ಕಾರಿನಿಂದ ಕೆಳಗಿಳಿಯದೆ ಮಳೆ ಹಾನಿ ಪ್ರದೇಶಗಳ ವೀಕ್ಷಣೆ ಮಾಡಿದ ರೇವಣ್ಣ..!

ಈ ಸುದ್ದಿಯನ್ನು ಶೇರ್ ಮಾಡಿ

Revannna--01
ಚಿಕ್ಕಮಗಳೂರು,ಜೂ.20- ಕಳೆದ ಒಂದು ವಾರದಿಂದ ಸುರಿದ ಮಳೆಗೆ ಹಾನಿಗೊಂಡಿರುವ ಚಾರ್ಮುಡಿ ಘಾಟ್ ರಸ್ತೆ ವೀಕ್ಷಣೆಗೆ ಆಗಮಿಸಿದ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಕಾರಿನಿಂದ ಇಳಿಯದೇ ವೀಕ್ಷಿಸಿದ ಪ್ರಸಂಗ ನಡೆದಿದೆ. ಮಳೆಯಿಂದಾಗಿ ಸಚಿವರು ಕಾರಿನಲ್ಲೇ ಹಾನಿಗೊಳಗಾದ ರಸ್ತೆಗಳನ್ನು ವೀಕ್ಷಿಸಿದರು. ನಂತರ ಕೊಟ್ಟಿಗೆಹಾರದಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಜೀವ ವೈವಿದ್ಯಮಯ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸುವ ಯೋಜನೆ ಇತ್ತು.

ಸಚಿವರ ಕಾರನ್ನು ಘಾಟ್‍ನಲ್ಲಿ ಹಿಂಬಾಲಿಸಲು ಸಾಧ್ಯವಾಗದೆ ಕೆಲವರು ವಾಪಸ್ ಬಂದರೆ , ರೇವಣ್ಣ ಅವರು ಕಾರಿನಲ್ಲಿಯೇ ಕುಳಿತು ಮಣ್ಣು ಕುಸಿದು ಹಾನಿಗೊಂಡಿರುವ ಪ್ರದೇಶವನ್ನು ವೀಕ್ಷಣೆ ಮಾಡಿ ನಂತರ ಧರ್ಮಸ್ಥಳಕ್ಕೆ ತೆರಳಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧರ್ಮಸ್ಥಳದ ಶಾಂತಿವನ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಲ್ಲಿಗೆ ತೆರಳಿದ ಸಚಿವವರು ಸಿದ್ದರಾಮಯ್ಯನವರ ಯೋಗಕ್ಷೇಮ ವಿಚಾರಿಸಿದರು. ಚಾರ್ಮುಡಿ ಘಾಟ್‍ಗೆ ಭೇಟಿ ನೀಡಿದರೂ ಸ್ಥಳೀಯರ ಸಮಸ್ಯೆಗಳನ್ನು ಆಲಿಸದೇ, ತಮ್ಮನ್ನು ಭೇಟಿ ಮಾಡಲು ಬಂದಿದ್ದ ಮಾಧ್ಯಮದವರಿಗೂ ಸಿಗದೆ ಸಚಿವರು ಹೊರಟು ಹೋಗಿದ್ದರಿಂದ ಟೀಕೆಗೆ ಗುರಿಯಾದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin