24 ವರ್ಷಗಳ ಬಳಿಕ ರಾಜ್ಯಸಭೆಗೆ ದೇವೇಗೌಡರ ಪ್ರವೇಶ, ಕನ್ನಡದಲ್ಲಿ ಪ್ರಮಾಣವಚನ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.20-ರಾಜ್ಯಸಭೆಯ ನೂತನ ಸದಸ್ಯರಾದ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ದೇಶದ ಅತ್ಯಂತ ಹಿರಿಯ ನಾಯಕರಲ್ಲಿ ಒಬ್ಬರಾದ ಗೌಡರು 24 ವರ್ಷಗಳ ಬಳಿಕ ಸಂಸತ್ತಿನ ಮೇಲ್ಮನೆ ಸದಸ್ಯರಾಗಿದ್ದಾರೆ.

ಸಂಸತ್ತಿನ ಮುಂಗಾರು ಅವೇಶನದ ಏಳನೆ ದಿನದ ಕಲಾಪ ಇಂದು ಸಮಾವೇಶಗೊಳ್ಳುತ್ತಿದ್ದಂತೆ ಬೆಳಗ್ಗೆ 9 ಗಂಟೆಗೆ ರಾಜ್ಯಸಭೆಯಲ್ಲಿ ದೇವೇಗೌಡರು ಮೇಲ್ಮನೆ ಸದಸ್ಯರಾಗಿ ಕನ್ನಡದಲ್ಲಿಪ್ರಮಾಣವಚನ ಸ್ವೀಕಾರ ಮಾಡಿದರು. ಸಭಾಪತಿ ಡಾ. ಎಂ. ವೆಂಕಯ್ಯನಾಯ್ಡು ಪ್ರಮಾಣವಚನ ಬೋಸಿದರು.

ಅವೇಶನದ ಅವ ಕಡಿಮೆ ಇರುವ ಕಾರಣ ಇದೇ ಮೊದಲ ಬಾರಿಗೆ ಭಾನುವಾರವೂ ರಾಜ್ಯಸಭೆ ನಡೆಯಿತು. ಜೆಡಿಎಸ್ ಪರಮೋಚ್ಛ ನಾಯಕರು ಮೇಲ್ಮನೆ ನೂತನ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿ ಎರಡು ಕೈಗಳನ್ನು ಜೋಡಿಸಿ ಸಭಾಪೀಠಕ್ಕೆ ವಂದಿಸಿದರು.

ದೇವೇಗೌಡರ ರಾಜ್ಯಸಭೆ ಸೇರ್ಪಡೆಗೆ ಸಂತಸ ವ್ಯಕ್ತಪಡಿಸಿದ ಉಪ ರಾಷ್ಟ್ರಪತಿಯೂ ಆದ ಸಭಾಪತಿ ವೆಂಕಯ್ಯನಾಯ್ಡು, ಗೌಡರು ದೇಶದ ಅತ್ಯಂತ ಹಿರಿಯ ನಾಯಕರಲ್ಲಿ ಒಬ್ಬರು. ನಮ್ಮ ಸದನಕ್ಕೆ (ರಾಜ್ಯಸಭೆಗೆ) ಅವರ ಸೇರ್ಪಡೆ ತುಂಬಾ ಸಂತಸದ ಸಂಗತಿ ಮತ್ತು ಅತ್ಯುತ್ತಮವಾದುದು ಎಂದು ಬಣ್ಣಿಸಿದರು.

ರಾಜ್ಯಸಭೆಯಲ್ಲಿ ತೆರವಾದ ನಾಲ್ಕು ಸ್ಥಾನಗಳಿಗಾಗಿ ಜೂನ್ 12ರಂದು ನಡೆದ ದ್ವೈವಾರ್ಷಿಕ ಚುನಾವಣೆಯಲ್ಲಿ 87 ವರ್ಷದ ದೇವೇಗೌಡರು ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಬೆಂಬಲದೊಂದಿಗೆ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದರು.

ಸಂಸತ್ತಿನ ಮೇಲ್ಮನೆಗೆ ನೂತನವಾಗಿ ಆಯ್ಕೆಯಾದ 61 ಸದಸ್ಯರಲ್ಲಿ 45 ಮಂದಿ ಜುಲೈ 22ರಂದು ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅದರೆ, ಅನಾರೋಗ್ಯ ಮತ್ತು ಹಿರಿಯ ನಾಗರಿಕರ ಪ್ರಮಾಣಕ್ಕೆ ಕೋವಿಡ್-19 ನಿರ್ಬಂಧಗಳು ಇದ್ದ ಕಾರಣ ಗೌಡರು ದೆಹಲಿಗೆ ತೆರಳಲು ಸಾಧ್ಯವಾಗಿರಲಿಲ್ಲ.

ವೈದ್ಯರ ಸಲಹೆ ಮೇರೆಗೆ ಮಾಜಿ ಪ್ರಧಾನಿ ಆಗ ಪ್ರಮಾಣವಚನ ಸಮಾರಂಭಕ್ಕೆ ಗೈರಾಗಿ, ಸಂಸತ್ತಿನ ಮುಂಗಾರು ಅವೇಶನದಲ್ಲಿ ಪ್ರಮಾಣವಚನ ಸ್ವೀಕರಿಸಲು ನಿರ್ಧರಿಸಿದ್ದರು. ಗೌಡರು ನಿನ್ನೆ ರಾತ್ರಿಯೇ ದೆಹಲಿ ತಲುಪಿದರು. ದೇವೇಗೌಡರು 24 ವರ್ಷಗಳ ಬಳಿಕ ಎರಡನೆ ಬಾರಿ ರಾಜ್ಯಸಭೆ ಸದಸ್ಯರಾಗುತ್ತಿದ್ದಾರೆ. 1996ರ ಜೂನ್‍ನಿಂದ 1997ರ ಏಪ್ರಿಲ್‍ವರೆಗೆ ಪ್ರಧಾನಮಂತ್ರಿಯಾಗಿದ್ದ ವೇಳೆ ಅವರು ಮೇಲ್ಮನೆಗೆ ಆಯ್ಕೆಯಾಗಿದ್ದರು.

Facebook Comments

Sri Raghav

Admin