ಮುಕ್ತ ವ್ಯಾಪಾರ ಒಪ್ಪಂದ-ರಫ್ತು ನೀತಿ ಕೈಬಿಡುವಂತೆ ರೇವಣ್ಣ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಅ.26- ಹಾಲು ಉತ್ಪಾದಕರಿಗೆ ಡೈರಿ ಉದ್ಯಮಕ್ಕೆ ಮಾರಕವಾದ (ಆರ್‍ಸಿ ಇ ಪಿ) ಮುಕ್ತ ವ್ಯಾಪಾರ ಒಪ್ಪಂದ ರಫ್ತು ನೀತಿಯನ್ನು ಕೈಬಿಡಬೇಕು ಎಂದು ಮಾಜಿ ಸಚಿವ ಎಚ.ಡಿ.ರೇವಣ್ಣ ಒತ್ತಾಯಿಸಿದರು. ಹಾಸನ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೆಂದ್ರದ ಇಂತಹ ಅವೈಜ್ಞಾನಿಕ ನೀತಿಯ ಕಾರಣ ಲಕ್ಷಾಂತರ ಹಾಲು ಉತ್ಪಾದಕರು ಸಂಕಷ್ಟ ಕ್ಕೆ ಸಿಲುಕಲಿದ್ದಾರೆ ಇಂತಹ ನೀತಿಯನ್ನು ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರ ಕೂಡಲೆ ಸದನ ಕರೆದು ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು, ಹಾಗೂ ನಿಯೋಗದೊಂದಿಗೆ ತೆರಳಿ ಪ್ರಧಾನ ಮಂತ್ರಿ ಅವರಿಗೆ ಮನವರಿಕೆ ಮಾಡಬೇಕು ಎಂದು ಹೇಳಿದರು. ಹಾಲು ಉತ್ಪಾದನೆ ಹಾಗೂ ಮಾರಾಟದಲ್ಲಿ ದೇಶದಲ್ಲಿ ಎರಡನೇ ಸ್ಥಾನದಲ್ಲಿ ಇರುವ ಕರ್ನಾಟಕ ರಾಜ್ಯ 10 ಕೋಟಿಗೂ ಹೆಚ್ಚು ಹಾಲು ಉತ್ಪಾದಕರನ್ನು ಹೊಂದಿದೆ. ಇದನ್ನು ಮರು ಪರಿಶೀಲಿಸಿ ಕ್ರಮಕ್ಕೆ ಮುಂದಾಗಬೇಕು ಇಲ್ಲವಾದಲ್ಲಿ ಹಾಲು ಉತ್ಪಾದಕರು ಹಾಗೂ ಇದನ್ನೆ ನಂಬಿರುವ ಕುಟುಂಬಗಳು ಸಂಕಷ್ಟ ಕ್ಕೆ ಸಿಲುಕಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಲೀಟರ್ ಹಾಲಿಗೆ 26.50: ಈ ಬಾರಿ ಹಾಲು ಒಕ್ಕೂಟ 40 ಕೋಟಿ ಆದಾಯ ಗಳಿಸಿದೆ ಆದ್ದರಿಂದ ಮುಂದಿನ ದಿನದಿಂದ ಹಾಲು ಉತ್ಪಾದಕರುಗೆ ಪ್ರತಿ ಲೀ.ಗೆ 26.50 ರೂ ನೀಡಲು ಒಕ್ಕೂಟ ನಿರ್ಧಾರ ಮಾಡಿದ್ದು ನೆರೆ ಜಿಲ್ಲೆಯಲ್ಲಿ ಇದಕ್ಕೂ ಕಡಿಮೆ ದರವನ್ನು ನಾಡಲಾಗುತ್ತಿದೆ ಎಂದರು. ಹಾಸನದಲ್ಲಿ ಹೊಸ ಡೈರಿ ನಿರ್ಮಾಣ ಪ್ರಗತಿಯಲ್ಲಿದೆ ನಾಲ್ಕೂ ಲಕ್ಷ ಲೀಟರ್ ಸಾಮಥ್ರ್ಯದ 150 ಕೋಟಿ ವೆಚ್ಚದ ಡೈರಿ ಮುಂದಿನ ಮಾರ್ಚ್ ಅಂತ್ಯದ ವೇಳೆಗೆ ಕಾರ್ಯಾರಂಭವಾಗಲಿದೆ ಇದು ದೇಶದಲ್ಲಿಯೇ ಮಾದರಿ ಹಾಗೂ ಮೂರನೆ ಅತಿದೊಡ್ಡ ಡೈರಿ ಎಂಬ ಹೆಗ್ಗಳಿಕೆ ಹೊಂದಿದೆ ಎಂದರು.

ಈಗಾಗಲೇ ಸುಮಾರು 1200 ಸಂಘಗಳಲ್ಲಿ ಎ.ಎಂ.ಸಿ.ಯು ಘಟಕಗಳನ್ನು ಸ್ಥಾಪಿಸಿದ್ದು, ಉಳಿದ 300 ಸಂಘಗಳಲ್ಲಿ ಒಂದು ವರ್ಷದ ಅವಧಿಯೊಳಗೆ ಎಎಂಸಿಯು, ಘಟಕಗಳನ್ನು ಅಳವಡಿಸಿ ಸಂಘಗಳ ವ್ಯವಹಾರಗಳನ್ನು ಪೂರ್ಣವಾಗಿ ಗಣಕೀಕರಣ ಗೊಳಿಸಲಾಗುವುದು, ಒಕ್ಕೂಟದ ಯು.ಹೆಚ್.ಟಿ, ಹಾಲಿನ ಉತ್ಪಾದನಾ ಸಾಮಥ್ರ್ಯವನ್ನು ದಿನವಹಿ 2.0 ಲಕ್ಷ ಲೀಟರ್‍ಗಳಿಂದ 4.0 ಲಕ್ಷ ಲೀಟರ್‍ಗಳಿಗೆ ಹೆಚ್ಚಿಸಲು ಯಂತ್ರೋಪಕರಣಗಳ ಸರಬರಾಜು ಮತ್ತು ಅಳವಡಿಕೆ ಕಾರ್ಯಗಳ ಪ್ರಗತಿಯಲ್ಲಿದ್ದು, ಡಿಸೆಂಬರ್‍ನಲ್ಲಿ ಉತ್ಪಾದನೆ ಪ್ರಾರಂಭಿಸಲಾಗುವುದು,
ಒಕ್ಕೂಟದ ಉದ್ದೇಶಿತ ಪ್ರತಿ ಗಂಟೆಗೆ 30000 ಪೆಟï ಬಾಟಲ್‍ನಲ್ಲಿ ಸುವಾಸಿತ ಹಾಲನ್ನು ಉತ್ಪಾದಿಸುವ ಘಟಕ ನಿರ್ಮಾಣ ಕಾರ್ಯದ ಪ್ರಗತಿಯಲ್ಲಿದ್ದು, ಮಾರ್ಚ-2020ರ ವೇಳೆಗೆ ಉತ್ಪಾದನಾ ಕಾರ್ಯ ಪ್ರಾರಂಭಿಸಲು ಉದ್ದೇಶಿಸಲಾಗಿದೆ ಎಂದು ರೇವಣ್ಣ ವಿವರಿಸಿದರು.

Facebook Comments