ರಾಜ್ಯ ರಾಜಕಾರಣದಲ್ಲಿ ಮತ್ತೆ CD ಸದ್ದು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.14- ರಾಜ್ಯ ರಾಜಕಾರಣ ದಲ್ಲಿ ಭಾರೀ ವಿವಾದ ಸೃಷ್ಟಿಸಿರುವ ಸಿಡಿ ಮತ್ತೆ ಸದ್ದುಮಾಡಿದೆ. ಸಂಕ್ರಾಂತಿ ಹಬ್ಬದ ನಂತರ ಸಿಡಿ ಬ್ಲಾಸ್ಟ್ (ಸಿಡಿಯುವುದು) ಆಗುವುದು ಖಚಿತ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಮತ್ತೆ ಬಾಂಬ್ ಸಿಡಿಸಿದ್ದಾರೆ. ರಾಯಚೂರಿನಲ್ಲಿ ಈ ಬಗ್ಗೆ ಮಾತನಾಡಿ ರುವ ಅವರು, ಸಂಕ್ರಾಂತಿ ಹಬ್ಬದ ನಂತರ ಮಾಧ್ಯಮಗಳಿಗೆ ಸಿಡಿ ಬಿಡುಗಡೆಯಾಗಲಿದೆ.

ಯಾರು? ಎಲ್ಲಿ? ಹೇಗೆ ಬಿಡುಗಡೆ ಮಾಡು ತ್ತಾರೆಂಬುದನ್ನು ಕಾದು ನೋಡಿ ಎಂದು ಕುತೂಹಲ ಕೆರಳಿಸಿದರು. ಒಬ್ಬೊಬ್ಬರು ಒಂದೊಂದು ಕಡೆ ಸಿಡಿ ಬಿಡುಗಡೆ ಮಾಡಲಿ ದ್ದಾರೆ. ಇದರಲ್ಲಿ ಯಾರಿ ದ್ದಾರೆ, ಏನಿದೆ ಎಂಬುದು ಗೊತ್ತಿಲ್ಲ. ಆದರೆ, ಸಿಡಿ ರಾಜ್ಯ ರಾಜ ಕಾರಣದಲ್ಲಿ ದೊಡ್ಡ ಬದಲಾವಣೆ ತರುವುದು ಖಚಿತ ಎಂದು ಭವಿಷ್ಯ ನುಡಿದರು. ಸಿಡಿ ಬಿಡುಗಡೆ ಆಗುತ್ತದೆ. ಆಗಲೇ ಎಲ್ಲಾ ಗೊತ್ತಾಗುತ್ತದೆ.

ಯತ್ನಾಳ್ ಅಥವಾ ಬೇರೆ ಯಾರೋ ಬಿಡುಗಡೆ ಮಾಡುತ್ತಾರೆ. ಬಿ.ಎಸ್.ಯಡಿಯೂರಪ್ಪ ಬಗ್ಗೆ ಈಗಲೂ ಅಭಿಮಾನವಿದೆ. ಆದರೆ, ಬಿಜೆಪಿ ಸರ್ಕಾರದಲ್ಲಿ ಈಗ ನಡೆಯುತ್ತಿರುವುದು ಸನ್ ಸ್ಟ್ರೋಕ್. ಈ ಹಿಂದೆ ಜನತಾ ಪರಿವಾರ ಸನ್ ಸ್ಟ್ರೋಕ್‍ಗೆ ಒಳಗಾಗಿತ್ತು. ಇದೀಗ ಸನ್ ಸ್ಟ್ರೋಕ್, ಫ್ಯಾಮಿಲಿ ಸ್ಟ್ರೋಕ್‍ನಲ್ಲಿ ಬಿಜೆಪಿ ಹಾಳಾಗುತ್ತಿದೆ. ಕಾಂಗ್ರೆಸ್ ಸಹ ಸನ್‍ಸ್ಟ್ರೋಕ್‍ನಲ್ಲಿ ಹಾಳಾಗಿ ಹೋಗಿದೆ. ವಿಜಯೆಂದ್ರ ಅವರಿಂದ ಈಗ ಬಿಜೆಪಿ ಸನ್ ಸ್ಟ್ರೋಕ್‍ಗೆ ಒಳಗಾಗಿದೆ ಎಂದರು.

