ದಸರಾ ಉದ್ಘಾಟನೆಗೆ SMK ಆಯ್ಕೆ, ಹೆಚ್.ವಿಶ್ವನಾಥ್ ಹೇಳಿದ್ದೇನು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಅ.6- ಈ ಬಾರಿಯ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೆ ನಾಡಿನ ಹಿರಿಯ ರಾಜಕೀಯ ಮುತ್ಸದ್ದಿ ಎಸ್.ಎಂ. ಕೃಷ್ಣರನ್ನು ಆಯ್ಕೆ ಮಾಡುವ ಮೂಲಕ ರಾಜ್ಯ ಸರ್ಕಾರ ಹೊಸದೊಂದು ಸಂಪ್ರದಾಯಕ್ಕೆ ನಾಂದಿ ಹಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದುವರೆಗೂ ಸಾಹಿತಿಗಳು, ಸಾಧಕರನ್ನು ಮಾತ್ರ ದಸರಾ ಉದ್ಘಾಟನೆಗೆ ಆಹ್ವಾನಿಸಲಾಗುತ್ತಿತ್ತು. ಆದರೆ ಈ ಬಾರಿ ಸರ್ಕಾರ ಹಿರಿಯ ರಾಜಕೀಯ ಮುತ್ಸದ್ದಿಗೆ ಅವಕಾಶ ನೀಡುವ ಮೂಲಕ ಇದುವರೆಗೂ ರಾಜಕಾರಣಿಗಳ ಬಗ್ಗೆ ಇದ್ದ ಸಮೂಹ ಸನ್ನಿಯನ್ನು ಹೋಗಲಾಡಿಸಿದೆ. ಈ ಬಗ್ಗೆ ನಿರ್ಧಾರ ಕೈಗೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹಾಗೂ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಎಸ್.ಎಂ. ಕೃಷ್ಣರವರು ಕೇವಲ ರಾಜಕಾರಣಿಯಾಗಿರದೇ, ಸಾಂಸ್ಕøತಿಕ ಲೋಕದ ರಾಯಭಾರಿಯಾಗಿದ್ದಾರೆ. ಅವರನ್ನು ಈ ಬಾರಿಯ ದಸರಾ ಉದ್ಘಾಟನೆಗೆ ಆಹ್ವಾನಿಸಿರುವುದು ಉತ್ತಮ ಬೆಳವಣಿಗೆ ಆಗಿದೆ ಎಂದರು.

ದಸರಾಗೆ ಎಸ್.ಎಂ. ಕೃಷ್ಣರ ಆಯ್ಕೆ ಸ್ವಾಗತಾರ್ಹ. ಇವರ ಆಯ್ಕೆ ರಾಜಕೀಯ, ರಾಜಕಾರಣದ ಅಸ್ಪಶ್ಯತೆ ನಿವಾರಣೆಯಾಗಿದೆ. ಇದು ಅತ್ಯಂತ ಸಂತೋಷ ಹಾಗೂ ಹೆಮ್ಮೆಯ ಸಂಗತಿ. ಸಿಎಂ ಬೊಮ್ಮಾಯಿ ಹಾಗೂ ಸೋಮಶೇಖರ್ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.

ಎಸ್.ಎಂ. ಕೃಷ್ಷರವರು ಮುಖ್ಯಮಂತ್ರಿ ಆಗಿದ್ದ ಅವಯಲ್ಲಿ ಸತತ ಮೂರು ವರ್ಷಗಳ ಕಾಲ ಬರಗಾಲ ಎದುರಾಯಿತು. ಡಾ ರಾಜಕುಮಾರ್‍ರನ್ನು ವೀರಪ್ಪನ್ ಅಪಹರಿಸಿದ್ದ. ಮಾಜಿ ಸಚಿವ ನಾಗಪ್ಪನವರ ಹತ್ಯೆಯಾಯಿತು. ಇಂತಹ ಹಲವು ಸಮಸ್ಯೆಗಳ ನಡುವೆಯೂ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಎಸ್ ಎಂ ಕೃಷ್ಣ ಶ್ರಮಿಸಿದ್ದಾರೆ. ಅವರ ಕಾಲದಲ್ಲಿ ಐಟಿಬಿಟಿ ಕ್ಷೇತ್ರದಲ್ಲಿ ಬಹುದೊಡ್ಡ ಬೆಳವಣಿಗೆ ಆಯಿತು.

ಅವರ ಆಡಳಿತಾವಯಲ್ಲಿ ಬೆಂಗಳೂರು ಜಾಗತೀಕವಾಗಿ ಗುರ್ತಿಸಿಕೊಳ್ಳುವಂತಾಯಿತು. ಶಿಸ್ತು ಸಂಯಮಕ್ಕೆ ಹೆಸರಾಗಿರುವ ಕೃಷ್ಣರವರು ಈ ಬಾರಿಯ ದಸರಾ ಉದ್ಘಾಟಿಸುತ್ತಿರುವುದು ದಸರಾಕ್ಕಿರುವ ಮಹತ್ವದಷ್ಟೇ ಕೃಷ್ಣರವರ ಮಹತ್ವವನ್ನು ಸಾರುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

Facebook Comments