ಬೃಹದ್ರೂಪಿ ಏಕಶಿಲಾ ಹನುಮಾನ್ ವಿಗ್ರಹ ಪ್ರತಿಷ್ಟಾಪನೆಗೆ ಭೂಮಿ ಪೂಜೆ

ಈ ಸುದ್ದಿಯನ್ನು ಶೇರ್ ಮಾಡಿ

ಕೆ.ಆರ್.ಪುರ, ಜ.27- ಹನುಮಂತ ವಿಗ್ರಹ ಸ್ಥಾಪನೆಯಿಂದ ಭಾರತಕ್ಕೆ ಶುಭ ಸೂಚಕವಾಗಲಿದೆ ಎಂದು ಉಡುಪಿಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಇಂದಿಲ್ಲಿ ತಿಳಿಸಿದರು.
ಶ್ರೀ ರಾಮ ಚೈತನ್ಯ ವರ್ಧಿನಿ ಟ್ರಸ್ಟ್ ಹಾಗೂ ಬೃಹದ್ರೂಪಿ ಹನುಮ ಚಾರಿಟೇಬಲ್ ಟ್ರಸ್ಟ್ ವತಿಯಿಂದ 63 ಅಡಿ ಏಕಶಿಲಾ ವಿಗ್ರಹ ಬೃಹದ್ರೂಪಿ ಹನುಮಾನ್ ವಿಗ್ರಹ ಪ್ರತಿಷ್ಟಾಪನೆಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

30 ವರ್ಷಗಳ ಹಿಂದೆ ಇಲ್ಲಿ ಕಸಾಯಿಖಾನೆ ನಿರ್ಮಾಣ ವಿರೋಸಿ ಪ್ರತಿಭಟನೆ ಮಾಡಲಾಗಿತ್ತು ಅದರ ಫಲವೇ ಹನುಮಂತ ವಿಗ್ರಹ ಸ್ಥಾಪನೆ ಎಂದು ಹೇಳಿದರು. ಕರ್ನಾಟಕದಲ್ಲಿ ಹನುಮಂತ ಮೂಲ ಸ್ಥಾನದಲ್ಲಿ ನಿರ್ಮಾಣವಾದ ಮೇಲೆ ಅಯೋಧ್ಯೆ ಮೂಲ ಸ್ಥಾನದಲ್ಲಿ ರಾಮ ಮಂದಿರ ನಿರ್ಮಾಣ ವಾಗುತ್ತದೆ ಎಂದು ತಿಳಿಸಿದರು.

ರಾಜ್ಯ ಹಾಗೂ ರಾಷ್ಟ್ರದಲ್ಲಿ ಶ್ರವಣಬೆಳಗೊಳ ಬಿಟ್ಟರೆ ಇದೇ ಬೃಹತ್ ಏಕಶಿಲಾ ವಿಗ್ರಹವಾಗಿದೆ. 65 ಅಡಿಯಿಂದ ಕಲ್ಲು ಬಂಡೆ ಕೆತ್ತನೆ ಮಾಡಿ 63 ಅಡಿಗೆ ತರಲಾಗಿದೆ. ಮೂರು ಪ್ರಮುಖ ಖಾಸಗಿ ಕಂಪನಿ ಗಳು ದೇವಾಲಯ ನಿರ್ಮಾಣಕ್ಕೆ ಕೈಜೋಡಿಸಿವೆ ಎಂದರು. ಮಾಜಿ ಸಚಿವ ಜಾರ್ಜ್ ಮಾತನಾಡಿ, ಧರ್ಮ ಯಾವುದೇ ಇರಲಿ ನಾವು ಶಾಂತಿದೂತರು, 4 6ಗುಂಟೆ ಜಾಗ ದೇವಾಲಯಕ್ಕೆ ನೀಡಲಾಗಿದೆ ಎಂದು ಹೇಳಿದರು.

ಸರ್ವಜ್ಞ ನಗರ ಹೊರತು ಪಡಿಸಿದರೆ ಇಲ್ಲಿ ಮೂಲಭೂತ ಸೌಲಭ್ಯವಿಲ್ಲ ಕಾಲೇಜ್ , ಆಸ್ಪತ್ರೆ , ಕ್ರೀಡಾಂಗಣ , ಸೇರಿದಂತೆ ದೇವಾ ಲಯ ನಿರ್ಮಾಣ ಮಾಡುವ ಮೂಲಕ ಕ್ಷೇತ್ರದ ಜನತೆಗೆ ಮೂಲಭೂತ ಸೌಲಭ್ಯ ಒದಗಿಸ ಲಾಗುವುದು ಎಂದು ಹೇಳಿದರು. ಮಾಜಿ ಸಚಿವ ಆರ್.ಶಂಕರ್ ಮಾತನಾಡಿ, ಹನುಮಂತನ ವಿಗ್ರಹ ಶೀಘ್ರವೇ ಪ್ರತಿಷ್ಟಾಪನೆ ಆಗಿ ಎಲ್ಲರ ದರ್ಶನಕ್ಕೆ ಅನುವು ಮಾಡಿಕೊಟ್ಟು ಪುಣ್ಯ ಫಲಿಸಲಿ ಎಂದು ಹೇಳಿದರು.

ಶಾಸಕ ಬೈರತಿ ಸುರೇಶ್, ಟ್ರಸ್ಟ್‍ನ ಅಧ್ಯಕ್ಷ ಎಂ.ಎನ್.ರೆಡ್ಡಿ, ರಮೇಶ್ ಗೌಡ, ಪಾಲಿಕೆ ಸದಸ್ಯ ಪದ್ಮನಾಭ ರೆಡ್ಡಿ, ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ಮುನಿರಾಜು ಕಾರ್ಣಿಕ್ ಮತ್ತಿತರರಿದ್ದರು.

Facebook Comments

Sri Raghav

Admin