈ ಸುದ್ದಿಯನ್ನು ಶೇರ್ ಮಾಡಿ

Firangi--01
ಮೈಸೂರು, ಸೆ.19-ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಅರಮನೆ ಆವರಣದಲ್ಲಿರುವ ರಾಜರ ಕಾಲದ ಫಿರಂಗಿಗಳಿಗೆ ಇಂದು ಪೂಜೆ ಸಲ್ಲಿಸಲಾಯಿತು. ದಸರಾ ಮಹೋತ್ಸವದ ಸಂದರ್ಭದಲ್ಲಿ 21 ಕುಶಾಲ ತೋಪು ಹಾರಿಸಲು ಈ ಫಿರಂಗಿಗಳನ್ನು ಬಳಕೆ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಇಂದು ಸ್ವಚ್ಛ ಪಡಿಸಿದ ಫಿರಂಗಿಗಳಿಗೆ ಪೂಜೆ ಸಲ್ಲಿಸಲಾಗಿದ್ದು, ಪ್ರಥಮವಾಗಿ ಗಣಪತಿ ಪೂಜೆ ನಂತರ ನಾಡ ಅಧಿದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ನಂತರ ಫಿರಂಗಿಗಳಿಗೆ ಪೂಜಿಸಲಾಯಿತು.

ಅರಮನೆ ಮುಂಭಾಗ ಸಾಲಾಗಿ ಇಟ್ಟಿರುವ ಫಿರಂಗಿಗಳನ್ನು ನಿರ್ವಹಿಸಲು ಒಟ್ಟು ಮೂರು ಮಂದಿ ಹಿರಿಯ ಅಧಿಕಾರಿಗಳು ಸೇರಿದಂತೆ 30 ಮಂದಿ ಸಿಬ್ಬಂದಿಗೆ ಕುಶಾಲ ತೋಪು ಹಾರಿಸಲು (ಮದ್ದು ಸಿಡಿಸಲು) ತರಬೇತಿ ನೀಡಲಾಗುತ್ತದೆ.  ವಿಜಯದಶಮಿಯಂದು ಅರಮನೆಯಿಂದ ಆರಂಭಗೊಳ್ಳುವ ಜಂಬೂಸವಾರಿಗೂ ಮುನ್ನ ನಂತರ ಬನ್ನಿಮಂಟಪದಲ್ಲಿ ಕುಶಾಲ ತೋಪು ಹಾರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಫಿರಂಗಿಗಳಿಗೆ ನಿಗದಿತ ಸಮಯದಲ್ಲಿ ಮದ್ದು ತುಂಬಿ ಬೆಂಕಿ ಹಚ್ಚಿ ಕುಶಾಲ ತೋಪು ಹಾರಿಸಬೇಕಾಗುತ್ತದೆ.

Firangi--02

ಇದನ್ನು ನಿಗದಿತ ಸಮಯದಲ್ಲೇ ಮಾಡಬೇಕಾಗಿದ್ದು, ತಪ್ಪಿದರೆ ಮದ್ದು ಬೇರೆ ಸಂದರ್ಭದಲ್ಲಿ ಸಿಡಿಯುವ ಸಾಧ್ಯತೆ ಇರುತ್ತದೆ. ಹಾಗಾಗಿ ಎಷ್ಟು ಸಮಯಾವಕಾಶದಲ್ಲಿ ಇದನ್ನು ಹಾರಿಸಬೇಕು ಎಂಬುದರ ಬಗ್ಗೆ ತರಬೇತಿ ನೀಡಿ ಸಜ್ಜುಗೊಳಿಸಲಾಗುತ್ತದೆ. ಅದರಂತೆ ಇಂದು ಫಿರಂಗಿಗಳಿಗೆ ಪೂಜೆ ಸಲ್ಲಿಸಿ ವಿಧ್ಯುಕ್ತ ಚಾಲನೆ ನೀಡಲಾಗಿದೆ.

Facebook Comments

Sri Raghav

Admin