ಶಕ್ತಿ ದೇವತೆ ಚಾಮುಂಡೇಶ್ವರಿ ಮೊರೆಹೋದ ಸಚಿವ ಎಚ್.ಡಿ.ರೇವಣ್ಣ..! ಉಳಿಯುತ್ತಾ ಸರ್ಕಾರ..?

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಜು.12-ದೇವರು ಕೊಟ್ಟಿರುವ ಸರ್ಕಾರಕ್ಕೆ ಏನು ಆಗಲ್ಲ ಎಂದು ಸಚಿವ ಎಚ್.ಡಿ.ರೇವಣ್ಣ ಆತ್ಮವಿಶ್ವಾಸದಿಂದ ನುಡಿದರು. ಎರಡನೇ ಆಷಾಢ ಶುಕ್ರವಾರದ ಅಂಗವಾಗಿ ಚಾಮುಂಡಿ ಬೆಟ್ಟಕ್ಕೆಆಗಮಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ದೇವರ ಆಶೀರ್ವ್ದಾ ಇರುವವರೆಗೂ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರುತ್ತಾರೆ. ಚಾಮುಂಡೇಶ್ವರಿಯ ಅನುಗ್ರಹ ಕುಮಾರಸ್ವಾಮಿಯವರ ಮೇಲಿದೆ. ಹಾಗಾಗಿ ಸದ್ಯಕ್ಕೆ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದರು.

ಕುಮಾರಸ್ವಾಮಿಗೆ ಸರ್ಕಾರದ ಅವಶ್ಯಕತೆ ಇಲ್ಲ. ಆದರೆ ರಾಜ್ಯದ ಜನತೆಗೆ ಕುಮಾರಸ್ವಾಮಿ ಅವರ ಅವಶ್ಯಕತೆ ಇದೆ. ಇಂದು ಸಹ ಸರ್ಕಾರಕ್ಕೆ ಏನೂ ಆ ಗಲ್ಲ ಎಂದು ರೇವಣ್ಣ ತಿಳಿಸಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ರೇವಣ್ಣ, ಸಾ.ರಾ.ಮಹೇಶ್ ಬಿಜೆಪಿ ನಾಯಕರನ್ನು ಭೇಟಿ ಮಾಡಿದ ವಿಚಾರ ನನಗೆ ಗೊತ್ತಿಲ್ಲ. ಬಿಜೆಪಿ ಜತೆ ಅಧಿಕಾರ ಹಂಚಿಕೊಳ್ಳುವ ಬೆಳವಣಿಗೆ ಸದ್ಯಕ್ಕಿಲ್ಲ. ಅಧಿವೇಶನ ಸುಸೂತ್ರವಾಗಿ ನಡೆಯಲಿದೆ ಎಂದರು.

ಚಾಮುಂಡೇಶ್ವರಿ ದರ್ಶನಕ್ಕೆ ಭಕ್ತರ ದಂಡು :  ಮೈಸೂರು, ಜು.12-ಎರಡನೇ ಆಷಾಢ ಶುಕ್ರವಾರದ ಪ್ರಯುಕ್ತ ನಗರ ಸಮೀಪದ ಚಾಮುಂಡಿ ಬೆಟ್ಟಕ್ಕೆ ದೇವಿ ದರ್ಶನಕ್ಕೆ ಜನ ಸಾಗರವೇ ಹರಿದುಬಂದಿದೆ. ಮುಂಜಾನೆ 5 ಗಂಟೆಯಿಂದ ಭಕ್ತಾದಿಗಳಿಗೆ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ದೇವಿಗೆ ಶೇಷಲಕ್ಷ್ಮಿ ಅಲಂಕಾರವನ್ನು ಮಾಡಲಾಗಿತ್ತು.

ಇದಕ್ಕೂ ಮುನ್ನ ಬೆಳಗಿನ ಜಾವ ದೇವಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ವಿವಿಧ ಬಣ್ಣದ ಹೂವುಗಳಿಂದ ಅಲಂಕರಿಸಲಾಗಿತ್ತು. ಅಪಾರ ಸಂಖ್ಯೆಯಲ್ಲಿ ನೆರೆಯುವ ಜನ ಜಂಗುಳಿಯಿಂದಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಚಾಮುಂಡಿ ಬೆಟ್ಟಕ್ಕೆ ತೆರಳಲು ಖಾಸಗಿ ವಾಹನಗಳಿಗೆ ನಿಷೇಧವಿರುವ ಹಿನ್ನೆಲೆಯಲ್ಲಿ ಬೆಳಗ್ಗೆ 3 ಗಂಟೆಯಿಂದಲೇ ಲಲಿತ ಮಹಲ್ ಎಲಿಪ್ಯಾಡ್‍ನಿಂದ ಬಸ್‍ಗಳಲ್ಲಿ ಭಕ್ತರು ಬೆಟ್ಟಕ್ಕೆಹೋಗಲು ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಲಾಗಿತ್ತು. ಚಳಿಯನ್ನೂ ಲೆಕ್ಕಿಸದೆ ದೇವಿ ದರ್ಶನಕ್ಕೆ ಸಹಸ್ರಾರು ಮಂದಿ ಬೆಳ್ಳಂಬೆಳಗ್ಗೆ ತೆರಳಿ ದರ್ಶನ ಪಡೆದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin