705 ಕೋಟಿ ರೂ. ವಂಚನೆ : ಜಿವಿಕೆ ಗ್ರೂಪ್ ಅಧ್ಯಕ್ಷ, ಪುತ್ರನ ವಿರುದ್ಧ ಸಿಬಿಐ ಕೇಸ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜು.2-ಮುಂಬೈ ಇಂಟರ್‍ ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್‍ನಲ್ಲಿ ನಡೆದಿದೆ ಎನ್ನಲಾದ 706 ಕೋಟಿ ರೂ.ಗಳ ಅಕ್ರಮ ಅವ್ಯವಜರಕ್ಕೆ ಸಂಬಂಧಿಸಿದಂತೆ ಜಿವಿಕೆ ಗ್ರೂಪ್ ಆಫ್ ಕಂಪನೀಸ್ ಅಧ್ಯಕ್ಷ ವೆಂಕಟ ಕೃಷ್ನ ರೆಡ್ಡಿ ಗುಣಪತಿ ಮತ್ತು ಅವರ ಪುತ್ರ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಿ.ವಿ. ಸಂಜಯ್ ರೆಡ್ಡಿ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಪ್ರಕರಣ ದಾಖಲಿಸಿಕೊಂಡಿದೆ.

ಮುಂಬೈ ವಿಮಾನ ನಿಲ್ದಾಣದ ಉನ್ನತೀಕರಣ ಮತ್ತು ನಿರ್ವಹಣೆ ವ್ಯವಹಾರದಲ್ಲಿ 700 ಕೋಟಿ ರೂ.ಗಳಿಗೂ ಅಧಿಕ ಹಣ ವಂಚಿಸಿದ ಆರೋಪದ ಸಂಬಂದ ತಂದೆ ಮತ್ತು ಮಗ ಸೇರಿದಂತೆ ಇನ್ನೂ ಕೆಲವರ ವಿರುದ್ಧ ಸಿಬಿಐ ತನಿಖೆ ತೀವ್ರಗೊಳಿಸಿದೆ.

ಜಿವಿಕೆ ಸಮೂಹದ ಅಧ್ಯಕ್ಷ ಗುಣಪತಿ, ಪುತ್ರ ಸಂಜಯ್ ಅವರಲ್ಲದೇ ಮುಂಬೈ ಇಂಟರ್‍ ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ ಮತ್ತು ಭಾರತ ವಿಮಾನನಿಲ್ದಾಣ ಪ್ರಾಧಿಕಾರದ ಉನ್ನತಾಧಿಕಾರಿಗಳೂ ಸಹ ಈ ಹಗರಣದಲ್ಲಿ ಶಾಮೀಲಾಗಿದ್ದು, ತನಿಖೆ ನಂತರ ಹಲವು ಮಂದಿ ಬಂಧಿತರಾಗುವ ಸಾಧ್ಯತೆ ಇದೆ.

Facebook Comments