‘ನನ್ನಂಥವರಿಗೆ ಡಾ. ರಾಜ್ ಸ್ಫೂರ್ತಿ’ : ಹೆಚ್.ಡಿ.ಕುಮಾರಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಏ.12-ನನ್ನಂಥವರು ವರನಟ ಡಾ. ರಾಜ್ ಅವರ ಸಿನಿಮಾಗಳನ್ನು ನೋಡಿ ಸ್ಫೂರ್ತಿಗೊಂಡಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ‌.ಡಾ. ರಾಜ್ ಕುಮಾರ್ ಜಗತ್ತು ಕಂಡ ಮೇರು ನಟರಾಗಿದ್ದರು ಎಂದು ಟ್ವಿಟರ್ ನಲ್ಲಿ ಅವರು ತಿಳಿಸಿದ್ದಾರೆ.

ಕನ್ನಡ ಸಿನಮಾ ಲೋಕದ ಉತ್ತುಂಗದ ಸ್ಟಾರ್ ಅಷ್ಟೇ ಅಲ್ಲ. ತಮ್ಮ ನಾಡು ನುಡಿಯ ಬಗ್ಗೆ ಅದಮ್ಯ ಕಾಳಜಿ ಇಟ್ಟುಕೊಂಡಿದ್ದ ಹೋರಾಟಗಾರ ಎಂದು ಹೇಳಿದ್ದಾರೆ.

ತಮ್ಮ ಅಭಿನಯ ಮತ್ತು ಬದುಕು ಎರಡರ ಮೂಲಕವೂ ಸಾಂಸ್ಕೃತಿಕ ಬದಲಾವಣೆ ತಂದಿದ್ದ, ಮಹಾನ್ ಸಾಮರ್ಥ್ಯ ಹೊಂದಿದ್ದ ಅನನ್ಯ ವ್ಯಕ್ತಿತ್ವ ಅವರದಾಗಿತ್ತು. ಅವರ ಬದುಕು ಅನುಕರಣೀಯ. ಅವರ ಪುಣ್ಯ ಸ್ಮರಣೆಯ ಈ ದಿನ ಅವರನ್ನು ಪ್ರೀತಿಯಿಂದ ಸ್ಮರಿಸಿಕೊಳ್ಳೋಣ ಎಂದಿದ್ದಾರೆ.

Facebook Comments

Sri Raghav

Admin