ಕೊರೋನಾ ಕೆಡುಗಾಲದ ಬೆನ್ನಲ್ಲೇ ಚೀನಾದಲ್ಲಿ ಮತ್ತೊಂದು ಹೊಸ ಡೇಂಜರ್ ವೈರಸ್ ಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ವಿಶ್ವದಾದ್ಯಂತ ಕರೋನ ವೈರಸ್ ತನ್ನ ಭೀಕರತೆಯಿಂದ ಸಾವಿರಾರು ಜನರನ್ನು ಬಲಿಪಡೆದು ಮರಣಮೃದಂಗ ಬಾರಿಸುತ್ತಿರುವಾಗಲೇ ಚೀನಾದಿಂದ ಮತ್ತೊಂದು ಭಯಂಕರ ಸುದ್ದಿ ಹೊರಬಂದಿದೆ. ಕೊರೋನಾ ವೈರಸ್ ತವರು ಚೀನಾದಲ್ಲಿ ಮತ್ತೊಂದು ಭಯಂಕರ ವೈರಸ್ ಜನ್ಮ ತಾಳಿದೆ ಅದರ ಹೆಸರು ಹಾಂಟ್ ವೈರಸ್.

ಹೌದು, ಕೊರೋನಾ ವೈರಸ್ ದಾಳಿಯಿಂದ ಇಡೀ ವಿಶ್ವವೇ ತತ್ತರಿಸಿರುವ ಬೆನ್ನಲ್ಲೇ ಮತ್ತೊಂದು ವೈರಸ್ ಮನುಕುಲವನ್ನೇ ಬೆಚ್ಚಿಬೀಳುವಂತೆ ಮಾಡಿದೆ. ಈಗಾಗಲೇ ಈ ವೈರಸ್ ಗೆ ಚೀನಾದಲ್ಲಿ ಮೊದಲ ಬಲಿಯಾಗಿದ್ದು ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಡೈಲಿ ಗ್ಲೋಬಲ್ ಟೈಮ್ಸ್ ವರದಿ ಪ್ರಕಾರ ಈ ವ್ಯಕ್ತಿ ಬಸ್ಸಿನಲ್ಲಿ ಕೆಲಸಕ್ಕೆಂದು ಪ್ರಯಾಣಿಸುವಾಗ ಮೃತಪಟ್ಟಿದ್ದು ಬಸ್ಸಿನಲ್ಲಿದ್ದ ಇತರರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ವರದಿಯೊಂದರ ಪ್ರಕಾರ ಈ ವೈರಸ್ ವೈರಸ್ ಕೊರೋನಾಗಿಂತ ಹೆಚ್ಚು ಮಾರಕವಾಗಿದ್ದು ಮತ್ತಷ್ಟು ಭಯ ಸೃಷ್ಟಿಸುತ್ತಿದೆ. ಈ ವೈರಸ್ ಗಾಳಿಯ ಮೂಲಕ ಹರಡುವುದಿಲ್ಲ ಆದರೆ ಈ ವೈರಸ್ ಸೋಂಕಿತ ವ್ಯಕ್ತಿಯ ನೇರ ಸಂಪರ್ಕದಿಂದ, ಮೂತ್ರ, ಬಾಯಿಯ ಲಾವಾರಸ ಹಾಗೂ ಕಚ್ಚುವುದರಿಂದ ಹರಡುತ್ತದೆ ಎನ್ನಲಾಗಿದೆ. ಅತಿಯಾದ ಜ್ವರ ಈ ವೈರಸ್ ನ ಸೋಂಕಿನ ಮೊದಲ ಲಕ್ಷಣವಾಗಿದೆ.

ಕರುನಾ ವೈರಸ್ ನಿಂದ ವಿಶ್ವವೇ ತಲ್ಲಣಿಸಿರುವಾಗ ಈ ಹೊಸ ವೈರಸ್ ನ ಸುದ್ದಿ ಜನರಲ್ಲಿ ಮತ್ತಷ್ಟು ಆತಂಕ ಉಂಟುಮಾಡಿದೆ . ಮತ್ತೊಂದು ವರದಿ ಪ್ರಕಾರ ಈ ವೈರಸ್ ಹೊಸದೇನಲ್ಲ ಕೆಲವು ದಶಕಗಳಿಂದ ಮನುಷ್ಯನನ್ನು ಕಾಡುತ್ತಾ ಬಂದಿದೆ. ಈ ವೈರಸ್ ಕುರಿತು ಮತ್ತಷ್ಟು ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

Facebook Comments

Sri Raghav

Admin