ದಿಢೀರನೆ ಜಿಮ್ ಮಾಡುವುದನ್ನು ನಿಲ್ಲಿಸಿದರೆ ತಪ್ಪಿದ್ದಲ್ಲ ಅಪಾಯ..!

ಈ ಸುದ್ದಿಯನ್ನು ಶೇರ್ ಮಾಡಿ

ಆಕರ್ಷಕ ಮೈಕಟ್ಟು ಹೊಂದುವುದು ಎಲ್ಲರ ಕನಸು. ಆದರೆ ಇದನ್ನು ಆದಷ್ಟು ಬೇಗ ಮಾಡಿ ಕೊಳ್ಳಬೇಕು ಎಂದು ಸ್ಪರ್ಧೆಗಿಳಿದರೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಗ್ಯಾರಂಟಿ. ಜಿಮ್‌ಗೆ ಹೋಗುವುದು ತಪ್ಪಲ್ಲ. ಆದರೆ ದೇಹಾರೋಗ್ಯಕ್ಕೆ ಸಂಬಂಧಿಸಿ ಜಿಮ್‌ಮಾಡುವಾಗ ಕೆಲವೊಂದು ನಿಯಮಗಳನ್ನು ಪಾಲಿಸುವುದು ಕೂಡ ಬಹುಮುಖ್ಯ. ಜತೆಗೆ ಶಿಸ್ತುಬದ್ಧ ಜೀವನ ಕ್ರಮ, ಆಹಾರದಲ್ಲಿ ಕಾಳಜಿಯಂತು ಇರಲೇಬೇಕು.

ನೀವು ನಿರಂತರವಾಗಿ ಜಿಮ್​ಗೆ ಹೋಗುತ್ತಿದ್ದರೆ ನಿಮ್ಮ ದೇಹ ಗಟ್ಟುಮುಟ್ಟಾಗಿ ಶಕ್ತಿಯುತವಾಗಿರುತ್ತದೆ. ಏನಾದರೂ ಜಿಮ್​ಗೆ ಹೋಗುವುದನ್ನು ತಕ್ಷಣ ನಿಲ್ಲಿಸಿದರೆ  ಕೀಲು ನೋವುಗಳು ಕಾಣಿಸುತ್ತದೆ. ಅಲ್ಲದೆ ಕಾಲಕ್ರಮೇಣ ನಿಮ್ಮ ಸ್ನಾಯುವಿನ ಬಲ ಕುಸಿಯಲು ಪ್ರಾರಂಭಿಸುತ್ತದೆ. ಮುಂದೆ ದೌರ್ಬಲ್ಯದ ಸಮಸ್ಯೆ ಬಂದರೂ ಆಶ್ಚರ್ಯವಿಲ್ಲ.

ಅರ್ಧಕ್ಕೆ ಜಿಮ್​ ಮಾಡುವುದನ್ನು ನಿಲ್ಲಿಸಿದರೆ ಹೃದಯದ ರಕ್ತನಾಳದ ಶಕ್ತಿ ಕುಸಿಯುತ್ತದೆ. ಕೆಲ ವಾರಗಳ ಕಾಲ ಆರೋಗ್ಯವಾಗಿದ್ದರೂ ಬಳಿಕ ನಿಮ್ಮ ಶರೀರದ ಶಕ್ತಿ ಕುಂದುತ್ತದೆ. ಜಿಮ್‍ಗೆ ಸೇರುವ ತವಕದಲ್ಲಿ ಅಗತ್ಯಕ್ಕಿಂತ ಹೆಚ್ಚು ವ್ಯಾಯಾಮ ಮಾಡುವುದು ಒಳ್ಳೆಯದಲ್ಲ. ಅಂತೆಯೇ ದೇಹಕ್ಕೆ ವಿಶ್ರಾಂತಿ ಕೂಡ ಅಗತ್ಯ.

