ನಾನು ಮಂತ್ರಿಯಾಗಲೇಬೇಕು ಎಂದೇನು ಇಲ್ಲ : ಹೆಚ್.ಡಿ ರೇವಣ್ಣ

ಈ ಸುದ್ದಿಯನ್ನು ಶೇರ್ ಮಾಡಿ

ಅರಸೀಕೆರೆ, ಡಿ.2-ನಾನು ಮಂತ್ರಿಯಾಗಲೇಬೇಕು ಎಂದೇನು ಇಲ್ಲ ನಮ್ಮ ಪಕ್ಷ ಅಧಿಕಾರಕ್ಕೆ ಬಂದು ಶಾಸಕ ಕೆ.ಎಂ ಶಿವಲಿಂಗೇಗೌಡರನ್ನು ಮಂತ್ರಿ ಮಾಡುವುದಾದರೆ ನನ್ನದೇನೂ ಅಭ್ಯಂತರವಿಲ್ಲ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ತಿಳಿಸಿದರು.

ಶಾಸಕ ಕೆ.ಎಂ ಶಿವಲಿಂಗೇಗೌಡ ತೋಟದ ಮನೆಯಲ್ಲಿ ಎಂಎಲ್‍ಸಿ ಚುನಾವಣೆ ನಿಮಿತ್ತ ಗ್ರಾಮ ಪಂಚಾಯಿತಿ ಸದಸ್ಯರಿಗಾಗಿ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ವರಿಷ್ಟ ಹೆಚ್.ಡಿ ದೇವೇಗೌಡರಿಗೆ ನಾನು ಮತ್ತು ಶಿವಲಿಂಗೇಗೌಡರ ನಡುವೆ ಯಾವುದೇ ಬೇದ-ಭಾವವಿಲ್ಲ, ಇಬ್ಬರು ನನ್ನ ಮಕ್ಕಳೆ ಎಂಬ ಮನೋಭಾವ ಅವರದ್ದಾಗಿದೆ ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಿ ಅಲ್ಪಸಂಖ್ಯಾತರಿಗೆ ಶೇ.4ರಷ್ಟು ಮೀಸಲಾತಿಯಲ್ಲಿ ಕಲ್ಪಿಸಿದ್ದು ದೇವೇಗೌಡರು ಮುಖ್ಯಮಂತ್ರಿಯಾದ ನಂತರ ಎಸ್‍ಸಿ , ಎಸ್‍ಟಿ ಎಲ್ಲಾ ಸಮಾಜದ ಜನರು ಇಂದು ಗ್ರಾಪಂ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಅಧಿಕಾರ ನಡೆಸುತ್ತಿದ್ದಾರೆ ಎಂದರೆ ಅದು ದೇವೇಗೌಡರ ಕೊಡುಗೆ, ದೇಶದಲ್ಲಿ ಪ್ರಥಮ ಭಾರಿಗೆ ಉಚಿತ ಪಡಿತರ ನೀಡಿದ್ದು ಜೆಡಿಎಸ್ ಸರ್ಕಾರ ಎಂದು ಹೇಳಿದರು.

ಜೆಡಿಎಸ್ ಬಿಜೆಪಿಯ ಬಿ ಟಿಮ್ ಎಂದು ಹೇಳುತ್ತಿದ್ದ ಸಿದ್ಧರಾಮಯ್ಯನವರು ಯಾರ ಮನೆ ಬಾಗಿಲಿಗೆ ಬಂದು ಕುಮಾರಣ್ಣನನ್ನು 5ವರ್ಷ ಮುಖ್ಯಮಂತ್ರಿಯನ್ನಾಗಿ ಮಾಡುತ್ತೀವಿ ಎಂದು ಭರವಸೆ ಕೊಟ್ಟು ಆ ನಂತರ ಏನೇನು ಮಾಡಿದರು ಎಂಬುದು ಜನತೆಗೆ ಗೊತ್ತಿದೆ. 2 ರಾಷ್ಟ್ರೀಯ ಪಕ್ಷಗಳು ಸೇರಿ ದೇವೇಗೌಡರನ್ನು ಕುತಂತ್ರದಿಂದ ಸೋಲಿಸಿದರು.

