ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯಕ್ಕೆ ಹಾರ್ದಿಕ್ ಪಾಂಡ್ಯ ಲಭ್ಯ..?

ಈ ಸುದ್ದಿಯನ್ನು ಶೇರ್ ಮಾಡಿ

ದುಬೈ, ಅ. 26- ಕಳೆದ ಭಾನುವಾರ ಪಾಕಿಸ್ತಾನ ವಿರುದ್ಧ ನಡೆದ ವಿಶ್ವಕಪ್ ಚುಟುಕು ಪಂದ್ಯದಲ್ಲಿ ಭಾರತದ ಅಲ್‍ರೌಂಡರ್ ಹಾರ್ದಿಕ್ ಪಾಂಡ್ಯ ರವರ ಭುಜಕ್ಕೆ ಗಾಯವಾಗಿದ್ದರೂ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದ ವೇಳೆಗೆ ಚೇತರಿಸಿಕೊಂಡು ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯ ನಡೆಯಲು ಇನ್ನು 5 ದಿನಗಳಿರುವುದರಿಂದ ಅಷ್ಟರೊಳಗೆ ಹಾರ್ದಿಕ್ ಪಾಂಡ್ಯ ಚೇತರಿಸಿಕೊಳ್ಳಲಿದ್ದಾರೆ ಎಂಬ ಭರವಸೆ ಇದೆ, ಒಂದು ವೇಳೆ ಅವರು ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಳ್ಳದಿದ್ದರೆ ಆಗ ಬೇರೊಬ್ಬ ಆಟಗಾರರ ಬಗ್ಗೆ ಯೋಚಿಸಬಹುದು.
ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆ ಹಾರ್ದಿಕ್ 8 ಎಸೆತಗಳನ್ನು ಎದುರಿಸಿ 11 ರನ್‍ಗಳನ್ನು ಗಳಿಸಿದ್ದರಾದರೂ ಪಾಕ್ ವೇಗಿ ಎಸೆದ ಬೌಲಿಂಗ್‍ನಲ್ಲಿ ಅವರ ಭುಜಕ್ಕೆ ಗಾಯವಾಗಿದೆ.

ಹಾರ್ದಿಕ್ ಪಾಂಡ್ಯ ಭಾರತ ತಂಡದಲ್ಲಿ ಅಲೌಂಡರ್ ಆಗಿ ಗುರುತಿಸಿಕೊಂಡಿದ್ದರೂ ಕೂಡ ಐಪಿಎಲ್‍ನಲ್ಲಿ ಬೌಲಿಂಗ್ ವಿಭಾಗದಿಂದ ದೂರ ಉಳಿದಿದ್ದ ಪಾಂಡ್ಯ ಪಾಕ್ ವಿರುದ್ಧವೂ ಒಂದು ಓವರ್ ಮಾಡದೇ ಇರುವುದರಿಂದ ಆತನ ಸ್ಥಾನದಲ್ಲಿ ಹಾರ್ದಿಕ್‍ನನ್ನು ಕೈಬಿಟ್ಟು ಬೇರೊಬ್ಬ ಆಟಗಾರನಿಗೆ ಸ್ಥಾನ ಕಲ್ಪಿಸಬೇಕೆಂಬ ಕೂಗು ಕೂಡ ಕ್ರಿಕೆಟ್ ಪಂಡಿತರಿಂದ ವ್ಯಕ್ತವಾಗಿದೆ.

Facebook Comments