ಎಚ್.ಎಲ್.ನಾಗರಾಜ್ ವರ್ಗಾವಣೆ ಹಿಂದೆ‌ ಎಚ್ಆರ್ ಪಿ ತನಿಖೆ ಕಾರಣ…!!

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ; ಹೇಮಾವತಿ‌ ಜಲಾಶಯ ಯೋಜನೆ ಅಕ್ರಮ ಭೂಮಿ ಮಂಜೂರಾತಿ ವಿಚಾರವಾಗಿ ಎಸಿ ಎಚ್.ಎಲ್.ನಾಗರಾಜ್ ಅಧ್ಯಕ್ಷತೆಯಲ್ಲಿ ತನಿಖೆ ನಡೆಸಿ ಜಿಲ್ಲಾಧಿಕಾರಿಗೆ ವರದಿ ನೀಡಿದ್ದರು ಇದೇ ಅವರ ವರ್ಗಾವಣೆ ಗೆ ಕಾರಣ‌ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಆರೋಪಿಸಿದರು.

ನಗರದ‌ ಪ್ರವಾಸಿಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಮಾವತಿ ಜಲಾಶಯ ಭೂಮಿ ಮಂಜೂರಾತಿ ಅಕ್ರಮದ ಕುರಿತು ಪ್ರಕರಣವನ್ನು ಸಂಪೂರ್ಣವಾಗಿ ಪ್ರಮಾಣಿಕ ತನಿಖೆ ಮಾಡಿದ ನಾಗರಾಜ್‌ ಅವರನ್ನು ಸರ್ಕಾರ ‌ವರ್ಗಾವಣೆಯ ಉಡುಗೊರೆ‌‌ ನೀಡಿರುವುದು ಎಷ್ಟು ಸರಿ… ಅವರನ್ನು ಅಪರ‌ ಜಿಲ್ಲಾಧಿಕಾರಿ ಯಾಗಿ ಸಹ ಹೆಚ್ಚುವರಿ ಜವಾಬ್ದಾರಿ ನೀಡಲಾಗಿತ್ತು ಜಿಲ್ಲೆಯಲ್ಲಿ ಉತ್ತಮ ಅಧಿಕಾರಿ ಎಂದೆ ಹೆಸರು ಪಡೆದಿದ್ದ ಪ್ರಮಾಣಿಕ‌‌ರು ಆದರೆ ಸರ್ಕಾರದ‌ ಈ ಕ್ರಮ ಸರಿಯಲ್ಲಾ ಎಂದು ಜರಿದರು.

ವರದಿ ಬಳಿಕ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಲು ಜಿಲ್ಲಾಧಿಕಾರಿ ಸೂಚನೆ‌ ನೀಡಿದ್ದಾರೆ. 414 ಕಡತ ಅಕ್ರಮ ಮಂಜೂರಾತಿಯಾಗಿದೆ‌ ಹಾಗೂ 1654 ಎಕರೆ ಭೂ ಅಕ್ರಮ ನಡೆದಿದೆ ಎಂದು ನಾಗರಾಜ್ ವರದಿ ನೀಡಿದ್ದರು.

# ವರ್ಗಾವಣೆ ರದ್ದತಿಗೆ ಆಗ್ರಹ;
ಪ್ರಮಾಣಿಕ ಅಧಿಕಾರಿ ಎಚ್.ಎಲ್.ನಾಗರಾಜ್ ವರ್ಗಾವಣೆ‌ ರದ್ದುಗೊಳಿಸುವಂತೆ ಸಿಎಂ ಯಡಿಯೂರಪ್ಪ ಅವರನ್ನು ಒತ್ತಾಯಿಸಿದ ರೇವಣ್ಣ ಹಾಸನಾಂಬ ಜಾತ್ರೆಗೆ ಕೇವಲ ಒಂದು ದಿನ‌ ಇರುವಾಗ ವರ್ಗಾವಣೆ ಮಾಡಿರುವುದು ಸರಿಯಲ್ಲಾ..ಹಾಗೂ ಎಚ್ ಆರ್‌ಪಿ ಹಗರಣ ತನಿಖೆ ವರದಿ ಬಳಿಕ ಇಂತಹ ಕ್ರಮ ದುರಾಡಳಿತಕ್ಕೆ ಸಾಕ್ಷಿ ಎಂದು ಆರೋಪಿಸಿದರು.

# ಹೆಸರಿಗೆ ಬೇಡಬೇಕೆ…??
ಹಾಸನಾಂಬ ಜಾತ್ರಾ ಮಹೋತ್ಸವ ದ ಆಹ್ವಾನ‌ ಪತ್ರಿಕೆಯಲ್ಲಿ ನೂತನ‌ ಸಂಸದರಾದ ಪ್ರಜ್ವಲ್‌ ರೇವಣ್ಣ ಅವರ ಹೆಸರು‌‌ ಕೈಬಿಟ್ಟಿರುವುದು ಸರಿಯಾದ ಕ್ರಮವಲ್ಲಾ.
ಪ್ರೋಟೋಕಾಲ್ ಪ್ರಕಾರ ಅವರ ಹೆಸರು ಹಾಕುವುದು ಕ್ರಮ.. ಆದರೆ ಹೆಸರನ್ನು ಮುದ್ರಿಸಲೇಬೇಕು ಎಂದು ಯಾರನ್ನೂ ನಾನು ಬೇಡುವುದಿಲ್ಲಾ‌ ಎಂದರು.

Facebook Comments

Sri Raghav

Admin