ಇಂದು ದೇಶದಲ್ಲಿ ಕಾಂಗ್ರೆಸ್ ಜನರಿಂದ ತಿರಸ್ಕøತವಾಗುತ್ತಿದೆ. ಬಿಜೆಪಿಯ ಯಡಯೂರಪ್ಪ ಪರಿಷತ್ ಚುನಾವಣೆಗೆ ಜೆಡಿಎಸ್ ಬೆಂಬಲ ಕೋರುವ ಮಟ್ಟಕ್ಕೆ ಬಂದಿದೆ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಕಂಕಣ ಬದ್ಧವಾಗಿದ್ದು ಪರಿಷತ್ ಚುನಾವಣೆಯಲ್ಲಿ ಸೂರಜ್ ರೇವಣ್ಣ ಅವರನ್ನು ಅಧಿಕ ಬಹುಮತದಿಂದ ಗೆಲ್ಲಿಸಿ ನಿಮ್ಮಗಳ ಸೇವೆ ಮಾಡಲು ಅವಕಾಶ ಕಲ್ಪಿಸುವಂತೆ ವಿನಂತಿಸಿದರು.

ಶಾಸಕ ಕೆ.ಎಂ ಶಿಲಿಂಗೇಗೌಡ ಮಾತನಾಡಿ, ನಾನು ಗಂಡಸಿ ಕ್ಷೇತ್ರದಲ್ಲಿ ಕೇವಲ 17ಮತಗಳಿಂದ ಸೋತು ಕ್ಷೇತ್ರವೇ ಇಲ್ಲದಂತಾಗಿದ್ದ ನನಗೆ ರಾಜಕೀಯ ಮರುಜನ್ಮ ನೀಡಿದ್ದು ಅರಸೀಕೆರೆ ಕ್ಷೇತ್ರದ ಮತದಾರರು , ನಾನು ಗಂಡಸಿ ಕ್ಷೇತ್ರದಲ್ಲಿ ಮಾಡಿದ ಕೆಲಸಗಳನ್ನೆ ಗಣನೆಗೆ ತೆಗೆದುಕೊಂಡು 34ಸಾವಿರಕ್ಕೂ ಅಕ ಮತಗಳಿಂದ ಆಯ್ಕೆ ಮಾಡಿದರೂ ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದ್ದ ಕ್ಷೇತ್ರದಲ್ಲಿ ನಾನು ಶಾಸಕನಾದ ನಂತರ ಈ ಮತದಾರರ ಋಣ ತೀರಿಸಲು ಹಗಲು ರಾತ್ರಿ ಎನ್ನದೆ ಮಂತ್ರಿ ಮಹೋದಯರ ಕೈ-ಕಾಲುಗಳನ್ನು ಕಟ್ಟಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಮಾಡಿದ್ದು ಈಗ ರಾಜ್ಯದಲ್ಲೆ ಮಾದರಿ ಕ್ಷೇತ್ರವಾಗುವತ್ತ ದಾಪುಗಾಲಿಟ್ಟಿದ್ದು ಇದಕ್ಕೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಆಶೀರ್ವಾದ ಎದರು.

