ಎಚ್.ಡಿ.ರೇವಣ್ಣ ನಡೆದು ಬಂದ ರಾಜಕೀಯ ಹಾದಿ ಹೇಗಿತ್ತು..?

ಈ ಸುದ್ದಿಯನ್ನು ಶೇರ್ ಮಾಡಿ

WhatsApp Image 2018-06-06 at 2.23.06 PM
ಬೆಂಗಳೂರು. ಜೂ.06 : ಎಚ್.ಡಿ. ರೇವಣ್ಣ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪುತ್ರ ಹಾಗು ಹೊಳೆನರಸೀಪುರ ಶಾಸಕ. ಜೆಡಿಎಸ್ ಪಕ್ಷದ ನಾಯಕರು. ಕಳೆದ ಒಂದೂವರೆ ದಶಕಗಳಿಂದ ಹಾಸನ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ಹಾಲು ಮಹಾಮಂಡಳದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಹರದನಹಳ್ಳಿ ದೇವೇಗೌಡ ರೇವಣ್ಣ @ ಎಚ್.ಡಿ.ರೇವಣ್ಣ. 1957ನೇ ಡಿಸೆಂಬರ್ 17ರಂದು ಜನಿಸಿದ್ದು, ಮೊನ್ನೆ ಮೊನ್ನೆ ತಾನೆ 60ನೇ ಹುಟ್ಟುಹಬ್ಬದ ಜೊತೆಗೆ ಷಷ್ಠಿಪೂರ್ತಿ ಕೂಡಾ ಆಚರಿಸಿಕೊಂಡರು. ಸಾಲಿಗ್ರಾಮದ ಭವಾನಿಯವರು ಬಾಳ ಸಂಗಾತಿಯಾಗಷ್ಟೆಯಲ್ಲದೇ ರಾಜಕೀಯದಲ್ಲಿಯೂ ಕೂಡಾ ಜೊತೆಯಾಗಿ ನಿಂತು ಯಶಸ್ಸಿಗೆ ಶ್ರಮಿಸಿದವರು. ಇವರ ಪ್ರೀತಿಯ ಜೊತ್ಯಕವಾಗಿ ಡಾ.ಸೂರಜ್ ಮತ್ತು ಪ್ರಜ್ವಲ್ ಎಂಬ ಇಬ್ಬರರು ಪುತ್ರರಿದ್ದಾರೆ.

ರಾಜಕೀಯ ಇತಿಹಾಸ:
1994ರಲ್ಲಿ ಮೊದಲ ಬಾರಿಗೆ ಹೊಳೆನರಸೀಪುರ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ರೇವಣ್ಣನವರು 112216 ಮತಗಳನ್ನ ಪಡೆದು ತಮ್ಮ ಪ್ರತಿಸ್ಪರ್ದಿ ಜಿ.ಪುಟ್ಟಸ್ವಾಮಿಗೌಡರ ವಿರುದ್ದ 122 ಮತಗಳ ಅಂತರದಿಂದ ಸೋಲಿಸಿ ಮೊದಲ ಬಾರಿಗೆ ಶಾಸಕರಾದ್ರು. ಬಳಿಕ 1999ರಲ್ಲಿ ನಡೆದ ಚುನಾವಣೆಯಲ್ಲಿ 22187 ಮತಗಳ ಅಂತರದಿಂದ ಪರಾಭವಗೊಂಡ ಹೆಚ್.ಡಿ.ರೇವಣ್ಣ ಪ್ರತಿಸ್ಪರ್ಧಿ ಎ.ದೊಡ್ಡೇಗೌಡರ ವಿರುದ್ದ ಸೋಲುಂಡಿದ್ದರು. ಬಳಿಕ 2004ರಿಂದ ಸತತವಾಗಿ 2004,2008,2013,ಮತ್ತು 2018ರ ಚುನಾವಣೆಯಲ್ಲಿ ನಿರಂತರವಾಗಿ ಗೆಲುವ ಸಾಧಿಸುತ್ತಾ ಬಂದಿರುವ ರೇವಣ್ಣನವರು, 2004ರಲ್ಲಿ ಮತ್ತೆ ಜಿ.ಪುಟ್ಟಸ್ವಾಮಿಯವರ ವಿರುದ್ದ ತೊಡೆತಟ್ಟಿ 32594 ಮತಗಳ ಅಂತರದಿಂದ ಜಯಗಳಿಸಿದ್ರು. ಇನ್ನು 2008ರಲ್ಲಿ ಜಿ.ಪುಟ್ಟಸ್ವಾಮಿಗೌಡರ ಸೊಸೆಯಾದ ಎ.ಅನುಪಮಾಮಹೇಶ್ ವಿರುದ್ದವೂ ಕೂಡಾ ಗೆದ್ದು 3ನೇ ಬಾರಿಗೆ ಶಾಸಕರಾಗಿದ್ದಷ್ಟೆಯಲ್ಲದೇ ಕುಮಾರಸ್ವಾಮಿಯವರ 20-20 ಸರ್ಕಾರದಲ್ಲಿ ಲೋಕೋಪಯೋಗಿ ಮತ್ತು ಇಂಧನ ಸಚಿವರಾಗಿಯೂ ಕೆಲಸ ನಿರ್ವಹಿಸಿದ್ದಾರೆ.

