ಈದ್-ಅಲ್-ಅದಾ : ಬಾಂಗ್ಲಾ ದೇಶದ ಜನರಿಗೆ ಮೋದಿ ಶುಭಾಷಯ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಆ.1- ಈದ್ ಉಲ್ ಅಝಾ ಅಂಗವಾಗಿ ಬಾಂಗ್ಲೇಶಕ್ಕೆ ಶುಭಾಷಯ ತಿಳಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಈ ಹಬ್ಬವನ್ನು ಭಾರತದ ಹಲವಾರು ಭಾಗಗಳಲ್ಲೂ ಆಚರಿಸಲಾಗುತ್ತಿದೆ. ಈ ಉತ್ಸವವು ನಮ್ಮ ಆಯಾ ಸಮಾಜಗಳಲ್ಲಿ ಶಾಂತಿ ಮತ್ತು ಸಹಿಷ್ಣುತೆಯ ಮನೋಭಾವ ಇನ್ನಷ್ಟು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.

ಈದ್ ಉಲ್ ಅಜಘರ್ ಸಂದರ್ಭದಲ್ಲಿ, ಜನರಿಗೆ ಮತ್ತು ಬಾಂಗ್ಲಾದೇಶ ಸರ್ಕಾರಕ್ಕೆ ನನ್ನ ಆತ್ಮೀಯ ಶುಭಾಶಯಗಳನ್ನು ತಿಳಿಸಲು ನಾನು ಬಯಸುತ್ತೇನೆ.

ಈ ಉತ್ಸವವು ಉಭಯ ದೇಶಗಳ ನಡುವೆ ಭ್ರಾತೃತ್ವ ಸಂಬಂಧವನ್ನು ಉತ್ತೇಜಿಸುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಕರೋನವೈರಸ್ ಸಂದರ್ಭದಲ್ಲಿ ಪ್ರಧಾನಿ ಶೇಖ್ ಹಸೀನಾ ಅವರ ಸಮರ್ಥ ನಾಯಕತ್ವದಲ್ಲಿ ಬಾಂಗ್ಲಾದೇಶದಲ್ಲಿ ಕೈಗೊಳ್ಳುತ್ತಿರುವ ಕ್ರಮಗಳನ್ನು ಭಾರತ ಶ್ಲಾಘಿಸುತ್ತದೆ ಎಂದು ಶುಭಾಷಯ ಪತ್ರದಲ್ಲಿ ತಿಳಿಸಿದ್ದಾರೆ.

# ಶಾಂತಿ-ಸೌಹಾರ್ದತೆಗೆ ಗಣ್ಯರ ಸಂದೇಶ :
ಈದ್-ಅಲ್-ಅದಾ ಅಥವಾ ಬಕ್ರೀದ್ ಪ್ರಯುಕ್ತ ಮುಸ್ಲಿಂ ಧರ್ಮೀಯರಿಗೆ ರಾಷ್ಟ್ರಪತಿ ರಾಮನಾಥ ಕೋವಿಡ್, ಉಪ ರಾಷ್ಟ್ರಪತಿ ಡಾ. ಎಂ. ವೆಂಕಯ್ಯನಾಯ್ಡು ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯಾತಿಗಣ್ಯರು ಶುಭ ಸಂದೇಶ ನೀಡಿದ್ದಾರೆ.

ಮಾಜಿ ಪ್ರಧಾನಮಂತ್ರಿಗಳಾದ ಎಚ್.ಡಿ.ದೇವೇಗೌಡರು ಮತ್ತು ಡಾ. ಮನಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪಕ್ಷದ ಮುಖಂಡರಾದ ರಾಹುಲ್ ಗಾಂಧಿ, ಗುಲಾಂ ನಬಿ ಅಜಾದ್, ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ಮುಕ್ತಾರ್ ಅಬ್ಬಾಸ್ ನಕ್ವಿ, ಸ್ಮತಿ ಇರಾನಿ, ಪ್ರಹ್ಲಾದ್ ಜೋಷಿ, ಡಿ.ವಿ.ಸದಾನಂದ ಗೌಡ, ಸುರೇಶ್ ಅಂಗಡಿ ಸೇರಿದಂತೆ ಅನೇಕರು ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ದೇಶದಲ್ಲಿ ಶಾಂತಿ, ನೆಮ್ಮದಿ ಮತ್ತು ಸೌಹಾರ್ದ ವಾತಾವರಣ ಸೃಷ್ಟಿಸಲಿ ಎಂದು ಸಂದೇಶದಲ್ಲಿ ತಿಳಿಸಿದ್ದಾರೆ.

ಈದ್‍ಗೆ ಕೊರೊನಾ ಅಡ್ಡಿ : ಕೊರೊನಾ ವೈರಸ್ ಹಾವಳಿಯಿಂದಾಗಿ ಇಂದು ದೇಶದಲ್ಲಿ ಬಕ್ರೀದ್‍ಅನ್ನು ಸರಳವಾಗಿ ಅಚರಿಸಲಾಯಿತು. ಪ್ರಾರ್ಥನೆಗೆ ಸೀಮಿತ ಸಂಖ್ಯೆಯಲ್ಲಿ ಅವಕಾಶ ನೀಡಿ ಸಾಮಾಜಿಕ ಅಂತರ ನಿಯಮವನ್ನು ಕಡ್ಡಾಯಗೊಳಿಸಲಾಗಿತ್ತು. ಜಮ್ಮು-ಕಾಶ್ಮೀರ ಸೇರಿದಂತೆ ವಿವಿಧೆಡೆ ಮುಸ್ಲಿಂ ಬಾಂಧವರು ನಿಯಮಗಳ ಅನುಸಾರ ಬಕ್ರೀದ್ ಆಚರಿಸಿದರು.

Facebook Comments

Sri Raghav

Admin