ಮಾಜಿ ಸಚಿವ ಹೆಚ್.ಡಿ. ರೇವಣ್ಣನವರ ಸಹಕಾರ ಬಹಳಷ್ಟಿದ್ದು ಈಗ ಮೇಲ್ಮನೆ ಚುನಾವಣೆಯಲ್ಲಿ ಸ್ರ್ಪಧಿಸಿರುವ ಸೂರಜ್ ರೇವಣ್ಣ ಬಹಳ ದೈವ ಭಕ್ತರೆಂದು ನಾನು ಕೇಳಿದ್ದು ನಮ್ಮ ಕ್ಷೇತ್ರದಲ್ಲಿ ಹತ್ತಾರು ದೇವಾಲಗಳು ನಿರ್ಮಾಣಕ್ಕೆ ಹಣದ ಕೊರತೆಯನ್ನು ಅನುಭವಿಸುತ್ತಿದ್ದು ನೀವು ಗೆದ್ದ ನಂತರ ನಿಮ್ಮ ಅನುದಾನದಲ್ಲಿ ಆ ದೇವಾಲಯಗಳಿಗೆ ಹಣ ಸಹಾಯ ಮಾಡಬೇಕೆಂದ ಅವರು ಸೂರಜ್ ರೇವಣ್ಣ ಅವರನ್ನು 34 ಗ್ರಾಪಂಗಳ ಎಲ್ಲಾ ಸದಸ್ಯರು ಒಟ್ಟಾಗಿ ಬೆಂಬಲಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ತಮ್ಮದೆ ಕೊಡುಗೆ ನೀಡಬೇಕು ಎಂದು ಮನವಿ ಮಾಡಿದರು.

ಅಭ್ಯರ್ಥಿ ಸೂರಜ್ ರೇವಣ್ಣ ಮಾತನಾಡಿ, ಜಿಲ್ಲೆಯಲ್ಲಿ ಅಭಿವೃದ್ಧಿ ಹರಿಕಾರರಿದ್ದಾರೆ ಎಂದರೆ ಶಾಸಕ ಕೆ.ಎಂ ಶಿವಲಿಂಗೇಗೌಡರು, ಪಕ್ಷ ಅಧಿಕಾರದಲ್ಲಿರಲಿ ಇಲ್ಲದಿರಲಿ ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ಅಡೆತಡೆ ಇಲ್ಲ ಯಾರೇ ಮುಖ್ಯಮಂತ್ರಿಯಾಗಲೀ ಕ್ಷೇತ್ರಕ್ಕೆ ಆಗಬೇಕಾದ ಅಭಿವೃದ್ಧಿ ಕಾರ್ಯಗಳನ್ನು ತಂದು ಸರ್ವಾಂಗೀಯ ಅಭಿವೃದ್ಧಿ ಮಾಡಿದ್ದಾರೆ ಎಲ್ಲಾ ಜಾತಿ ಜನಾಂಗಗಳಿಗೂ ಅಧಿಕಾರ ನೀಡಿ ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಮಾಡಿದ್ದು ಇಂತಹ ಹಿರಿಯರ ಮಾರ್ಗದರ್ಶನದಲ್ಲಿ ನಾನು ನಿಮ್ಮಗಳ ಸೇವೆ ಮಾಡಲು ಸಿದ್ಧನಿದ್ದು ನನಗೆ ಮತ ನೀಡುವ ಮೂಲಕ ಹೆಚ್ಚಿನ ಬಹುಮತದಿಂದ ಆಯ್ಕೆಯಾಗಲು ಆಶೀರ್ವಾದ ನೀಡಬೇಕು ಎಂದು ವಿನಂತಿಸಿದರು.

ಸಭೆಯಲ್ಲಿ ಭವಾನಿ ರೇವಣ್ಣ,ಜಿಪಂ ಮಾಜಿ ಉಪಾಧ್ಯಕ್ಷ ಬಿಳಿ ಚೌಡಯ್ಯ, ಜಿಪಂ ಅಧ್ಯಕ್ಷ ಹುಚ್ಚೇಗೌಡ , ಹೆಚ್‍ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಬಂಡಿಗೌಡರ ರಾಜಣ್ಣ , ಜೆಡಿಎಸ್ ಮುಖಂಡ ಅಡವಿ ಸ್ವಾಮಿ , ಧರ್ಮಶೇಖರ್ , ಸಮೀವುಲ್ಲಾ, ಮುರುಂಡಿ ಶಿವಯ್ಯ, ನಗರಸಭಾ ಉಪಾಧ್ಯಕ್ಷ ಕಾಂತರಾಜ್ , ಸದಸ್ಯರಾದ ಗಣೇಶ್, ಪುಟ್ಟಸ್ವಾಮಿ ಇನ್ನಿತರರು ಇದ್ದರು.

Facebook Comments