ಅಲ್ಲದೆ 1994 ರಲ್ಲಿ ವಸತಿ ಸಚಿವರಾಗಿ ಸೇವೆ ಸಲ್ಲಿಸಿ ಸಾಕಷ್ಟು ಹೆಸರು ಮಾಡಿದ್ದರು.
2013ರಲ್ಲಿಯೂ ಕೂಡಾ ಮತ್ತೆ ಅನುಪಮಾ ಮಹೇಶ್ ವಿರುದ್ದ 300058 ಮತಗಳ ಅಂತರದಿಂದ ಗೆದ್ದ ಎಚ್.ಡಿ. ರೇವಣ್ಣ ಗೆದ್ದು ಸೋಲಿಲ್ಲದ ಸರದಾರ ಎನಿಸಿಕೊಂಡಿದ್ರು. 2018 ರಲ್ಲಿ ನಡೆದ ಚುನಾವಣೆಯಲ್ಲಿ ಹೊಳೆನರಸೀಪುರ ಕ್ಷೇತ್ರ ಇಡಿ ದೇಶವೇ ಗಮನ ಸೆಳೆಯುವಂತೆ ಮಾಡಿತ್ತು. ಕಾರಣ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಶಿಷ್ಯ ಬಾಗೂರು ಮಂಜೇಗೌಡ ಕಣಕ್ಕಿಳಿದಿದ್ದು. ಆದ್ರೆ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿದ ಮತವನ್ನು ಅಂದರೇ 43689 ಗಳಿಸುವ ಮೂಲಕ ಮತ್ತೆ ಗೆದ್ದು ಬರುವ ಮೂಲಕ ಹೊಳೆನರಸೀಪುರದ ಭದ್ರಕೋಟೆಯನ್ನ ಭದ್ರಪಡಿಸಿಕೊಂಡರು.

ಕಳೆದ ಎರಡುವರೆ ದಶಕಗಳಿಂದಲೂ ಕೂಡಾ ರೇವಣ್ಣ ಕೇವಲ ಹೊಳೆನರಸೀಪುರವನ್ನಷ್ಟೆಯಲ್ಲದೇ ಜಿಲ್ಲೆಯನ್ನು ಅಭಿವೃದ್ದಿ ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಸ್ತೆ, ಇಲಾಖೆಗಳ ಕಟ್ಟಡ, ಶಾಲಾ-ಕಾಲೇಜುಗಳ ಕಟ್ಟಡ, ಕ್ಷೀರಕ್ರಾಂತಿಯಲ್ಲಿ ಊಹಿಸಲಾಗದ ಸಾಧನೆ ಮಾಡಿರುವ ಇವರು ಇಂದು ನಡೆದ ಸಂಪುಟ ದರ್ಜೆಯ ಪ್ರಮಾಣ ವಚನದಲ್ಲಿ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಮತ್ತೆ ಮಂತ್ರಿಯಾಗಿದ್ದಾರೆ.

Facebook Comments

Sri Raghav

Admin