ಹೇರ್ ಸ್ಟ್ರೈಟ್ನಿಂಗ್ ಮಾಡಿಸೋ ಮುನ್ನ ತಪ್ಪದೆ ಈ ಸುದ್ದಿಯನ್ನೊಮ್ಮೆ ಓದಿ..!

ಈ ಸುದ್ದಿಯನ್ನು ಶೇರ್ ಮಾಡಿ

Hair-Stritning
ಮಡಿಕೇರಿ,ಸೆ.2- ವನಿತೆಯರ ಸೌಂದರ್ಯ ಹೆಚ್ಚುಸುವಲ್ಲಿ ಕೇಶ ರಾಶಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಕೆಲವೊಮ್ಮೆ ಸೌಂದಯೋಪಾಸನೆ ದುರಂತದೊಂದಿಗೆ ಅಂತ್ಯವಾಗುವ ಘಟನೆಗಳು ನಡೆಯುತ್ತವೆ. ಇದಕ್ಕೊಂದು ನಿದರ್ಶನ ಕೊಡುಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕೊಟ್ಟಗೇರಿ ನಿವಾಸಿ ನೇಹ ಗಂಗಮ್ಮ(18).

ತಾನು ಮತ್ತಷ್ಟು ಸುಂದರವಾಗಿ ಕಾಣಬೇಕೆಂಬ ಹಂಬಲದಿಂದ ಮೈಸೂರಿನ ಬ್ಯೂಟಿ ಪಾರ್ಲರ್‍ವೊಂದರಲ್ಲಿ ತನ್ನ ಕೇಶ ರಾಶಿಯನ್ನು ಸ್ಟ್ರೈಟ್ನಿಂಗ್(ಗುಂಗುರು ಕೂದಲಿನ ನೀಳಗೊಳಿಸುವಿಕೆ)ಮಾಡಿಸಿಕೊಂಡಿದ್ದಳು. ನಂತರ ಆಕೆಯ ಕೂದಲು ಧಾರಾಕಾರವಾಗಿ ಉದುರಲು ಆರಂಭವಾಗಿದೆ. ಇದರಿಂದ ಆಕೆ ಕಾಲೇಜಿಗೆ ಹೋಗಲು ಹಿಂದೇಟು ಹಾಕುತ್ತಿದ್ದಳು.

Hair

ಪೋಷಕರು ನೇಹಳನ್ನು ಸಮಾಧಾನಗೊಳಿಸಿ ಕಾಲೇಜಿಗೆ ಹೋಗುವಂತೆ ಮನವೊಲಿಸಿದ್ದರು. ಈಕೆ ಮೊದಲ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿಲ್ಲ.
ಆದರೆ ತಲೆಕೂದಲು ಉದುರುವುದು ನಿಲ್ಲದೇ ಸಂಪೂರ್ಣ ಬೋಳಾಗತೊಡಗಿದ್ದರಿಂದ ಆತಂಕಕ್ಕೊಳಗಾಗಿದ್ದಳು. ಕಳೆದ ಒಂದು ವಾರದ ಹಿಂದೆ ಮನೆಬಿಟ್ಟು ಹೋಗಿದ್ದ ನೇಹ ಬಾಳಲೇ ಗ್ರಾಮದ ಲಕ್ಷ್ಮಣತೀರ್ಥ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

Facebook Comments

Sri Raghav

Admin

Comments are closed.