ಕೊರೊನಾ ನಿಯಂತ್ರಣದಲ್ಲಿದೆ, ಭೀತಿ ಬೇಡ, ಲಸಿಕೆ ಹಾಕಿಸಿಕೊಳ್ಳಿ : ಕೇಂದ್ರ ಸಚಿವ ಹರ್ಷವರ್ಧನ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ (ಪಿಟಿಐ),ಮಾ.8-ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಗಣನಿಯವಾಗಿ ಹೆಚ್ಚುತ್ತಿರುವ ಬೆನ್ನಲ್ಲೇ ಪರಿಸ್ಥಿತಿ ನಿಯಂತ್ರಣದಲ್ಲಿದೆ ನಾವೀಗ ಸಾಂಕ್ರಾಮಿಕ ರೋಗ ನಿವಾರಣೆಯ ಕೊನೆಯ ಹಂತದಲ್ಲಿದ್ದೇವೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಭರವಸೆ ನೀಡಿದ್ದಾರೆ.

ಆದರೂ ಜನರು ಮೈ ಮರೆಯಬಾರದು, ಎಲ್ಲಾ ನಿಯಮಗಳನ್ನು ಅನುಸರಿಸಬೇಕು. ಕೊರೊನಾ ವಿಚಾರದಲ್ಲಿ ರಾಜಕೀಯ ಮಾಡಬಾರದು. ಪ್ರತಿಯೊಬ್ಬರು ಲಸಿಕೆ ಪಡೆದುಕೊಳ್ಳುವ ಮೂಲಕ ಸೋಂಕು ಹರಡುವುದರಿಂದ ಮುಕ್ತಿ ಪಡೆಯಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ದೇಶಿಯವಾಗಿ ತಯಾರಿಸಿರುವ ಕೊರೊನಾ ಲಸಿಕೆಗೆ ವಿದೇಶಗಳಿಂದ ಭಾರಿ ಬೇಡಿಕೆ ಬಂದಿದೆ. ಈಗಾಗಲೇ ಕೆಲವು ರಾಷ್ಟ್ರಗಳಿಗೆ ಲಸಿಕೆ ರವಾನಿಸಿದ್ದೇವೆ. ಎಲ್ಲ ಕಡೆಯಿಂದಲೂ ಉತ್ತಮ ಪ್ರತಿಕ್ರಿಯೆ ಬಂದಿದೆ. ಹೀಗಾಗಿ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

Facebook Comments

Sri Raghav

Admin