ಹಾಸನ ಜಿಲ್ಲೆ ಕೊರೊನಾ ಅನುದಾನಕ್ಕೆ ಸಿಎಂಗೆ ರೇವಣ್ಣ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.15-ಹಾಸನ ಜಿಲ್ಲೆಯಲ್ಲಿ ಕೊರೊನಾ ಸಂಕಷ್ಟಕ್ಕಾಗಿ ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಂಮತ್ರಿ ಬಿ.ಎಸ್. ಯಡಿಯೂರಪ್ಪ ಅವರಲ್ಲಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಮನವಿ ಮಾಡಿದರು. ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಹೆಚ್.ಡಿ.ರೇವಣ್ಣ, ಸರ್ಕಾರ ಪ್ರತಿ ತಾಲೂಕಿಗೆ ಕೊರೊನಾಕ್ಕಾಗಿ ಕೇವಲ 2 ಲಕ್ಷ ರೂ ಅನುದಾನ ನೀಡಿದೆ.

ಬಡವರು, ನಿರ್ಗತಿಕರಿಗೆ ಒಂದು ದಿನದ ಊಟ ನೀಡಲು ಸಹ ಈ ಹಣ‌ ಸಾಕಾಗುವುದಿಲ್ಲ. ಹೀಗಾಗಿ ಹೆಚ್ಚಿನ ಅನುದಾನದ ಅವಶ್ಯಕತೆ ಇದೆ‌. ಎಸ್‌ಡಿಆರ್‌ಎಫ್‌ನಲ್ಲಿರುವ ಅನುದಾನ ಬಳಕೆಗೆ ಸರ್ಕಾರ ಮಾರ್ಗಸೂಚಿ ಹೊರಡಿಸಬೇಕು ಎಂದು ಒತ್ತಾಯಿಸಿದರು. ಹಾಸನ ಜಿಲ್ಲೆಯಿಂದ ವಲಸೆ ಹೋಗಿದ್ದ ಕಾರ್ಮಿಕರು ಮತ್ತೆ ಜಿಲ್ಲೆಗೆ ಕೊರೊನದಿಂದಾಗಿ ವಾಪಾಸಾಗಿದ್ದಾರೆ.

ಜಿಲ್ಲೆಗೆ ವಾಪಸಾಗಿರುವ ಕಾರ್ಮಿಕರಿಗೆ ಪಡಿತರ ಚೀಟಿಗಳಿಲ್ಲ. ಇಂತಹ ಕುಟುಂಬಗಳಿಗೆ ಪಡಿತರ ಒದಗಿಸಬೇಕು ಎಂದು ಒತ್ತಾಯಿಸಿದರು‌ ಮೆಡಿಕಲ್ ಕಾಲೇಜಿಗೆ ಟೆಸ್ಟ್‌ ಕಿಟ್ ಹಾಗೂ ಪಿಪಿಇ ಕಿಟ್ ಒದಗಿಸಿ.

ಕಬ್ಬು ಬೆಳೆಗಾರರು ಸಂಕಷ್ಟದಲ್ಲಿದ್ದು, ಪ್ರತಿ ಎಕರೆಗೆ 50ಸಾವಿರ ರೂ ಪರಿಹಾರ ನೀಡಬೇಕು. ಆಲೂಗಡ್ಡೆ ಬಿತ್ತನೆ ಬೀಜದ ಅವಶ್ಯಕತೆ ಇದೆ. ಜಿಲ್ಲೆಯಲ್ಲಿ 35000
ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗುತ್ತದೆ. ಬಿತ್ತನೆ ಬೀಜ ಹಾಗೂ ಔಷಧಿಗಾಗಿ 55ಕೋಟಿ ಮೀಸಲಿಡಲು ಮನವಿ ಮಾಡಿರುವುದಾಗಿ ರೇವಣ್ಣ ಹೇಳಿದರು.

Facebook Comments

Sri Raghav

Admin