ಶ್ರವಣಬೆಳಗೊಳದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಸೆ.12-ಜಿಲ್ಲೆಯ ಶ್ರವಣಬೆಳಗೊಳದಲ್ಲಿ ಚಿರತೆ ಹಾವಳಿ ಮತ್ತೆ ಮರು ಕಳುಹಿಸಿದ್ದು , ಜನರ ನಿದ್ದೆಗೆಡಿಸುತ್ತಿದೆ.ಶ್ರವಣಬೆಳಗೊಳದ ಜೈನ ಮಠದ ಆಸು ಪಾಸಿನಲ್ಲಿ ನಡು ರಾತ್ರಿಯಲ್ಲಿ ಸಂಚಾರ ಮಾಡುತ್ತಿರುವ ದೃಶ್ಯಗಳು ಮಠದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಮಧ್ಯ ರಾತ್ರಿ 1ರಿಂದ 2 ಗಂಟೆ ಸಮಯದಲ್ಲಿ ಮಠದ ಆವರಣದಲ್ಲಿ ಸಂಚಾರ ಮಾಡುವ ಚಿರತೆ ಹಲವು ದಿನಗಳಿಂದ ಸಿಸಿ ಕ್ಯಾಮೆರಾಗಳ ಕಣ್ಣಿಗೆ ಬಿದ್ದಿದ್ದು , ಸ್ಥಳೀಯರು ಚಿಂತೆಗೀಡಾಗಿದ್ದಾರೆ. ಮಠದ ಸುತ್ತ ಸಿಬ್ಬಂದಿ ಹಾಗೂ ಕಾವಲುಗಾರರಿದ್ದು , ಇಲ್ಲಿ ಚಿರತೆ ಸಂಚಾರ ಮಾಡುವುದರಿಂದ ಭಯಭೀತರಾಗಿದ್ದು , ಚಿರತೆಯನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ.

ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಶ್ರವಣಬೆಳಗೊಳದ ಮುಖ್ಯ ರಸ್ತೆಯಲ್ಲಿ ನಾಯಿಯೊಂದನ್ನು ಹೊತ್ತೊಯ್ದಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಬೋನನ್ನು ಇಟ್ಟು ಸೆರೆ ಹಿಡಿದಿದ್ದರು. ಕಳೆದ ಕೆಲ ದಿನಗಳಿಂದ ಚಿರತೆ ಮತ್ತೆ ಪ್ರತ್ಯಕ್ಷವಾಗಿದ್ದು , ಮುಂದೆ ಯಾವ ರೀತಿ ಅನಾಹುತಕ್ಕೆ ಕಾರಣವಾಗಲಿದೆ ಎಂಬ ಆತಂಕ ಸ್ಥಳೀಯರಲ್ಲಿ ಮನೆ ಮಾಡಿದೆ.

ಚಿರತೆಯನ್ನು ಸೆರೆ ಹಿಡಿಯಲು ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಭರವಸೆ ನೀಡಿದ್ದಾರೆ.

Facebook Comments