ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ವಿಷಯದಲ್ಲಿ ರಾಜೀ ಪ್ರಶ್ನೆಯೇ ಇಲ್ಲ : ಭಾರತ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.5-ದೇಶದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆ ವಿಷಯದಲ್ಲಿ ರಾಜೀ ಪ್ರಶ್ನೆಯೇ ಇಲ್ಲ ಎಂದು ಪುನರುಚ್ಚರಿಸುವ ಭಾರತ, ಚೀನಾಕ್ಕೆ ಮತ್ತೊಮ್ಮ ತನ್ನ ದೃಢ ನಿಲುವನ್ನು ಸ್ಪಷ್ಟಪಡಿಸಿದೆ.

ಗಡಿ ವಿಷಯದಲ್ಲಿ ದೇಶಗಳ ನಡುವೆ ಶಾಂತಿ, ಸೌಹಾರ್ದತೆ ಮತ್ತು ಭಾತೃತ್ವ ಇರದಿದ್ದರೆ ದ್ವಿಪಕ್ಷೀಯ ಸಂಬಂಧಕ್ಕೆ ಅರ್ಥವೇ ಇಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ ತಿಳಿಸಿದ್ದಾರೆ.

ವಿಶ್ವ ವ್ಯವಹಾರಗಳ ಭಾರತೀಯ ಮಂಡಳಿ ವೆಬಿನಾರ್‍ನಲ್ಲಿ ಮಾತನಾಡಿದ ಅವರು, ಚೀನಾಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ.  ಯಥಾ ಸ್ಥಿತಿ ನಿಯಮಗಳನ್ನು ಉಲ್ಲಂಘಿಸಿ ಪೂರ್ವ ಲಡಾಕ್‍ನಲ್ಲಿ ಚೀನಾ ತನ್ನ ಹೆಚ್ಚುವರಿ ಸೇನಾಪಡೆಯನ್ನು ನಿಯೋಜಿಸಿದ್ದರೂ ಕೂಡ ಸಂಕಷ್ಟದ ಸ್ಥಿತಿಯಲ್ಲಿಯೂ ಭಾರತವು ಶಾಂತಿ ಮತ್ತು ಸಂಯಮದಿಂದ ವರ್ತಿಸಿದೆ.

ಚೀನಾದೊಂದಿಗೆ ಮಿಲಿಟರಿ ಮತ್ತು ರಾಜತಾಂತ್ರಿಕ ಮಟ್ಟದ ಮಾತುಕತೆಯಲ್ಲಿ ನಿರಂತರವಾಗಿ ತೊಡಗಿದೆ ಎಂದು ಅವರು ಭಾರತದ ನಿಲುವನ್ನು ಸಮರ್ಥಸಿಕೊಂಡರು.

ಕೋವಿಡ್-19 ವೈರಸ್ ಹಾವಳಿ ಇದ್ದರೂ ಕೂಡ ಭಾರತ ಮಾತುಕತೆಯಿಂದ ಹಿಂದಕ್ಕೆ ಸರಿದಿಲ್ಲ. ಖಜಿಟಲ್ ವೇದಿಕೆ ಮತ್ತು ಇತರ ಸಂಪರ್ಕ ಜಾಲಗಳ ಮೂಲಕ ನಾವು ಚೀನಾದೊಂದಿಗೆ ಮಾತುಕತೆ ಮುಂದುವರಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಈ ಮಧ್ಯೆ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಕ್ತಾರ ಅನುರಾಗ್ ಶ್ರೀವಾಸ್ತವ್ ನಿನ್ನೆ ರಾತ್ರಿ ಹೇಳಿಕೆ ನೀಡಿ, ರಾಜತಾಂತ್ರಿಕ ಮತ್ತು ಮಿಲಿಟರಿ ಮಾತುಕತೆಯೇ ಗಡಿ ಸಂಘರ್ಷ ಇತ್ಯರ್ಥಕ್ಕೆ ಇರುವ ಸೂಕ್ತ ಪರಿಹಾರ. ಇವುಗಳನ್ನು ಹೊರತುಪಡಿಸಿ ಬೇರೆ ರೀತಿಯ ರಾಜೀ-ಸಂಧಾನವನ್ನು ಭಾರತ ಒಪ್ಪುವುದಿಲ್ಲ ಎಂದಿದ್ದಾರೆ.

Facebook Comments