ಮಧ್ಯಪ್ರದೇಶದಲ್ಲಿ ದಲಿತ ದಂಪತಿ ಮೇಲೆ ಪೊಲೀಸರ ಹಲ್ಲೆ : ರಾಹುಲ್ ಗಾಂಧಿ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜು.16- ಮಧ್ಯಪ್ರದೇಶದಲ್ಲಿ ದಲಿತ ದಂಪತಿ ಮೇಲೆ ಪೊಲೀಸರು ನಡೆಸಿರುವ ಹಲ್ಲೆಯನ್ನು ಖಂಡಿಸಿರುವ ರಾಹುಲ್‍ಗಾಂಧಿ, ಇಂತಹ ಪರಿಸ್ಥಿತಿಯ ವಿರುದ್ಧದ ಹೋರಾಟ ಮುಂದುವರೆಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.

ಮಧ್ಯ ಪ್ರದೇಶದ ಗುಣ ಜಿಲ್ಲೆಯಲ್ಲಿ ದಲಿತ ದಂಪತಿ ಮೇಲೆ ಪೊಲೀಸರು ಹಲ್ಲೆ ನಡೆಸುತ್ತಿರುವ ವಿಡಿಯೋ ಟ್ಯಾಗ್ ಮಾಡಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಅವರು ಇಂತಹ ಮನಸ್ಥಿತಿ ಹಾಗೂ ಅನ್ಯಾಯದ ವಿರುದ್ಧ ಹೋರಾಟ ನಡೆಸುತ್ತೇವೆ ಎಂದಿದ್ದಾರೆ.

ಸರ್ಕಾರಿ ಮಾಡಲ್ ಶಾಲೆ ನಿರ್ಮಿಸಲು ಮೀಸಲಿಟ್ಟಿದ್ದ ಜಮೀನಿನಲ್ಲಿ ಶೆಡ್ ಹಾಕಿಕೊಂಡಿದ್ದ ದಂಪತಿ ಜಾಗ ಖಾಲಿ ಮಾಡಲು ನಿರಾಕರಿಸಿದ್ದರು ಹೀಗಾಗಿ ಜಿಲ್ಲಾಡಳಿತದಿಂದ ಅವರನ್ನು ಬಲವಂತವಾಗಿ ತೆರವು ಮಾಡಿಸಲು ಮುಂದಾದಾಗ ಅವರು ಕ್ರಿಮಿನಾಶಕ ಸೇವಿಸಿ ಆತ್ಯಹತ್ಯೆಗೆ ಯತ್ನಿಸಿದ್ದರು.
ಕೂಡಲೇ ಅವರನ್ನು ಆಸ್ಪತೆಗೆ ದಾಖಲಿಸಲು ಕರೆದೊಯ್ಯಲು ಯತ್ನಿಸಿದಾಗ ಅವರು ಸ್ಥಳದಿಂದ ಕದಲದೆ ಇದ್ದಾಗ ಪೊಲೀಸ್ ಬಲಪ್ರಯೋಗಿಸಿ ಅವರನ್ನು ಎಳೆದೊಯ್ಯುವ ವಿಡಿಯೋ ವೈರಲ್ ಆಗಿತ್ತು.

ಈ ಮಧ್ಯೆ ದಲಿತ ದಂಪತಿ ವಿವಾದವನ್ನು ಶಾಂತಿಯುತವಾಗಿ ಬಗೆಹರಿಸುವಲ್ಲಿ ವಿಫಲವಾದ ಆಧಿಕಾರಿಗಳು ಮತ್ತು ಎಸ್‍ಪಿ ಅವರನ್ನು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅಮಾನತುಗೊಳಿಸಿದ್ದಾರೆ.

Facebook Comments

Sri Raghav

Admin