ಇದೀಗ ವಿಶ್ವನಾಥ್ ಸಿಡಿ ಬಾಂಬ್ ಸಿಡಿಸಿರು ವುದು ಆಡಳಿತಾರೂಢ ಬಿಜೆಪಿಯಲ್ಲಿ ಯಾರ ಬುಡವನ್ನು ಅಲುಗಾಡಿಸುತ್ತದೆ ಎಂಬುದು ಕುತೂಹಲಕ್ಕೆ ಕಾರಣ ವಾಗಿದೆ. ನಿನ್ನೆಯಷ್ಟೆ ಬಿಜಾಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಕೂಡ ಇದೇ ವಿಷಯ ಪ್ರಸ್ತಾಪಿಸಿದ್ದರು. ಕೆಲವರು ಸಿಡಿ ಇಟ್ಟುಕೊಂಡು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬ್ಲಾಕ್ ಮೇಲ್ ಮಾಡಿದ್ದಾರೆ ಎಂದು ಆರೋಪಿಸಿದ್ದರು.

ಬಿಎಸ್‍ವೈಗೆ ಕೆಲವು ಶಾಸಕರು ಸಿಡಿ ತೋರಿಸಿ ಸಂಪುಟದಲ್ಲಿ ಮಂತ್ರಿ ಮಾಡದಿದ್ದರೆ ಇದನ್ನು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಕ್ಕೆ ಹಾಕುವುದಾಗಿ ಬೆದರಿಕೆ ಹಾಕಿರುವುದರಿಂದ ಬ್ಲಾಕ್‍ಮೇಲರ್‍ಗಳನ್ನು ಸಂಪುಟಕ್ಕೆ ತೆಗೆದುಕೊಂಡಿದ್ದಾರೆ.  ಮಕರ ಸಂಕ್ರಾಂತಿ ಮುಗಿದ ಬಳಿಕ ಸಿಡಿ ಬ್ಲಾಸ್ಟ್ ಆಗಲಿದೆ. ಆಗ ಯಾರ ಬುಡ ಅಲು ಗಾಡಲಿದೆ ಎಂಬುದು ನಿಮಗೆ ಗೊತ್ತಾಗಲಿದೆ ಎಂದು ಯತ್ನಾಳ್ ಬಾಂಬ್ ಸಿಡಿಸಿದ್ದರು.

ಇದಕ್ಕೆ ಇಂದು ತಿರುಗೇಟು ನೀಡಿರುವ ಸಿಎಂ ಯಡಿಯೂರಪ್ಪ, ನಾನು ಯಾವ ಸಿಡಿಗೂ ಹೆದರುವುದೂ ಇಲ್ಲ, ಜಗ್ಗುವುದೂ ಇಲ್ಲ. ಸಿಡಿ ಇಟ್ಟುಕೊಂಡವರು ಅದೇನು ಮಾಡುತ್ತಾರೋ ಮಾಡಲಿ. ಸಾಧ್ಯವಾದರೆ ಮಾಧ್ಯಮಗಳಿಗೂ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.

ಕಳೆದ ಹಲವು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಸಿಡಿ ಒಂದಿಲ್ಲೊಂದು ರೀತಿ ವಿವಾದ ಸೃಷ್ಟಿಸುತ್ತಲೇ ಇದೆ. ಇದು ಯಾರಿಗೆ ಸೇರಿದ್ದು, ಇದರಲ್ಲಿ ಅಂತಹ ರಹಸ್ಯವೇನಿದೆ ಎಂಬುದು ಯಾರಿಗೂ ಕೂಡ ಗೊತ್ತಾಗುತ್ತಿಲ್ಲ. ಒಟ್ಟಿನಲ್ಲಿ ಸಿಡಿ ಬಾಂಬ್ ಮುಂದೆ ಸಿಡಿದು ಯಾರ ಕುರ್ಚಿಗೆ ಮುಳುವಾಗಲಿದೆ, ಇನ್ನ್ಯಾರ ರಾಜಕೀಯ ಭವಿಷ್ಯಕ್ಕೆ ಕಲ್ಲು ಬೀಳಲಿದೆ ಎಂಬುದು ಯಕ್ಷಪ್ರಶ್ನೆಯಾಗಿ ಉಳಿದಿದೆ.

Facebook Comments