ದೊಡ್ಡಿಗೆ ನುಗ್ಗಿ 15 ಕುರಿ ಬಲಿಪಡೆದ ಚಿರತೆ

ಈ ಸುದ್ದಿಯನ್ನು ಶೇರ್ ಮಾಡಿ

ಹನೂರು, ಜೂ.5-ಕುರಿದೊಡ್ಡಿಗೆ ಚಿರತೆಯೊಂದು ನುಗ್ಗಿ ಮಲಗಿದ್ದ ಕುರಿಗಳ ಮೇಲೆ ದಾಳಿ ಮಾಡಿ 15 ಕುರಿಗಳನ್ನು ತಿಂದುಹಾಕಿರುವ ಘಟನೆ ನಡೆದಿದೆ.
ತಾಲ್ಲೂಕಿನ ರಾಮಪುರ ಹೋಬಳಿ ವ್ಯಾಪ್ತಿಗೆ ಸೇರಿದ ಹನೂರು ಸಮೀಪದ ಬಸವನದೊಡ್ಡಿ ಗ್ರಾಮದ ಶಿವಣ್ಣ ಎಂಬುವರಿಗೆ ಸೇರಿದ 15 ಕುರಿಗಳು ಸಾವನ್ನಪ್ಪಿವೆ.

ಮಧ್ಯರಾತ್ರಿ ಕುರಿದೊಡ್ಡಿಗೆ ನುಗ್ಗಿದ ಚಿರತೆ ದೊಡ್ಡಿಯಲ್ಲಿ ಮಲಗಿದ್ದ ಕುರಿಗಳ ಮೇಲೆ ಏಕಾಏಕಿ ದಾಳಿ ಮಾಡಿ ಅವುಗಳನ್ನು ತಿಂದುಹಾಕಿದೆ.  ಜೀವನೋಪಾಯಕ್ಕಾಗಿ ಕುರಿಗಳನ್ನು ಸಾಕಿದ್ದ ಶಿವಣ್ಣ ಅವರು ಇದೀಗ ಕುರಿಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ಸುದ್ದಿ ತಿಳಿದ ಗ್ರಾಮ ಲೆಕ್ಕಾಧಿಕಾರಿ ರಂಗಸ್ವಾಮಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