‘ಪುರುಷೋತ್ತಮ’ನಾಗಿ ಅದೃಷ್ಟ ಪರೀಕ್ಷೆಗಿಳಿದ ಜಿಮ್ ರವಿ, ನಾಳೆ ಚಿತ್ರ ರಿಲೀಸ್

ಈ ಸುದ್ದಿಯನ್ನು ಶೇರ್ ಮಾಡಿ

ಬಹಳ ದಿನಗಳಿಂದ ಸದ್ದು ಮಾಡುತ್ತಲೇ ಬಂದಿರುವ ಜಿಮ್ ರವಿ ಅಭಿನಯದ ಚಿತ್ರ ಪುರುಷೋತ್ತಮ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ . ಇತ್ತೀಚೆಗೆ ಈ ಚಿತ್ರದ ಟ್ರೇಲರ್ಅನ್ನು ನಟ, ನಿರ್ಮಾಪಕ ರಿಷಬ್ ಶೆಟ್ಟಿ ಅವರು ಬಿಡುಗಡೆ ಮಾಡಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು. ನಂತರ ಮಾತನಾಡುತ್ತಾ ಬಾಡಿ ಬಿಲ್ಡರ್ಗಳು ಅಂದರೆ ಫಾರಿನ್ನಲ್ಲಿ ಮಾತ್ರ ಇರುತ್ತಾರೆ ಎಂದು ಚಿಕ್ಕಂದಿನಲ್ಲಿ ತಿಳಿದುಕೊಂಡಿದ್ದ
ರವಿ ಅವರ ಚಿತ್ರಗಳನ್ನು ನೋಡಿ ನಮ್ಮಲ್ಲೂ ಇಂಥವರು ಇದ್ದಾರೆಂದು ಖುಷಿಯಾಗಿದೆ.

ಜಿಮ್ ರವಿ ಅವರ ಎನರ್ಜಿ ನೋಡಿದರೆ ತುಂಬಾ ಸಂತೋಷವಾಗುತ್ತದೆ. ಚಿತ್ರರಂಗದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ನಟನಾಗಬೇಕೆಂದು, ನಾಯಕನಾಗಬೇಕೆಂಬ ಆಸೆ ಇದ್ದೇ ಇರುತ್ತದೆ. ಈ ವಯಸ್ಸಿನಲ್ಲಿ ರವಿ ತಮ್ಮ ಕನಸನ್ನು ಈಡೇರಿಸಿಕೊಳ್ಳುತ್ತಿದ್ದಾರೆ.

ತುಂಬಾ ದೊಡ್ಡ ಪಯಣದಲ್ಲಿ ಇಂತಹ ಸಾಧನೆ ಮಾಡಿದ್ದಾರೆ. ಪುರುಷೋತ್ತಮ ಒಂದು ಸಾಂಸಾರಿಕ ಕಥಾಹಂದರ ಇರುವಂಥ ಚಿತ್ರವಾಗಿದೆ ಎಂದುಕೊಂಡಿದ್ದೇನೆ. ಚಿತ್ರದ ತುಣುಕುಗಳು ತುಂಬಾ ಚೆನ್ನಾಗಿ ಮೂಡಿಬಂದಿವೆ. ನಾನು ಈಗಷ್ಟೇ ಕಾಂತ ಸಿನಿಮಾದ ಶೂಟಿಂಗ್ ಮುಗಿಸಿಕೊಂಡು ಬಂದಿದ್ದೇನೆ.

ಮಾಧ್ಯಮದವರು, ಪ್ರೇಕ್ಷಕರು ಎಲ್ಲರೂ ಇಂತಹ ಸಿನಿಮಾಗೆ ಬೆಂಬಲ ನೀಡಬೇಕು. ಕನ್ನಡ ಚಿತ್ರರಂಗದ ಸುವರ್ಣಯುಗ ಆಗಾಗ ಆಗ್ತಾ ಇರುತ್ತೆ. ಈಗ ಅದು ಇನ್ನೊಂದು ಹಂತಕ್ಕೆ ಹೋಗಿದೆ. ಅದು ಕೆಜಿಎಫ್ ಚಿತ್ರದ ಮೂಲಕ. ಜನ ಹೆಚ್ಚು ಆಸಕ್ತಿಯಿಂದ ಅದನ್ನು ನೋಡುತ್ತಿದ್ದಾರೆ. ಇದಕ್ಕೂ ಅದೇ ರೀತಿ ಚಿತ್ರಮಂದಿರಕ್ಕೆ ಬಂದು ತಂಡಕ್ಕೆ ಆರ್ಶಿವಾದ ನೀಡಬೇಕು ಎಂದು ಹೇಳಿದರು.

