ರೈತರಿಗೆ 35 ಕೋಟಿ ರೂ.ಬಡ್ಡಿರಹಿತ ಸಾಲ

ಈ ಸುದ್ದಿಯನ್ನು ಶೇರ್ ಮಾಡಿ

ಕೊಳ್ಳೇಗಾಲ,ಜ.11- ಚಾಮರಾಜನಗರ ಜಿಲ್ಲೇಗೆ ಈ ಹಿಂದೆ ನೀಡಿದ್ದ 35 ಕೋಟಿ ರೂ. ರೈತರಿಗೆ ಬಡ್ಡಿರಹಿತ ಸಾಲ ನೀಡುವ ಭರವಸೆಯನ್ನುಈಡೇರಿಸಿದ್ದಾವೆ ಎಂದು ಎಂ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷ ಜಿ.ಡಿ.ಹರೀಶ್‍ಗೌಡ ತಿಳಿಸಿದರು. ಪಟ್ಟಣದಲ್ಲಿ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಹೊಸ ಸದಸ್ಯರಿಗೆ ಕೆ.ಸಿ.ಸಿ ಸಾಲ ವಿತರಣಾ ಕಾರ್ಯಕ್ರಮದಲ್ಲಿ ಸುಮಾರು 182 ರೈತರಿಗೆ 1.77 ಕೋಟಿ ರೂ. ಸಾಲ ವಿತರಿಸಿ ಬಳಿಕ ಮಾತನಾಡಿದ ಅವರು, ರೈತರಿಗೆ 72 ಕೋಟಿ ರೂ. ಸಾಲ ವಿತರಿಸಿ ದಾಖಲೆ ಸಾಧಿಸಿದ್ದಾವೆ ಎಂದರು.

ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 6 ಕೋಟಿ ಸಾಲ ನೀಡಿ ರೈತರ ಸಂಕಷ್ಟದಲ್ಲಿ ನೆರವು ಆಗಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. 402 ಕೋಟಿ ಸಾಲವನ್ನು ಆಗಿದ್ದರೂ ನಾವು ರೈತರಿಗೆ ಸಕಾಲದಲ್ಲಿ ರೈತರ ಬೆಳೆಗೆ ಸಾಲ ನೀಡಿದ್ದೇವೆ ಎಂದರು. ಸರ್ಕಾರ ಹಂತಹಂತವಾಗಿ ನಮ್ಮ ಸಾಲ ಮನ್ನಾ ಬಾಬ್ತು ಹಣ ನೀಡುತ್ತದೆ. ಇನ್ನೂ 200 ಕೋಟಿ ಸರ್ಕಾರದಿಂದ ಬರಬೇಕಾಗಿದೆ. ಆದರೂ ನಾವು ನಮ್ಮ ಬ್ಯಾಂಕಿನಿಂದ ರೈತರಿಗೆ 67 ಕೋಟಿ ಸಾಲ ನೀಡಿ ರೈತರ ಬೆಂಬಲವಾಗಿ ನಮ್ಮ ಬ್ಯಾಂಕ್ ನಿಂತಿದೆ ಎಂದು ತಿಳಿಸಿದರು.

ಎಂ.ಡಿ.ಸಿ.ಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಹನೂರು ಶಾಸಕ ಆರ್.ನರೇಂದ್ರ ಮಾತನಾಡಿ, ಹರೀಶ್ ಗೌಡರು ಬ್ಯಾಂಕ್ ಅಧ್ಯಕ್ಷರಾದ ಮೇಲೆ ಚಾ.ನಗರ ಜಿಲ್ಲೇಗೆ ಸಾಕಷ್ಟು ರೈತರ ಸಾಲಗಳಿಗೆ ಹಣ ಬಿಡುಗಡೆ ಮಾಡಿದ್ದಾರೆ. ಇದಕ್ಕಾಗಿ ಜಿಲ್ಲೇ ಪರವಾಗಿ ಅಭಿನಂದಿಸುತ್ತೇನೆ ಎಂದು ತಿಳಿಸಿದರು. ಬಳಿಕ ಸಂಘದ ವತಿಯಿಂದ ಹರೀಶ್ ಗೌಡರನ್ನು ಸನ್ಮಾನಿಸಿ ಅಭಿನಂದಿಸಿದರು.

ಉಪಾಧ್ಯಕ್ಷ ಸದಾನಂದ, ವಿಕ್ರಮರಾಜ್ ಅರಸ್, ರಮೇಶ್, ಆಪ್ತ ಕಾರ್ಯದರ್ಶಿ ಮಂಜುಗೌಡ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ಉಪಾಧ್ಯಕ್ಷ ಚೈತನ್ಯ, ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಬಿ.ನಾಗರಾಜು, ನಿರ್ದೇಶಕರು, ಸದಸ್ಯರು ಹಾಜರಿದ್ದರು.

Facebook Comments