ಎಡಕುಮರಿ ಬಳಿ ರೈಲ್ವೆ ಸಿಬ್ಬಂದಿಗೆ ಬೆದರಿಕೆ ಹಾಕಿರುವುದು ನಕ್ಸಲರಲ್ಲಾ : ಎಎಸ್‌ಪಿ ನಂದಿನಿ‌

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ: ಹಾಸ‌‌ನ- ಮಂಗಳೂರು ರೈಲ್ವೆ ಮಾರ್ಗದ  ಸಕಲೇಶಪುರ‌ ಬಳಿಯ ಎಡಕುಮೇರಿ ರೈಲ್ವೆ ಮಾರ್ಗದಲ್ಲಿ ಹಳಿ ತಪಾಸಣೆ ನಡೆಸುತ್ತಿದ್ದ ರೈಲ್ವೆ ಹೊರಗುತ್ತಿಗೆ ಗಸ್ತು ಸಿಬ್ಬಂದಿಗೆ ಅಪರಿಚಿತ ವ್ಯಕ್ತಿಗಳು ಪಿಸ್ತೂಲ್‌ ತೋರಿಸಿ ಬೆದರಿಸಿರುವುದು ನಕ್ಸಲರಲ್ಲಾ ಎಂದು ಎಎಸ್ಪಿ ನಂದಿನಿ ಅವರು ಸ್ಪಷ್ಟಪಡಿಸಿದ್ದಾರೆ.

ಘಟನೆ‌ ಸಂಬಂದ್ಧ ಪತ್ರಿಕೆಗೆ ಮಾಹಿತಿ‌ ನೀಡಿರುವ ಎಎಸ್ಪಿ ನಂದಿನಿ ಅವರು ಈ ಭಾಗದಲ್ಲಿ ನಕ್ಸಲ್ ಚಟುವಟಿಕೆ ಯಾವುದು ಇಲ್ಲಾ ಎಡಕುಮಾರಿ ಪ್ರದೇಶದಲ್ಲಿ ಟ್ರೆಕ್ಕಿಂಗ್ ಮಾಡುವವರು ಅಥವಾ ಕಳ್ಳರು ರೈಲ್ವೆ ಸಿಬ್ಬಂದಿಯನ್ನು ಹೆದರಿಸಿರಬಹುದು , ಈ ಸಂಬಂದ್ಧ ರೈಲ್ವೆ ಸಿಬ್ಬಂದಿ ನೀಡಿದ ಮಾಹಿತಿ ಯನ್ನು ಆಧರಿಸಿ ರೈಲ್ವೆ ಹಾಗೂ ಅರಣ್ಯ ಇಲಾಖೆ ಯೊಂದಿಗೆ ಜಂಟಿ‌ ಕಾರ್ಯಚರಣೆ ನಡೆಸಲಾಗುತ್ತಿದೆ.

ಇದುವರೆಗೆ ಪ್ರಕರಣ ಸಂಬಂದ್ಧ ನಕ್ಸಲ್ ಚಟುವಟಿಕೆ ಬಗ್ಗೆ ಯಾವುದೇ ಮಾಹಿತಿ ಇಲ್ಲಾ ಎಂದು ನಂದಿನಿ ಅವರು ಪ್ರತಿಕ್ರಿಯೇ ನೀಡಿದ್ದಾರೆ. ಕಳೆದ ಸೋಮವಾರ ಎಡಕುಮರಿ ಬಳಿ ರೈಲ್ವೆ ಸಿಬ್ಬಂದಿಗೆ ಬೆದರಿಸಿರುವುದು ನಕ್ಸಲರು ಇರಬಹುದು ಎಂಬ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಪೊಲೀಸ- ಅರಣ್ಯ-ಹಾಗೂ ರೈಲ್ವೆ ಇಲಾಖೆಯ ಸುಮಾರು ೧೫ ಸಿಬ್ಬಂದಿ ಬುಧವಾರ ಬೆಳಗ್ಗೆಯಿಂದ ಚಟುವಟಿಕೆ ಕುರಿತು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.

ಘಟನೆ‌ ವಿವರ: ”ಬೆಂಗಳೂರು-ಮಂಗಳೂರು ರೈಲ್ವೆ ಮಾರ್ಗದ ಸಕಲೇಶಪುರದಿಂದ ಎಡಕುಮೇರಿ ಸಮೀಪದ ಸುರಂಗಮಾರ್ಗದ ಬಳಿ ಸೋಮವಾರ ರಾತ್ರಿ 7.30ರ ಸುಮಾರಿಗೆ ಪ್ರತ್ಯಕ್ಷರಾದ ಹಿಂದಿ ಮಾತನಾಡುತ್ತಿದ್ದ ಇಬ್ಬರು ಅಪರಿಚಿತ ವ್ಯಕ್ತಿಗಳು, ಗಸ್ತು ನಡೆಸುತ್ತಿದ್ದ ರೈಲ್ವೆ ಇಲಾಖೆಯ ರಾಜು ಎಂಬುವರನ್ನು ಬೆದರಿಸಿದ್ದಾರೆ ಎಂಬ ಮಾಹಿತಿಯನ್ನು ಪೊಲೀಸರು ಪಡೆದಿದ್ದರು.

”ಕತ್ತಲೆಯಲ್ಲಿ ಪಿಸ್ತೂಲೋ ಅಥವಾ ಮತ್ತಿನ್ನಾವುದಾದರೂ ಶಸ್ತ್ರಾಸ್ತವೋ ಎಂಬುದು ತಿಳಿದಿಲ್ಲ. ರಾಜು ಮೌಖಿಕವಾಗಿ ಮಾಹಿತಿ ನೀಡಿ ಪಿಸ್ತೂಲ್‌ ಇದ್ದಂತೆ ಇತ್ತು ಎಂದಿದ್ದಾರೆ. ನಕ್ಸಲರು ಪಿಸ್ತೂಲ್‌ ಇಟ್ಟುಕೊಳ್ಳುವುದು ಅನುಮಾನ. ಏನೇ ಆಗಲಿ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಿದ್ದು,ಎಡಕುಮೇರಿ ಭಾಗದಲ್ಲಿ ಕಾರ್ಯಚರಣೆ ನಡೆಸಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ನಂದಿನಿ ಅವರು ತಿಳಿಸಿದ್ದಾರೆ.

Facebook Comments