ಚಿತ್ರದ ನಾಯಕಿ ಅಪೂರ್ವ ಮಾತನಾಡಿ, ಈ ಚಿತ್ರದ ಚಿತ್ರೀಕರಣದಲ್ಲಿ ಒಳ್ಳೆಯ ಅನುಭವವಾಗಿದೆ. ನನ್ನ ಪಾತ್ರಕ್ಕೆ ಮೂರು ಶೇಡ್ಗಳಿವೆ. ಅಲ್ಲದೆ, ನನ್ನ ಪಾತ್ರಕ್ಕೆ ನಾನೇ ಡಬ್ ಮಾಡಿದ್ದೇನೆ ಎಂದು ಹೇಳಿಕೊಂಡರು. ಕೊನೆಯಲ್ಲಿ ಮಾತನಾಡಿದ ನಾಯಕ ಮತ್ತು ನಿರ್ಮಾಪಕ ಜಿಮ್ ರವಿ, ತಾನು ಬೆಳೆದುಬಂದ ಸಂಕಷ್ಟದ ದಾರಿಗಳನ್ನು ನೆನಪು ಮಾಡಿಕೊಂಡು ಭಾವುಕರಾದರು.

ನಾನು ಇವತ್ತು ಏನೇ ಮಾಡಿದರೂ ಅದಕ್ಕೆ ಕಾರಣ ಹಿರಿಯರ ಆಶೀರ್ವಾದ. ಮಾಧ್ಯಮದವರ ಸಹಕಾರ, ಶೋಷಣೆಗೊಳಗಾದಂಥ ಹೆಣ್ಣನ್ನು ಗಂಡನಾದವನು ಸಾಥ್ ಕೊಟ್ಟು ಯಾವ ರೀತಿ ಕಾಪಾಡುತ್ತಾನೆ. ಬೂಕನಕೆರೆ ರಾಮೇಗೌಡರು ನನಗೆ ನಿಜವಾದ ದೈವದಂತೆ ಎನ್ನಬಹುದು. ಇವತ್ತು ನೀವೆಲ್ಲಾ ಬಂದಿರುವುದು ರವಿಯ ಚಿತ್ರ ಗೆಲ್ಲಿಸಬೇಕು. ಈ ಸಿನಿಮಾ ಗೆದ್ದರೆ ಇಂತಹ ಅನೇಕ ನಿರ್ಮಾಪಕರುಗಳು ಸಿನಿಮಾ ಮಾಡಲು ಮುಂದೆ ಬರುತ್ತಾರೆ.

ನಾನು ನಿರ್ದೇಶಕರೊಂದಿಗೆ ಸೆಟ್ನಲ್ಲಿ ಯಾವಾಗಲೂ ಜಗಳ ಮಾಡುತ್ತಿದ್ದೆ . ಅದಕ್ಕೆ ಕಾರಣ ಚಿತ್ರ ಚೆನ್ನಾಗಿ ಮೂಡಿಬರಲೆಂದು. ಅದರ ಫಲವಾಗಿ ಪ್ರಾಡೆಕ್ಟ್ ಉತ್ತಮವಾಗಿ ಮೂಡಿಬಂದಿದೆ ಎಂದು ಹೇಳಿದರು.ಈ ಚಿತ್ರಕ್ಕೆ ಶ್ರೀಧರ್ ವಿ. ಸಂಭ್ರಮ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಾಹಿತಿ ಪ್ರಮೋದ್ ಮರವಂತೆ, ಸಂಕಲನಕಾರ ಅರ್ಜುನ ಕಿಟ್ಟು , ವಿತರಕರಾದ ಸತ್ಯಪ್ರಕಾಶ್ ಮಂಜುನಾಥ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗಿ ಯಾಗಿದ್ದರು.

Facebook Comments

Sri Raghav

Admin