ಎಚ್1ಬಿ ವೀಸಾ ವಂಚನೆ ಪ್ರಕರಣದಲ್ಲಿ ನಾಲ್ವರು ಭಾರತೀಯರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಜು.3-ಅಮೆರಿಕದಲ್ಲಿ ಉದ್ಯೋಗಕ್ಕೆ ಅಗತ್ಯವಾದ ಎಚ್1ಬಿ ವೀಸಾಗಳ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎರಡು ಮಾಹಿತಿ ತಂತ್ರಜ್ಞಾನ ಸಂಸ್ಥೆಯ ಭಾರತೀಯ ಮೂಲದ ನಾಲ್ವರು ಅಧಿಕಾರಿಗಳನ್ನು ಬಂಧಿಸಲಾಗಿದೆ.

ತಮ್ಮ ಪ್ರತಿಸ್ಪರ್ಧಿ ಸಂಸ್ಥೆಗಳ ಮೇಲೆ ಅನುಚಿತ ಪ್ರಯೋಜನದ ಲಾಭ ಪಡೆಯುವ ಉದ್ದೇಶದಿಂದ ಈ ನಾಲ್ವರು ಎಚ್1ಬಿ ವೀಸಾಗಳನ್ನು ಅಕ್ರಮವಾಗಿ ಉಪಯೋಗಿಸಿಕೊಂಡು ವಂಚಿಸಿದ ಆರೋಪಗಳಿಗೆ ಗುರಿಯಾಗಿದ್ದಾರೆ ಈ ಹಿನ್ನೆಲೆಯಲ್ಲಿ ಇವರನ್ನು ಬಂಧಿಸಲಾಗಿದೆ ಎಂಧು ಅಮೆರಿಕದ ನ್ಯಾಯಾಂಗ ಇಲಾಖೆ ತಿಳಿಸಿದೆ.

ನ್ಯೂಜೆರ್ಸಿಯಿಂದ ವಿಜಯ್ ಮಾನೆ(39), ವೆಂಕಟರಮಣ ಮನ್ನಾಮ್(47) ಮತ್ತು ಫರ್ನಾಂಡೋ ಸಿಲ್ವಾ(53) ಹಾಗೂ ಕ್ಯಾಲಿಫೋರ್ನಿಯಾದಿಂದ ಸತೀಶ್ ವೇಮೂರಿ(52) ಎಂಬುವನ್ನು ಬಂಧಿಸಲಾಗಿದೆ. ವೀಸಾ ವಂಚನೆ ಎಸಗಲು ಪಿತೂರಿ ನಡೆಸಿದ ಆರೋಪಗಳನ್ನು ಇವರ ಮೇಲೆ ಹೊರೆಸಲಾಗಿದೆ.

ಎಚ್1ಬಿ ವೀಸಾ ವಲಸೆರಹಿತ ವೀಸಾವಾಗಿದ್ದು, ಸೈದ್ಧಾಂತಿಕ ಅಥವಾ ತಾಂತ್ರಿಕ ಪರಿಣಿತಿಯ ವಿಶೇಷ ಉದ್ಯೋಗಗಳಲ್ಲಿ ವಿದೇಶಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಅಮೆರಿಕ ಕಂಪನಿಗಳಿಗೆ ಅವಕಾಶ ನೀಡುತ್ತದೆ.

Facebook Comments