ವಿದ್ಯಾರ್ಥಿನಿಯರಿಗೆ ‘ಲವ್ ಫಾರ್ಮುಲಾ’ ಹೇಳಿಕೊಟ್ಟ ‘ಲವ್ ಗುರು’ ಸಸ್ಪೆಂಡ್..! ವಿಡಿಯೋ ವೈರಲ್

ಈ ಸುದ್ದಿಯನ್ನು ಶೇರ್ ಮಾಡಿ

ಹರಿಯಾಣ, ಮಾ.20- ಗಣಿತ ಪಾಠದ ನಡುವೆ ವಿದ್ಯಾರ್ಥಿನಿಯೊಬ್ಬರಿಗೆ ಲವ್ ಫಾರ್ಮುಲಾ ಕ್ಲಾಸ್ ನಡೆಸಿದ ಕಾಲೇಜಿನ ಪ್ರಾಂಶುಪಾಲ ಎಡವಟ್ಟು ಸಾಮಾಜಿಕ ಜಾಲ ತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

ಕಾಲೇಜಿನ ತರಗತಿ ಮುಗಿದ ನಂತರ ವಿದ್ಯಾರ್ಥಿನಿಯನ್ನು ಅಲ್ಲೇ ಕೂರಿಸಿಕೊಂಡು ಗಣಿತ ಪಾಠ ಮಾಡುವ ನೆಪದಲ್ಲಿ ಪ್ರೇಮ ನಿವೇದನೆ ಮಾಡುವ ರೀತಿಯಲ್ಲಿ ಹಲವು ಫಾರ್ಮುಲಾಗಳನ್ನು ಬದಲಿಸಿ ತಿಳಿಸುತ್ತಿದ್ದ.

ಬೋರ್ಡ್ ಮೇಲೆ ಫಾರ್ಮುಲಾ ಬರೆಯುವ ಬರದಲ್ಲಿ ಕ್ಲೋಸ್‍ನೆಸ್-ಅಟ್ರಾಕ್ಷನ್= ಫ್ರೆಂಡ್‍ಶಿಪ್. ಕ್ಲೋಸ್‍ನೆಸ್+ಅಟ್ರಾಕ್ಷನ್= ಪ್ರೇಮ. ಈ ರೀತಿ ಹಲವು ಫಾರ್ಮುಲಾಗಳನ್ನು ಬರೆದು ಅದು ತರಗತಿಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿ ಅದನ್ನು ಹಲವರು ನೋಡಿದ್ದಾರೆ.

ಗಣಿತ ಪ್ರಾಧ್ಯಾಪಕ ಕಾಲೇಜಿನ ಪ್ರಾಂಶುಪಾಲ ಕೂಡ ಆಗಿದ್ದು , ಇದರ ಬಗ್ಗೆ ತುರ್ತು ಕ್ರಮ ಕೈಗೊಂಡಿರುವ ಆಡಳಿತ ಮಂಡಳಿ ಆತನನ್ನು ಅಮಾನತು ಮಾಡಲಾಗಿದೆ.

ಹರಿಯಾಣದ ಕರ್ನಾಲ್‍ನ ಮಹಿಳಾ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು , ಈಗ ಈ ವಿಡಿಯೋ ತುಣುಕುಗಳು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin