“ಶೇ.50ರಷ್ಟು ವಯಸ್ಕರಿಗೆ ಕೋವಿಡ್ ಲಸಿಕೆ ನೀಡಲಾಗಿದೆ”

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಡಿ.5-ದೇಶದಲ್ಲಿನ ಶೇ.50ರಷ್ಟು ವಯಸ್ಕರಿಗೆ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವೀಯ ತಿಳಿಸಿದ್ದಾರೆ. ಹರ್ ಘರ್ ದಸ್ತಕ್ ಮತ್ತು ಎಲ್ಲರಿಗೂ ಉಚಿತ ಲಸಿಕೆ ಎಂಬ ಘೋಷವಾಖ್ಯದೊಂದಿಗೆ ಕೇಂದ್ರ ಸರ್ಕಾರ ಕೋವಿಡ್ ಲಸಿಕಾ ಅಭಿಯಾನವನ್ನು ಹಮ್ಮಿಕೊಂಡಿದ್ದು, ದೇಶದಲ್ಲಿ ಯಶಸ್ವಿ ಪ್ರಗತಿ ಸಾಸಿದೆ ಎಂದು ಟ್ವೀಟರ್‍ನಲ್ಲಿ ಅಭಿನಂದನೆ ಹೇಳಿದ್ದಾರೆ.

ಶೇ.50ರಷ್ಟು ಮಂದಿಗೆ ಎರಡು ಡೋಸ್‍ಗಳ ಪೂರ್ಣ ಪ್ರಮಾಣದ ಲಸಿಕೆ ಹಾಕಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಇದು ಹೆಮ್ಮೆಯ ವಿಚಾರ. ಕೋವಿಡ್ ವಿರುದ್ಧದ ಹೋರಾಟದಲ್ಲಿ ಪರಸ್ಪರ ಜೊತೆಯಾಗಿ ಗೆಲವು ಸಾಸಲು ಮುಂದಡಿ ಇಡೋಣ ಎಂದು ಕರೆ ನೀಡಿದ್ದಾರೆ.

ದೇಶದಲ್ಲಿ ಈವರೆಗೆ 127.61 ಡೋಸ್ ಲಸಿಕೆಗಳನ್ನು ನೀಡಲಾಗಿದೆ. ಜನವರಿ 16ರಿಂದ ಆರಂಭಗೊಂಡ ಈ ಲಸಿಕಾ ಅಭಿಯಾನದಲ್ಲಿ ಫೆ.2ರಿಂದ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲಾಯಿತು. ರಕ್ಷಣಾ ಪಡೆಗಳು, ವಿಪ್ಪತ್ತು ನಿರ್ವಹಣಾ ಕಾರ್ಯಕರ್ತರು, ಸ್ಥಳೀಯ ಸಂಸ್ಥೆಗಳ ಕೆಲಸಗಾರರು, ಆರೋಗ್ಯ ಕಾರ್ಯಕರ್ತರಿಗೆ, ವೈದ್ಯರಿಗೆ ಮೊದಲ ಹಂತದ ಲಸಿಕೆ ನೀಡಲಾಯಿತು. ನಂತರ 2ನೇ ಹಂತದಲ್ಲಿ 45 ವರ್ಷ ಮೇಲ್ಪಟ್ಟವರಿಗೆ , 3ನೇ ಹಂತದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಯೋಜನೆ ಆರಂಭವಾಗಿದೆ.

ದೇಶದಲ್ಲಿ ಕೋವ್ಯಾಕ್ಸಿನ್, ಕೋವಿಶೀಲ್ಡ್, ಸ್ಪುಟ್ನಿಕ್-ವಿ, ಮಡೇರ್ನಾ, ಜಾನ್ಸನ್ ಅಂಡ್ ಜಾನ್ಸನ್, ಜುಡೋಸ್ಕಾಡಿಯಾಲ ಲಸಿಕೆಗಳನ್ನು ಕೋವಿಡ್ ನಿರೋಧಕವಾಗಿ ಬಳಕೆ ಮಾಡಲಾಗಿತ್ತು.

Facebook Comments