ಹೆಚ್‍ಒನ್‍ಬಿ ವೀಸಾಗೆ ಮರು ಅರ್ಜಿ ಸಲ್ಲಿಸಲು ಅವಕಾಶ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್,ಜೂ.24-ಭಾರತೀಯ ಐಟಿ ಉದ್ಯಮಿಗಳು ಸೇರಿದಂತೆ ವಿದೇಶಿ ಅತಿಥಿ ಉದ್ಯೋಗಸ್ಥರಿಗೆ ಅವಶ್ಯಕತೆ ಇರುವ ಹೆಚ್‍ಒನ್‍ಬಿ ವೀಸಾಗೆ ಮರು ಅರ್ಜಿ ಸಲ್ಲಿಸಲು ಅಮೆರಿಕಾ ಅವಕಾಶ ಮಾಡಿಕೊಟ್ಟಿದೆ.  ಆಯಾ ಕ್ಷೇತ್ರಗಳಲ್ಲಿ ಅಪಾರ ಅನುಭವ ಹೊಂದಿರುವ ಹಾಗೂ ನುರಿತ ತಜ್ಞರನ್ನು ಅಮೆರಿಕಾದ ಹಲವಾರು ಸಂಸ್ಥೆಗಳು ಭಾರತ ಮತ್ತು ಚೀನಾ ಸೇರಿದಂತೆ ವಿದೇಶಿಗಳಿಂದ ಪ್ರತಿವರ್ಷ ಕೈತುಂಬ ಸಂಬಳ ನೀಡಿ ನೂರಾರು ಉದ್ಯೋಗಿಗಳಿಗೆ ಮಣೆ ಹಾಕುತ್ತಿವೆ.

ಹೀಗಾಗಿ ಅಮೆರಿಕಾಕ್ಕೆ ತೆರಳಿ ಕೆಲಸ ಮಾಡಲು ಭಾರತೀಯ ಐಟಿ ಉದ್ಯೋಗಿಗಳು ತುದಿಗಾಲಲ್ಲಿ ನಿಂತಿದ್ದು ಅಮೆರಿಕಾಕ್ಕೆ ತೆರಳಲು ಹೆಚ್‍ಒನ್‍ಬಿ ವೀಸಾಗೆ ಅಪ್ಲೈ ಮಾಡಿದ್ದರು. ಆದರೆ, ಅವಶ್ಯಕತೆ ಪೂರ್ಣಗೊಂಡ ಹಿನ್ನಲೆಯಲ್ಲಿ ಹಲವಾರು ಹೆಚ್‍ಒನ್‍ಬಿ ವೀಸಾ ಅರ್ಜಿಗಳು ತಿರಸ್ಕøತಗೊಂಡಿದ್ದವು. ಇದೀಗ ಮತ್ತೆ ಅಮೆರಿಕಾ ಹೆಚ್‍ಒನ್‍ಬಿ ವೀಸಾ ಅವಶ್ಯಕತೆ ಇರುವವರು ಮರು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿಕೊಟ್ಟಿದೆ.

Facebook Comments