ಅಂತಾರಾಷ್ಟ್ರೀಯ ಖ್ಯಾತ ವಕೀಲ ಹರೀಶ್ ಸಾಳ್ವೆ ಎಂದರೆ ಭಾರತೀಯರಿಗೆಕಿಷ್ಟು ಗೌರವ..?

ಈ ಸುದ್ದಿಯನ್ನು ಶೇರ್ ಮಾಡಿ

ಅದು 1992, ಅಮೆರಿಕಾದ ಕೆನ್ನಾತ್ ಲೇ ಸಂಸ್ಥಾಪಿಸಿದ ಟೆಕ್ಸಾಸ್‍ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಜಗತ್ತಿನ ಹೆಸರಾಂತ ಕಂಪನಿ ಎನ್ರಾನ್, ಭಾರತ ಸರ್ಕಾರ ಮತ್ತು ಮಹಾರಾಷ್ಟ್ರ ಸರ್ಕಾರಗಳೊಂದಿಗೆ ಒಪ್ಪಂದ ಮಾಡಿ ಕೊಂಡು ಮಹಾರಾಷ್ಟ್ರದ ರತ್ನಗಿರಿ ಜಿಲ್ಲಾಯ ದಾಭೋಲ್‍ನಲ್ಲಿ ಒಂದು ಪವರ್ ಪ್ರಾಜೆಕ್ಟ್ ಗೆ ಕೈ ಹಾಕುತ್ತದೆ. ಆದರೆ ಸ್ಥಳೀಯರ ಭಾರೀ ವಿರೋಧದ ನಡುವೆ ಯೋಜನೆ ಯನ್ನು ಅನಿವಾರ್ಯವಾಗಿ ಕೈಬಿಡಬೇಕಾಗಿಬರುತ್ತದೆ.

ಇದರಿಂದ ಕುಪಿತಗೊಂಡು ಪಿತ್ತ ನೆತ್ತಿಗೇರಿಸಿಕೊಂಡ ಎನ್ರಾನ್ ಕಂಪನಿ ಭಾರತ ಸರ್ಕಾರದ ವಿರುದ್ಧ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಕಂಪನಿಗಾದ ನಷ್ಟ ಭರಿಸುವಂತೆ ದಾವೆ ಹೂಡುತ್ತದೆ. ಆಗ ಅಂದಿನ ಪ್ರಧಾನ ಮಂತ್ರಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರ ಅಂತಾರಾಷ್ಟ್ರೀಯ ಖ್ಯಾತ ವಕೀಲ ಹರೀಶ್ ಸಾಳ್ವೆ ಅವರನ್ನು ಭಾರತ ಸರ್ಕಾರದ ಪರವಾಗಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಕಾಲತು ವಹಿಸುವಂತೆ ನೇಮಕ ಮಾಡಿಕೊಳ್ಳುತ್ತದೆ. ಆದರೆ, ಆಶ್ಚರ್ಯದ ಸಂಗತಿಯೇನೆಂದರೆ ಭಾರತದ ಪ್ರಜೆಯಾದ ಹಾಗೂ ವೃತ್ತಿಯಲ್ಲಿ ವಕೀಲರಾದ ಮತ್ತು ಕಾಂಗ್ರೆಸ್‍ನ ಪ್ರಭಾವಿ ನಾಯಕರಾಗಿದ್ದ ಪಿ.ಚಿದಂಬರಂ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಎನ್ರಾನ್ ಪರ ವಕಾಲತು ವಹಿಸಿ ಭಾರತ ಸರ್ಕಾರದ ವಿರುದ್ಧವೇ ಹೋರಾಡಲು ಒಪ್ಪಿಕೊಳ್ಳುತ್ತಾರೆ.

ದುರಾದೃಷ್ಟವಶಾತ್ 2004ರಲ್ಲಿ ವಾಜಪೇಯಿ ಸರ್ಕಾರದ ಪತನವಾಗಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಡಾಕ್ಟರ್ ಮನಮೋಹನ್ ಸಿಂಗ್ ಪ್ರಧಾನಿಯಾದರೆ, ಪಿ.ಚಿದಂಬರಂ ಹಣಕಾಸು ಸಚಿವರಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ. ಈ ಪರಿಸ್ಥಿತಿಯಲ್ಲಿ ಪಿ.ಚಿದಂಬರಂ ಎನ್ರಾನ್ ಕಂಪನಿಯ ಪರವಾಗಿ ಭಾರತ ಸರ್ಕಾರದ ವಿರುದ್ಧ ವಕಾಲತು ವಹಿಸುವುದು ಅಸಾಧ್ಯವಾಗುತ್ತದೆ. ಆದರೂ ಮಹಾಶಯರು ಎನ್ರಾನ್ ಕಂಪನಿಯ ಕಾನೂನು ಸಲಹೆಗಾರರಾಗಿ ಮುಂದುವರೆಯುತ್ತಾರೆ. ಇವರ ರಾಷ್ಟ್ರ ಭಕ್ತಿಯನ್ನು ಮೆಚ್ಚಲೇಬೇಕು. ಏಕೆಂದರೆ ಮುಂದಾಗುವುದು ಅಕಲ್ಪನೀಯ ಮತ್ತು ಆಘಾತಕಾರಿ ಬೆಳವಣಿಗೆ.

