ಬೆಂಕಿಗೆ 4 ಹಸುಗಳು ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಅರಸೀಕೆರೆ, ಸೆ.21- ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ ನಾಲ್ಕು ಹಸುಗಳು ಸೇರಿದಂತೆ ಮೂರು ಗುಡಿಸಲು ಬೆಂಕಿಗೆ ಆಹುತಿಯಾಗಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿರುವ ಘಟನೆ ತಾಲ್ಲೂಕಿನ ದುಮ್ಮನೇಹಳ್ಳಿ ಹರಿಜನ ಕಾಲೋನಿಯಲ್ಲಿ ಸಂಭವಿಸಿದೆ.

ಗ್ರಾಮದ ವಾಸಿ ಮಲ್ಲಪ್ಪ ತನ್ನ ಮನೆಗೆ ಹೊಂದಿಕೊಂಡಂತೆ ಕೊಟ್ಟಿಗೆಯನ್ನು ನಿರ್ಮಿಸಿಕೊಂಡಿದ್ದು ರಾತ್ರಿ ಗ್ರಾಮದಲ್ಲಿ ವಿದ್ಯುತ್ ಕಡಿತಗೊಂಡಿದ್ದರಿಂದ ಲಾಟಿನ್ ಹಚ್ಚಿಟ್ಟು ಮನೆಯಿಂದ ಹೊರ ಹೋಗಿದ್ದ ವೇಳೆ ಈ ಅವಘಡ ಸಂಭವಿಸಿದೆ.

ಮಲ್ಲಪ್ಪನ ಕೊಟ್ಟಿಗೆಗೆ ತಾಗಿದ ಬೆಂಕಿ ದಗದಗಿಸಿ ಹೊತ್ತಿ ಉರಿದಿದ್ದು, ಬೆಂಕಿಯ ಕೆನ್ನಾಲಿಗೆ ಮಲ್ಲಪ್ಪನ ಗುಡಿಸಿಲಿನ ಪಕ್ಕದಲ್ಲೇ ಇದ್ದ ಅವರ ಸೋದರರ ಗುಡಿಸಿಲಿಗೂ ತಾಗಿ ನೋಡು ನೋಡುತ್ತಿದ್ದಂತೆ ಮೂರು ಗುಡಿಸಲು ಹಾಗೂ ನಾಲ್ಕು ಜಾನುವಾರುಗಳು ಬೆಂಕಿಗೆ ಆಹುತಿಯಾಗಿದ್ದು ,

ಸುದ್ದಿ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ ಬರುವಷ್ಟರಲ್ಲಿ ಹಸುಗಳು ಸೇರಿದಂತೆ ಗುಡಿಸಿಲುಗಳು ಬೆಂಕಿಯ ರೌದ್ರಾವತಾರಕ್ಕೆ ಸುಟ್ಟು ಭಸ್ಮವಾಗಿದೆ.
ಈ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಗ್ರಾಮಾಂತರ ಠಾಣೆ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