ರಾಹುಲ್ ಜೆಡಿಎಸ್‍’ನ್ನು ಬಿಜೆಪಿಯ ಬಿ-ಟೀಂ ಎನ್ನದಿದ್ದರೆ ನಾವು 70 ಗಳಿಸುತ್ತಿದ್ದೆವು : ರೇವಣ್ಣ

ಈ ಸುದ್ದಿಯನ್ನು ಶೇರ್ ಮಾಡಿ

HD-Revanna-Sesstion-1
ಬೆಂಗಳೂರು: ಚನವಣೆ ಪೂರ್ವದಲ್ಲಿ ರಾಹುಲ್ ಗಾಂಧಿ ಅವರು ಜೆಡಿಎಸ್‍ ನ್ನು ಬಿಜೆಪಿಯ ಬಿ-ಟೀಂ ಎಂದು ಕರೆಯದೇ ಇದ್ದರೆ ಜೆಡಿಎಸ್ 70 ಸ್ಥಾನ ಗಳಿಸುತ್ತಿತ್ತು. ಬಿಜೆಪಿ 70 ಸ್ಥಾನ ದಾಟುತ್ತಿರಲಿಲ್ಲ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ. ವಿಧಾನಸಭೆಯ ಚರ್ಚೆ ವೇಳೆ ಮಧ್ಯಪ್ರವೇಶಿಸಿದ ರೇವಣ್ಣ ಅವರು, ಜೆಡಿಎಸ್ ಮತ್ತು ಬಿಜೆಪಿಯ ಸಮ್ಮಿಶ್ರ ಸರ್ಕಾರದ ರಚನೆ ಅವಧಿಯಲ್ಲಿ ಕುಮಾರಸ್ವಾಮಿ ಮಾತು ತಪ್ಪುವುದಿಲ್ಲ ಎಂದು ದೇವೇಗೌಡರ ಬಳಿ ಹೇಳಿ ಬಿಜೆಪಿ ಜೊತೆ ಸರ್ಕಾರ ರಚಿಸಿದರು. ಅದು ಬೇರೆ ವಿಷಯ.

ಚುನಾವಣೆಗೆ ಮುನ್ನ ಹಾಸನದಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಜೆಡಿಎಸ್ ಬಿಜೆಪಿಯ ಬಿ-ಟೀಂ ಇದ್ದಂತೆ ಹೇಳಿದ್ದರು. ಅದರ ಪರಿಣಾಮ ನಮಗೆ 30 ಸ್ಥಾನಗಳು ಕಡಿಮೆಯಾದವು. ಬಿಜೆಪಿ 110 ಸ್ಥಾನ ಗಳಿಸಲು ಆ ಹೇಳಿಕೆಗೆ ಕಾರಣ. ಬಿಜೆಪಿ ಗೆದ್ದಿರುವ ಸ್ಥಾನಗಳಲ್ಲಿ 30 ಕ್ಷೇತ್ರಗಳ್ಲಲಿ ಜೆಡಿಎಸ್ ಗೆಲ್ಲಬೇಕಿತ್ತು. ರಾಹುಲ್ ಹೇಳಿಕೆಯಿಂದ ನಾವು ಸೋಲು ಕಂಡೆವು. ಇಲ್ಲವಾಗಿದ್ದರೆ ಜೆಡಿಎಸ್ 70 ಸ್ಥಾನಗಳನ್ನು ಗೆಲ್ಲುತ್ತಿತ್ತು. ಬಿಜೆಪಿ 70 ಸ್ಥಾನಕ್ಕೆ ನಿಲ್ಲುತ್ತಿತ್ತು ಎಂದು ಹೇಳಿದರು.

ಆಗ ಮಧ್ಯಪ್ರವೇಶಿಸಿದ ಬಿಜೆಪಿಯ ಬಸವರಾಜ್ ಬೊಮ್ಮಾಯಿ ಅವರು ರಾಹುಲ್ ಗಾಂಧಿ ಅವರ ಹೇಳಿಕೆ ಸತ್ಯವೋ ಸುಳ್ಳೋ ಎಂಬುದನ್ನು ಸ್ಪಷ್ಟಪಡಿಸಿ ಎಂದರು. ಬಿಜೆಪಿ ಇನ್ನೊಬ್ಬ ಸದಸ್ಯ ಅರವಿಂದಲಿಂಬಾವಳಿ, ರೇವಣ್ಣ ಮಾತು ಆರಂಭಿಸುವ ಮುನ್ನವೇಸತ್ಯ ಹೇಳುತ್ತೇನೆ ಎಂದಿದ್ದಾರೆ. ಹಾಗಾಗಿ ಅವರು ಹೇಳಿರುವುದೆಲ್ಲ ಸತ್ಯ ಎಂದರು. ರಾಹುಲ್ ಗಾಂಧಿ ಆ ರೀತಿ ಹೇಳಿಕೆ ನೀಡಿದ್ದರಿಂದ ಜೆಡಿಎಸ್ 38 ಸ್ಥಾನ ಗೆದ್ದಿದೆ. ಇಲ್ಲದಿದ್ದೆ ಇನ್ನು ಕಡಿಮೆ ಕ್ಷೇತ್ರಗಳ್ಲಲಿ ಗೆಲ್ಲುತ್ತಿತ್ತು ಎಂದು ಬಸವರಾಜ್ ಬೊಮ್ಮಾಯಿ ಹೇಳಿದರು.

ಮಧ್ಯಪ್ರವೇಶಿಸಿದ ರಮೇಶ್‍ಕುಮಾರ್ ಅವರು , ರಾಹುಲ್ ಹೇಳಿಕೆಯಿಂದ ಜೆಡಿಎಸ್ -ಬಿಜೆಪಿ ಇಬ್ಬರಿಗೂ ಲಾಭವಾಗಿದೆ. ನೀವು ಅವರಿಗೆ ಥ್ಯಾಂಕ್ಸ ಹೇಳಿ, ನಾವು ರಾಹುಲ್‍ಗೆ ಥ್ಯಾಂಕ್ಸ್ ಹೇಳುತ್ತೇವೆ ಎಂದು ಚರ್ಚೆಗೆ ತೆರೆ ಎಳೆದರು. ನಂತರ ಮಾತನಾಡಲು ಎದ್ದು ನಿಂತ ಯಡಿಯೂರಪ್ಪನವರಿಗೆ ರಮೇಶ್‍ಕುಮಾರ್ ಅವರು, ರೇವಣ್ಣ ಅವರಿಗೆ ನಿಮ್ಮ ಮೇಲೆ ಅಪಾರ ಕಾಳಜಿ ಎಂದು ಹಾಸ್ಯ ಚಟಾಕಿ ಹಾರಿಸಿದರು. ನೀವು ಈ ಮೊದಲಿನ ಉದ್ವೇಗವನ್ನು ಮರೆತು ನಗಲು ಆರಂಭೀಸಿದ್ದೀರಿ. ನಗುತ್ತಾ ಇರಿ. ನಗು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಿ ಯಡಿಯೂರಪ್ಪ ಅವರಿಗೆ ರಮೇಶ್‍ಕುಮಾರ್ ಸಲಹೆ ನೀಡಿದರು.

Facebook Comments

Sri Raghav

Admin