ನಿರ್ಭಯ ರೇಪಿಸ್ಟ್‌ಗಳನ್ನು ನೇಣುಗಂಬಕ್ಕೇರಿಸುವ ಮೀರತ್ ಹ್ಯಾಂಗ್‍ಮ್ಯಾನ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಡಿ.12- ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದ ವೈದ್ಯಕೀಯ ವಿದ್ಯಾರ್ಥಿನಿ ನಿರ್ಭಯ ಸಾಮೂಹಿಕ ಅತ್ಯಾಚಾರ ಮತ್ತು ಭೀಕರ ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಡಿ.16ರಂದು ಮುಂಜಾನೆ 5 ಗಂಟೆಗೆ ಗಲ್ಲಿಗೇರಿಸುವುದು ಬಹುತೇಕ ಖಚಿತವಾಗಿದೆ.

ಪೈಶಾಚಿಕ ಕೃತ್ಯ ಎಸಗಿದ ಮುಖೇಶ್, ವಿನಯ್, ಅಕ್ಷಯ್ ಮತ್ತು ಪವನ್ ಅವರುಗಳನ್ನು ದೆಹಲಿಯ ಅತಿಭದ್ರತೆಯ ತಿಹಾರ್ ಜೈಲಿನಲ್ಲಿ ನೇಣಿಗೇರಿಸಲಾಗುತ್ತದೆ. ಇದಕ್ಕಾಗಿ ಈಗಿನಿಂದಲೇ ಪೂರ್ವಸಿದ್ಧತೆಗಳು ನಡೆಯುತ್ತಿವೆ. ಪ್ರಸ್ತುತ ತಿಹಾರ್ ಜೈಲಿನಲ್ಲಿ ಅಪರಾಧಿಗಳನ್ನು ನೇಣಿಗೇರಿಸುವ ವ್ಯಕ್ತಿ ಇಲ್ಲ.

ಹೀಗಾಗಿ ಬಕ್ಸಾರ್ ಮತ್ತು ಮೀರತ್ ಜೈಲುಗಳಿಂದ ಹ್ಯಾಂಗ್‍ಮ್ಯಾನ್‍ಗಳನ್ನು ಕಳುಹಿಸುವಂತೆ ತಿಹಾರ್ ಕಾರಾಗೃಹ ಅಧಿಕಾರಿಗಳು ಮನವಿ ಮಾಡಿದರು. ಮೀರತ್ ಬಂದೀಖಾನೆಯ ಹ್ಯಾಂಗ್‍ಮ್ಯಾನ್ ಈ ನಾಲ್ವರು ಅಪರಾಧಿಗಳನ್ನು ನೇಣಿಗೇರಿಸಲಿದ್ದಾರೆ.

Facebook Comments