ಹಾಸನದಲ್ಲಿ ಮಳೆಗೆ ಸಿಲುಕಿ ಅಸ್ವಸ್ಥಗೊಂಡಿದ್ದ ಮೂವರ ಸಾವು…!

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಆ.13- ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಹಾಮಳೆಗೆ ಮೃತಪಟ್ಟಿರುವವರ ಸಂಖ್ಯೆ ಮೂವರಕ್ಕೇರಿದೆ. ರಂಗಮ್ಮ (60), ಪುಷ್ಪಾ(40) ಹಾಗೂ ಪ್ರಕಾಶ್(61) ಮೃತ ದುರ್ದೈವಿಗಳು. ಹಾಸನ ತಾಲೂಕಿನ ಕೌಶಿಕ  ಗ್ರಾಮದಲ್ಲಿ ಕಳೆದ ಆ.9 ರಂದು ಮನೆ ಕುಸಿದಿತ್ತು. ಮನೆಯ ಅವಶೇಷ ಗಳಡಿ ರಂಗಮ್ಮ ಸಿಲುಕಿ ಗಾಯಗೊಂಡಿದ್ದರು.

ಕೂಡಲೇ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ನಿನ್ನೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಅದೇ ದಿನ ನಾಪತ್ತೆಯಾಗಿದ್ದ ಆಲೂರು ತಾಲೂಕಿನ ಮತ್ತೋರ್ವ ಮಹಿಳೆ ಪುಷ್ಪಾ, ಶಂಕುತೀರ್ಥ ನದಿಯ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದರು. ನಿನ್ನೆ ನದಿಯಲ್ಲಿ ಶೋಧ ಕಾರ್ಯ ನಡೆಸಿದಾಗ ಅವರ ಮೃತದೇಹ ಸಹ ಪತ್ತೆಯಾಗಿದೆ.

ಸಕಲೇಶಪುರ ತಾಲೂಕಿನ ಹುರಡಿಯ ಪ್ರಕಾಶ್ ಕೂಡ ಮೃತಪಟ್ಟಿದ್ದಾರೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಈವರೆಗೆ ಮೂವರು ಮಹಾಮಳೆಗೆ ಬಲಿಯಾಗಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