ತೂಕ ಇಳಿಸಿಕೊಳ್ಳಲು ಅತ್ಯಾಧುನಿಕ ತಂತ್ರಜ್ಞಾನಗಳೆಂದರೆ ಜಿಮ್‌ಸೌಲಭ್ಯಗಳು. ತೂಕ ಕಡಿಮೆ ಮಾಡಿಕೊಂಡು ಸಮಸ್ಯೆಗಳಿಂದ ದೂರವಿರಬೇಕು, ಜತೆಗೆ ಆಕರ್ಷಕ ಮೈಕಟ್ಟು ಹೊಂದಬೇಕು ಎಂಬ ಆಲೋಚನೆಯೊಂದಿಗೆ ಜಿಮ್‌ನತ್ತ ಮುಖ ಮಾಡುವವರು ಹಲವರಿದ್ದಾರೆ. ಆಧುನಿಕ ಯಾಂತ್ರಿಕ ವೈದ್ಯನಂತೆ ಇರುವ ಜಿಮ್‌ಸದೃಢ ಮೈಕಟ್ಟಿಗೆ ಸಶಕ್ತವಾಗಿದೆಯೇನೋ ನಿಜ. ಆದರೆ ಅತಿಯಾದ ದೇಹದಂಡನೆಯಿಂದ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ ಎಂಬುದು ಅಷ್ಟೇ ಸತ್ಯ.

ಪ್ರಮುಖವಾಗಿ ಆಹಾರದ ಬಗ್ಗೆ ನಿರ್ಲಕ್ಷ್ಯ ತೋರಬಾರದು. ಸಮಯಕ್ಕೆ ಸರಿಯಾಗಿ ದೇಹಕ್ಕೆ ಪೌಷ್ಠಿಕಾಂಶವಿರುವ ಆಹಾರ ಸೇವನೆ ಅಗತ್ಯ. ಇದರೊಂದಿಗೆ ಹಣ್ಣುಗಳ ಸೇವನೆ ಮಾಡಿ. ಜಿಮ್‌ನಲ್ಲಿ ವ್ಯಾಯಾಮ ಮಾಡಿದ ತತ್‌ಕ್ಷಣ ನೀರು ಕುಡಿಯುವುದೂ ಹಿತಕರವಲ್ಲ. ಬ್ರೆಡ್‌, ಕೆಂಪು ಮಾಂಸ ಸೇವನೆಯೂ ಬೇಡ.

ಮೊಳಕೆ ಬರಿಸಿದ ಕಾಳುಗಳನ್ನು ಸೇವಿಸಿದರೆ ದೇಹಾರೋಗ್ಯ ಉತ್ತಮವಾಗುತ್ತದೆ. ಹೆಸರು ಕಾಳು ಸ್ನಾಯ ಬಲವರ್ಧನೆಗೆ ಉತ್ತಮ ಆಹಾರವಾಗಿದೆ. ಆದಷ್ಟು ತಾಜಾ ಹಣ್ಣಿನ ಜ್ಯೂಸ್‌ಕುಡಿಯುವುದು ಹಿತಕರ. ಸಿಹಿ ಗೆಣಸು, ಡ್ರೈಫ್ರುಟ್ಸ್‌, ಆಮ್ಲೆಟ್‌, ಗ್ರೀನ್‌ಟೀ, ಶುಂಠಿ ಟೀ ಜಿಮ್‌ಮಂದಿಗೆ ಬೆಸ್ಟ್‌ಆಹಾರ ಕ್ರಮಗಳಾಗಿವೆ.

ಖಾಲಿ ಹೊಟ್ಟೆಯಲ್ಲಿ ಜಿಮ್ ಮಾಡಲು ಹೋಗದಿರಿ. ತಾಲೀಮಿಗೆ ಹೋಗುವ 30 ನಿಮಿಷಗಳ ಮುನ್ನ ಬಾಳೆ ಹಣ್ಣು, ಬೇಯಿಸಿದ ಆಲುಗಡ್ಡೆ ಅಥವಾ ಚಿಕ್ಕು ತಿಂದರೆ ಉತ್ತಮ. ಜತೆಗೆ ಬಿಸಿ ನೀರು ಕುಡಿಯುವುದು ಮತ್ತೂ ಒಳ್ಳೆಯದು.

ಇನ್ನೊಂದು ಉತ್ತಮ ಉಪಾಯವೆಂದರೆ ಜಿಮ್​ಗೆ ಹೋಗುವ ಬದಲು ದಿನನಿತ್ಯ ನಾವೇ ವ್ಯಾಯಾಮದಲ್ಲಿ ತೊಡಗಿಕೊಂಡರೆ ಸೂಕ್ತ ಮತ್ತು ಸುರಕ್ಷಿತ ಎಂದು ತಜ್ಞರು ತಿಳಿಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