ಗುರು ಗೋವಿಂದ್ ಜಯಂತಿ : ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ಶುಭಾಶಯಗಳು

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜ.20- ಸಿಖ್ ಧರ್ಮ ಗುರು ಗೋವಿಂದ್ ಸಿಂಗ್ ಅವರ ಜನ್ಮ ದಿನದ ಪ್ರಯುಕ್ತ ಆಚರಿಸುವ “ಪ್ರಕಾಶ್ ಪೂರಬ್” ಶುಭ ಸಂದರ್ಭದಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಶುಭಾಶಯ ಕೋರಿದರು. ಗುರು ಗೋವಿಂದ್ ಅವರ ಜೀವನವು ಮಾನವೀಯತೆಗೆ  ಸೂರ್ತಿದಾಯಕವಾಗಿದೆ.

ಸಮಾನತೆ ಮತ್ತು ಅಂತರ್ಗತೆಯನ್ನು ಪ್ರಚಾರ ಮಾಡುತ್ತದೆ. ಸಿಖ್ ಧರ್ಮದ 10 ಗುರು, ಒಬ್ಬ ಉತ್ತಮ ಯೋಧ, ಕವಿ, ದಾರ್ಶನಿಕ ಮತ್ತು ಆಧ್ಯಾತ್ಮಿಕ ಗುರುವಾಗಿದ್ದರು ಎಂದರು. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಗುರು ಗೋವಿಂದ್ ಅವರ ಜನ್ಮ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳನ್ನು ಕೋರಿದರು.

ಅವರ ಹೆಸರು, ಧೈರ್ಯ ಮತ್ತು ಸಹಾನುಭೂತಿಯನ್ನು ತೋರಿಸುತ್ತದೆ. ಗುರುವಿನ ಬೋಧನೆಗಳು ಶಾಶ್ವತವಾಗಿದ್ದು, ಪ್ರಸ್ತುತವಾಗಿವೆ. ಮುಂದಿನ ಪೀಳಿಗೆಗೆ ಸೂರ್ತಿದಾಯಕವಾಗಿವೆ ಎಂದು ಟ್ವೀಟ್‍ನಲ್ಲಿ ಹೇಳಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಟ್ವೀಟ್‍ನಲ್ಲಿ ಗುರು ಸಾಹೀಬ್ ಅವರ ಕೃಪೆ ನನ್ನ ಮೇಲೆ ವಿಶೇಷವಾಗಿದೆ.

ಗುರು ಗೋವಿಂದ್ ಸಿಂಗ್ ಅವರ 350ನೇ ಪ್ರಕಾಶ್ ಪೂರಬ್ ಶುಭ ಕಾರ್ಯ ನನ್ನ ಅವಯಲ್ಲಿ ನಡೆದಿರುವುದು ನನ್ನ ಪುಣ್ಯ. ಪಾಟ್ನಾದಲ್ಲಿ ಹಮ್ಮಿಕೊಂಡಿದ್ದ ಆ ಅದ್ಧೂರಿ ಕಾರ್ಯಕ್ರಮ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಸಮಸ್ತ ಸಿಖ್ ಸಮುದಾಯಕ್ಕೆ 10ನೇ ಗುರು ಗೋವಿಂದ್ ಸಿಂಗ್ ಅವರ ಜನ್ಮ ದಿನದ ಶುಭಾಶಯ ಕೋರುತ್ತೇನೆ ಎಂದು ಬರೆದುಕೊಂಡಿದ್ದಾರೆ.

Facebook Comments

Sri Raghav

Admin