ಹಣಕಾಸು ಸಚಿವರಾಗಿದ್ದ ಪಿ.ಚಿದಂಬರಂ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ವಾಜಪೇಯಿ ನೇಮಿಸಿದ್ದ ದೇಶಾಭಿಮಾನಿ, ನಿಷ್ಠಾವಂತ ವಕೀಲ ಹರೀಶ್ ಸಾಳ್ವೆ ಅವರಿಂದ ಕೇಸನ್ನು ಕಿತ್ತು ಪಾಕಿಸ್ತಾನಿ ಮೂಲದ ವಕೀಲ ಖಬರ್ ಖುರೇಶಿಯನ್ನು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತ ಸರ್ಕಾರದ ಪರ ವಕಾಲತು ವಹಿಸುವಂತೆ ನೇಮಕ ಮಾಡಿಕೊಳ್ಳುತ್ತಾರೆ.

ಭಾರತ ಸರ್ಕಾರದ ಪರವಾಗಿ ಹೋರಾಡಲು ಪಾಕಿಸ್ತಾನಿ ಮೂಲದ ವಕೀಲನೇ..! ಎಂದು ಅಂದಿನ ವಿರೋಧ ಪಕ್ಷವಾಗಿದ್ದ ಬಿಜೆಪಿ ಬಾಯಿ ಬಾಯಿ ಬಡಿದುಕೊಳ್ಳತ್ತದೆ. ಕಾರಣ ರಾಷ್ಟ್ರ ಪ್ರೇಮಿಗಳು ಇದನ್ನುಅರಗಿಸಿಕೊಳ್ಳುವುದಿರಲಿ, ಊಹಿಸಿಕೊಳ್ಳುವುದೂ ಅಸಾಧ್ಯ. ಏಕೆಂದರೆ ಜನಗಳ ಜೀವ ಕಾಯುವ ಕೆಲಸವನ್ನು ಯಮರಾಜನಿಗೆ ಕೊಟ್ಟಂತಾಗಲಿಲ್ಲವೇ.?

ಸಾಲದ್ದಕ್ಕೆ ಪಾಕಿಸ್ತಾನದ ವಕೀಲ ಖಬರ್ ಖುರೇಶಿ ಅವರಿಗೆ ಸೇವಾ ಶುಲ್ಕವಾಗಿ ಮನಮೋಹನ್ ಸಿಂಗ್ ಸರ್ಕಾರ 1400 ಕೋಟಿ ರೂ.ಗಳನ್ನು ನೀಡುತ್ತದೆ. ಅಂದರೆ ಇದನ್ನು ಹಾಸ್ಯಾಸ್ಪದವಾಗಿ ಹೇಳುವುದಾದರೆ ಮನಮೋಹನ್ ಸಿಂಗ್ ಸರ್ಕಾರ ಸೋಲಲು ಖರ್ಚು ಮಾಡಿದ ಹಣ ಬರೋಬ್ಬರಿ 1400 ಕೋಟಿ ರೂ. ಮಾತ್ರ.

ಆದರೆ, ಕಾಲಚಕ್ರದ ಪರಿಮಿತಿಯಲ್ಲಿ ಪ್ರತಿಯೊಬ್ಬರಿಗೂ ಕಾಲವೇ ಉತ್ತರ ಕೊಡುತ್ತದೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿಯಾಗಿದೆ. ಖ್ಯಾತ ವಕೀಲ ಮತ್ತು ಅಪ್ರತಿಮ ದೇಶಭಕ್ತ ಹರೀಶ್ ಸಾಳ್ವೆ ಪಾಕಿಸ್ತಾನದಲ್ಲಿ ಬಂಧಿಯಾಗಿರುವ ಕುಲ್ ಭೂಷಣ್ ಜಾದವ್ ಅವರ ಕೇಸಿನಲ್ಲಿ ವಕಾಲತು ವಹಿಸಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಇದೇ ಖಬರ್ ಖುರೇಶಿಯನ್ನು ಸೋಲಿಸಲು ಭಾರತ ಸರ್ಕಾರದಿಂದ ಪಡೆದುಕೊಂಡ ಸೇವಾಶುಲ್ಕ ಕೇವಲ ಒಂದು ರೂ.ಮಾತ್ರ.

