ಈ ಬಾರಿ ಹಾಸನಾಂಬ ಹುಂಡಿಯಲ್ಲಿ 1.54 ಕೋಟಿ ರೂ ಕಾಣಿಕೆ ಸಂಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ನ.9- ಹಾಸನಾಂಬ ಮತ್ತು ಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಈ ಬಾರಿ ಹುಂಡಿ ಹಣ ಹಾಗೂ ಟಿಕೆಟ್ ಮತ್ತಿತರ ಮೂಲಗಳಿಂದ ಒಟ್ಟಾರೆ 1,54,37,940 ಹಣ ಸಂಗ್ರಹವಾಗಿದೆ. ಹಾಸನಾಂಬಾ ದೇವಾಲಯದ ಹುಂಡಿಯಲ್ಲಿ 83,89,770 ಸಿದ್ದೇಶ್ವರ ದೇವಾಲಯದ ಹುಂಡಿಯಲ್ಲಿ- 6,50,355 ಸೇರಿದಂತೆ ಹುಂಡಿಯಲ್ಲಿ 90,40,125 ರೂ. ಸಂಗ್ರಹವಾಗಿದೆ.

ಅಲ್ಲದೆ ಟಿಕೆಟ್ ಮಾರಾಟದಿಂದ 63,97,815 ರೂ ಸಂಗ್ರಹವಾಗದೆ ಎಂದು ದೇವಾಯದ ಆಡಳಿತಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಬಿ.ಎ ಜಗದೀಶ್ ತಿಳಿಸಿದ್ದಾರೆ. ಅ 28 ರಿಂದ ನ 6ರ ವರಗೆ ಹಾಸನಾಂಬ ,ಸಿದ್ದೇಶ್ವರ ಜಾತ್ರಾ ಮಹೋತ್ಸವ ನಡೆದಿತ್ತು. ನ.6ರಂದು ಧಾರ್ಮಿಕ ವಿ ವಿಧಾನಗಳೊಂದಿಗೆ ದೇವಾಲಯದ ಬಾಗಿಲು ಹಾಕಲಾಗಿತ್ತು. ಬೆಳಗ್ಗೆ 8 ಗಂಟೆಯಿಂದ ಹುಂಡಿ ಹಣ ಎಣಿಕೆ ಕಾರ್ಯ ಪ್ರಾರಂಭಿಸಲಾಯಿತು. ಸಂಜೆ 4.30ರ ವೇಳೆಗೆ ಎಣಿಕೆ ಮುಕ್ತಾಯಗೊಂಡಿದೆ.

ಜಾತ್ರಾ ಮಹೋತ್ಸವದ ಯಶಸ್ಸಿಗೆ ಸಹಕರಿಸಿದ ಜನಪ್ರತಿನಿಗಳು , ಸಂಘ-ಸಂಸ್ಥೆಗಳು, ಮಾಧ್ಯಮ ಪ್ರತಿನಿಧಿಗಳು ಸಾರ್ವಜನಿಕರು ಹಾಗೂ ಹಣ ಎಣಿಕೆ ಕರ್ತವ್ಯದಲ್ಲಿ ತೊಡಗಿದ ಎಲ್ಲಾ ಅಕಾಧಿರಿ, ಸಿಬ್ಬಂದಿ, ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ಆರ್.ಗಿರೀಶ್ ಮತ್ತು ಉಪ ವಿಭಾಗಾಧಿಕಾರಿ ಹಾಗೂ ದೇವಾಲಯದ ಆಡಳಿತಾಧಿಕಾರಿ ಬಿ.ಎ ಜಗದೀಶ್ ಮತ್ತೊಮ್ಮೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ .

Facebook Comments