ಸಚಿವರಾಗುವ ನಿರೀಕ್ಷೆಯಲ್ಲಿದ್ದ ವಿಶ್ವನಾಥ್ ಅವರಿಗೆ ಹೈಕೋರ್ಟ್ ಬಿಗ್‍ ಶಾಕ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು.ನ30 ಸಚಿವರಾಗುವ ಹಂಬಲದಲ್ಲಿದ್ದ ಹೆಚ್ ವಿಶ್ವನಾಥ್ ಅವರಿಗೆ ತೀವ್ರ ಹಿನ್ನಡೆಯಾಗಿದೆ, ಹೆಚ್ ವಿಶ್ವನಾಥ್ ಅವರು ಅನರ್ಹರಾಗಿದ್ದಾರೆಂದು ಹೈಕೋರ್ಟ್ ವಿಭಾಗೀಯ ಪೀಠ ಮಧ್ಯಂತರ ಆದೇಶ ನೀಡಿದೆ , ಸಂವಿಧಾನದ ಆರ್ಟಿಕಲ್ 164(1ಬಿ) 361 ಬಿಅಡಿ ಅನರ್ಹ ಎಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ. ನ್ಯಾ, ಎನ್ ಎಸ್ ವಿಶ್ವಜಿತ್ ಶೆಟ್ಟಿ ಅವರ ಪೀಠ ಆದೇಶಿಸಿದೆ.

ಆದರೆ ರಾಜ್ಯಪಾಲರಿಗೆ ಈ ಸಂಬಂಧ ನಿರ್ದೇಶನ ನೀಡಲು ನಕಾರ ವ್ಯಕ್ತಪಡಿಸಿದೆ, ರಾಜ್ಯಪಾಲರು ಸಂವಿಧಾನಬದ್ದವಾಗಿ ಸಚಿವರನ್ನು ಮಿಸಬೇಕು,ಮುಖ್ಯಮಂತ್ರಿ ಕೂಡ ಸಂವಿಧಾನದಡಿ ನೇಮಕ ಗೊಂಡಿದ್ದಾರೆ, ವಿಶ್ವನಾಥ್ ಶಿಫಾರಸ್ಸಿಗೂ ಮುನ್ನಾ ಅನರ್ಹತೆಯನ್ನು ಪರಿಗಣಿಸಬೆಕೆಂದು ಸೂಚಿಸಿದೆ.

ಸಂವಿಧಾನದಡಿ ಮರು ಆಯ್ಕೆಯಾಗದೆ ಹಿನ್ನಲೆಯಲ್ಲಿ ಸಚಿವ ಸ್ಥಾನ ನೀಡದಂತೆ ಹೈ ಕೋರ್ಟ ತನ್ನ ಆದೇಶದಲ್ಲಿ ತಿಳಿಸಿದೆ ಅದೇರಿತಿ ಆರ್ ಶಂಕರ್ ಹಾಗೂ ಎಂ,ಟಿ,ಬಿ ನಾಗರಾಜ್ ಅವರು ಮರು ಆಯ್ಕೆಯಾಗಿರುವುದರಿಂದ ಅವರು ಅನರ್ಹರಲ್ಲ ಎಂದು ಹೇಳಿರುವುದರಿಂದ ಅವರಿಗೆ ಬಿಗ್ ರಿಲೀಫ್ ಸಿಕ್ಕಾಂತಾಗಿದೆ.

Facebook Comments