ವಿದೇಶಾಂಗ ಕಾರ್ಯದರ್ಶಿಯಾಗಿ ಹರ್ಷ ವರ್ಧನ್ ಶೃಂಗಿಲಾ ಅಧಿಕಾರ ಸ್ವೀಕಾರ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜ.29-ಅನುಭವಿ ರಾಜತಾಂತ್ರಿಕ ಹರ್ಷವರ್ಧನ್ ಶೃಂಗಿಲಾ ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ಇಂದು ಅಧಿಕಾರ ಸ್ವೀಕರಿಸಿದರು. ವಿಜಯ್ ಗೋಖಲೆ ಉತ್ತರಾಧಿಕಾರಿಯಾಗಿರುವ ಹರ್ಷವರ್ಧನ್ ಅವರು ಎರಡು ವರ್ಷಗಳ ಕಾಲ ಈ ಜವಾಬ್ದಾರಿ ಹುದ್ದೆಯನ್ನು ನಿರ್ವಹಿಸಲಿದ್ದಾರೆ. ಅಮೆರಿಕಕ್ಕೆ ಭಾರತದ ರಾಜತಾಂತ್ರಿಕರಾಗಿ ಕಾರ್ಯ ನಿರ್ವಹಿಸಿದ್ದ ಇವರು 1984ರ ಭಾರತೀಯ ವಿದೇಶಾಂಗ ಸೇವೆ (ಐಪಿಎಸ್) ಬ್ಯಾಚ್‍ನ ಅಧಿಕಾರಿ.

ವಿದೇಶಾಂಗ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹುದ್ದೆ ಅತ್ಯಂತ ಜವಾಬ್ದಾರಿಯುತವಾದುದು. ಮತ್ತು ವಿದೇಶಾಂಗ ಸೇವೆಗಳು ಸಾರ್ವಜನಿಕ ಸೇವೆಯಾಗಿದೆ. ದೇಶದ ಭದ್ರತೆ, ಸಾರ್ವಭೌಮತ್ವ ಮತ್ತು ವಿದೇಶಾಂಗ ವ್ಯವಹಾರಗಳಲ್ಲಿ ಸಚಿವಾಲಯದ ನೀತಿ ನಿಯಮಗಳಿಗೆ ತಾವು ಸಂಪೂರ್ಣ ಬದ್ಧರಾಗಿರುವುದಾಗಿ ತಿಳಿಸಿದರು.

Facebook Comments