ಗಣಿಗಾರಿಕೆಗೆ ಗ್ರಾ.ಪಂಗಳೇ ಅನುಮತಿ ನೀಡಲು ಮರಳು ನೀತಿಯಲ್ಲಿ ನಿಯಮಗಳನ್ನು ಸರಳೀಕರಣ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.21- ಹಳ್ಳ, ತೊರೆಗಳಲ್ಲಿ ಗಣಿಗಾರಿಕೆ ನಡೆಸಲು ಗ್ರಾಮ ಪಂಚಾಯತ್ ನಿಂದಲೇ ಅನುಮತಿ ನೀಡಲು ಅನುಕೂಲವಾಗುವಂತೆ ಮರಳು ನೀತಿಯಲ್ಲಿ ನಿಯಮಗಳನ್ನು ಸರಳೀಕರಣ ಮಾಡಲಾಗುವುದು ಎಂದು ಭೂ ವಿಜ್ಞಾನ ಮತ್ತು ಗಣಿ ಸಚಿವ ಹಾಲಪ್ಪ ಆಚಾರ್ ತಿಳಿಸಿದ್ದಾರೆ.

ವಿಧಾನ ಪರಿಷತ್ ನಲ್ಲಿ ಎಸ್.ಎಲ್.ಬೋಜೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮುಂದಿನ ಸಂಪುಟದಲ್ಲಿ ಚರ್ಚಿಸಿ ಅನುಮತಿ ನೀಡಲಾಗುವುದು. ಇದರಿಂದ ಗ್ರಾಮೀಣ ಭಾಗದಲ್ಲಿ ಮರಳಿನ ಸಮಸ್ಯೆ ನಿವಾರಣೆಯಾಗವುದಲ್ಲದೆ, ಹಲವಾರು ಗೊಂದಲಗಳಿಗೆ ಪರಿಹಾರ ಸಿಗಲಿದೆ ಎಂದು ಹೇಳಿದರು.

ರಾಜ್ಯದಲ್ಲಿ 45 ದಳ ಲಕ್ಷ ಟನ್ ಮರಳಿನ ಬೇಡಿಕೆ ಇದೆ, 35 ದಶಲಕ್ಷ ಟನ್ ಮಾತ್ರ ಮರಳು ಉತ್ಪಾದನೆಯಾಗುತ್ತಿದೆ. ಕೊರತೆ ಇರುವ 10 ದಶಲಕ್ಷ ಟನ್ ಮರಳು ಉತ್ಪಾದನೆಗೆ ಕಲ್ಲು ಪುಡಿ ಗಣಿಗಾರಿಕೆ ಮತ್ತು ಹಳ್ಳ ತೊರೆಗಳಲ್ಲಿ ಗಣಿಗಾರಿಕೆ ಮಾಡಲು ಅನುಮತಿ ನೀಡಲಾಗಿದೆ ಎಂದರು.

ಕಲ್ಲು ಗಣಿಕಾರಿಕೆಗೆ ಅನುಮತಿ ನೀಡಲು ಜಿಲ್ಲ ಮಟ್ಟದಲ್ಲಿ ಪ್ರಾಧಿಕಾರ ಮಾಡಲಾಗಿದೆ, ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ಗಣಿಗಾರಿಕೆ ಮತ್ತು ಕಲ್ಲುಗಣಿಗಾರಿಕೆಯ ಕ್ರಷರ್ ಗಳ ಅನುಮತಿಯನ್ನು ಪ್ರತ್ಯೇಕಗೊಳಿಸಲಾಗಿದೆ ಎಂದರು.

ಕಾಂಗ್ರೆಸ್ ನ ವೀಣಾ ಅಚ್ಚಯ್ಯ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಕೊಡಗು ಜಿಲ್ಲೆಯಲ್ಲಿ ನಾಲ್ಕು ಕ್ರಷರ್ ಮಾತ್ರ ಇವೆ, ಅವುಗಳಲ್ಲಿ ಎರಡು ಮಾತ್ರ ಸಕ್ರಿಯವಾಗಿವೆ. ಮೂರು ಹೊಸ ಕ್ರಷರ್ ಗೆ ಅವಕಾಶ ನೀಡಲಾಗಿದೆ ಎಂದರು.

ಮರಳು ತೆಗೆಯಲು 17 ನದಿಗಳ ಬ್ಲಾಕ್ ಗಳನ್ನು ಗುರುತಿಸಿದೆ. ಅಲ್ಲಿ 68 ಸಾವಿರ ಟನ್ ಮರಳು ತೆಗೆಯಲು ಅನುಮತಿ ನೀಡಲಾಗಿದೆ. ಬೇರೆ ಬೇರೆ ಜಿಲ್ಲೆಗಳಿಂದ 1.2 ಮೆಟ್ರಿಕ್ ಟನ್ ಎಂ ಸ್ಯಾಂಡ್ ಕೊಡಗಿಗೆ ರವಾನೆ ಮಾಡಲಾಗುತ್ತಿದೆ. ನಿಸರ್ಗದತ್ತ ಮರಳು ತೆಗೆಯಲು ತಿದ್ದುಪಡಿ ಮರಳು ನೀತಿಯಲ್ಲಿ ಬದಲಾವಣೆ ಮಾಡಲಾಗುವುದು ಎಂದು ಹೇಳಿದರು.

Facebook Comments

Sri Raghav

Admin