ಈಗ ಯೋಚನೆ ಮಾಡಿ ಭಾರತ ಸರ್ಕಾರ ಸುಲಭವಾಗಿ ಗೆಲ್ಲಬಹುದಾಗಿದ್ದ ಕೇಸನ್ನು ಹರೀಶ್ ಸಾಳ್ವೆ ಅವರಿಂದ ಕಿತ್ತು ಪಾಕಿಸ್ತಾನಿ ಮೂಲದ ವಕೀಲ ಖಬರ್ ಖುರೇಶಿಗೆ ಕೊಟ್ಟ ಪರಿಣಾಮವಾಗಿ ವಕಾಲತು ವಹಿಸಿದ 12 ತಿಂಗಳೊಳಗೆ ಸೋತು 38,000 ಕೋಟಿ ರೂ.ಗಳನ್ನು ಪರಿಹಾರವಾಗಿ ಮನಮೋಹನ್ ಸಿಂಗ್ ಸರ್ಕಾರ ಎನ್ರಾನ್ ಕಂಪನಿಗೆ ಕೊಡಬೇಕಾಗಿ ಬರುತ್ತದೆ. ಆದರೆ, ಇದು ಸುದ್ದಿಯಾಗುವುದೇ ಇಲ್ಲ. ಏಕೆಂದರೆ ಆಗ ಈಗಿನ ರೀತಿ ಸಾಮಾಜಿಕ ಜಾಲತಾಣಗಳಿರಲಿಲ್ಲ.

ಬೆರಳ ತುದಿಯಲ್ಲಿ ಇಡೀ ಜಗತ್ತನ್ನೇ ಅರೆ ಕ್ಷಣದಲ್ಲಿ ಜಾಲಾಡಲು ಮೊಬೈಲ್‍ಫೋನ್‍ಗಳಿರಲಿಲ್ಲ. ಅಲ್ಲದೆ, ಏನಾದರೂ ಜೋರಾಗಿ ಧ್ವನಿ ಎತ್ತಿದರೆ ಅಂತಹ ಪತ್ರಕರ್ತ ಸಂಸ್ಥೆಗಳಿಗೆ ಪದ್ಮ ಪ್ರಶಸ್ತಿಗಳಲ್ಲಿ ಪಾಲುದಾರಿಕೆ ನೀಡಿ ಅವರ ಆಕ್ರೋಶ ತಣಿಸುವಲ್ಲಿ ಅಂದಿನ ಯುಪಿಎ ಸರ್ಕಾರ ಯಶಸ್ವಿಯಾಗಿತ್ತು. ಆದರೆ, ಇಷ್ಟೆಲ್ಲ ದುರಂತ ನಡೆದದ್ದು ಒಬ್ಬ ವಿಶ್ವವಿಖ್ಯಾತ ಅರ್ಥಶಾಸ್ತ್ರಜ್ಞನ ಮುಂದಾಳತ್ವದಲ್ಲಿ ಮತ್ತು ನಾವೆಂದೂ ಕಂಡುಕೇಳರಿಯದ ಹಣಕಾಸು ಸಚಿವರ ಕೃಪಾಕಟಾಕ್ಷದಿಂದ ಮತ್ತು ಯುಪಿಎ ಸರ್ಕಾರದ ಬೇಜವಬ್ದಾರಿತನದಿಂದ.

ಭಾರತ ಸರ್ಕಾರ ಅಂದು ಅಂತಾ ರಾಷ್ಟ್ರೀಯ ನ್ಯಾಯಾಲಯದಲ್ಲಿ ಸೋತು ಮಂಡಿಯೂರಿ ಎನ್ರಾನ್ ಕಂಪನಿಗೆ ದಂಡ ಕಟ್ಟಿತ್ತು. ಆದರೆ, ಭಾರತೀಯರ ತೆರಿಗೆಯಲ್ಲಿ ಎನ್ರಾನ್ ಕಂಪನಿಗೆ ದಂಡವಾಗಿ ಕಟ್ಟಿದ್ದ 38,000 ಕೋಟಿ ರೂ.ಗಳಲ್ಲಿ ಯಾರ ಯಾರ ಜೇಬಿಗೆ ಎಷ್ಟೆಷ್ಟು ಹೋಯಿತು ಎಂಬುದು ಮಾತ್ರ ಇಂದಿಗೂ ಚಿದಂಬರ ರಹಸ್ಯ…

# ಮಹಾಂತೇಶ್ ಬ್ರಹ್ಮ

Facebook Comments