ಹಾಸನಾಂಬೆ ದರ್ಶನಕ್ಕೆ ಹರಿದುಬಂದ ಜನಸಾಗರ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಅ.19-ಜಿಲ್ಲಾಯ ಅಧಿದೇವತೆ ಹಾಸನಾಂಬೆ ದೇವಾಲಯದ ಬಾಗಿಲು ತೆರೆದಿದ್ದು, ಮೂರನೇ ದಿನವಾದ ಇಂದು ತಾಯಿಯ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ.
ದೇಗುಲದ ಬಾಗಿಲು ತೆರೆದ ದಿನದಿಂದ ವಿಶೇಷ ಪೂಜ ಕೈಂಕರ್ಯ ಹಾಗೂ ನೈವೇದ್ಯ ಕಾರ್ಯಕ್ರಮದಿಂದಾಗಿ ಈ ವೇಳೆ ಕೆಲ ಗಂಟೆಯವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಿರುವುದಿಲ್ಲ.

ನಾಡಿನಾದ್ಯಂತ ಹೆಸರುವಾಸಿಯಾಗಿರುವ ಹಾಸನಾಂಬೆಯ ದರ್ಶನಕ್ಕೆ ಇಂದು ಬೆಳಗಿನ ಜಾವ 3 ಗಂಟೆಯಿಂದಲೇ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಜಿಲ್ಲಾಯಲ್ಲದೆ ರಾಜ್ಯದ ಮೂಲೆ ಮೂಲೆಗಳಿಂದ ನೂರಾರು ಭಕ್ತರು ತಂಡಗಳಾಗಿ ಆಗಮಿಸಿ ದೇವಿಯ ದರ್ಶನ ಪಡೆಯುತ್ತಿದ್ದಾರೆ.

ಗಂಟೆಗಟ್ಟಲೆ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.ಹರಕೆ ಹೊತ್ತ ಮಹಿಳೆಯರು ಹಸಿರು ಸೀರೆ, ಬಳೆ, ಮಡಲಕ್ಕಿಯನ್ನು ದೇವಿಗೆ ಸಮರ್ಪಿಸಿ ಭಕ್ತಿಯಿಂದ ಮಿಂದೇಳುತ್ತಿದ್ದಾರೆ. ಹಾಸನಾಂಬೆ ದರ್ಶನಕ್ಕೆ ಈಗಾಗಲೇ ಹಲವು ಗಣ್ಯರು ಭೇಟಿ ನೀಡಿದ್ದು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ, ಮಾಜಿ ಸಚಿವ ಎಚ.ಡಿ.ರೇವಣ್ಣ , ಸಂಸದ ಪ್ರಜ್ವಲ್ ರೇವಣ್ಣ, ಬ್ರಹ್ಮಾಂಡ ಗುರೂಜಿ ಪ್ರಮುಖರಾಗಿದ್ದಾರೆ. ದೇವಾಲಯಕ್ಕೆ ರಾಜ್ಯ, ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸಲಿದ್ದಾರೆ.

ಭಕ್ತರಿಗೆ ಅನಾನುಕೂಲವಾಗದಂತೆ ಪ್ರತಿ ಬಾರಿ ಮಾಡಿಕೊಳ್ಳುವ ಎಲ್ಲಾ ವ್ಯವಸ್ಥೆಗಳನ್ನೂ ಮಾಡಿಕೊಳ್ಳಲಾಗಿದ್ದು ಭಕ್ತರಿಂದ ನೂಕು ನುಗ್ಗಲಾಗದಂತೆ ಸರತಿ ಸಾಲಿನಲ್ಲಿ ಬರಲು ವ್ಯವಸ್ಥೆ ಮಾಡಲಾಗಿದೆ. 300, 1000 ರೂಗಳ ಟಿಕೆಟ್ ಮೂಲಕ ಶೀಘ್ರ ದರ್ಶನಕ್ಕೂ ಅವಕಾಶ ಕಲ್ಪಿಸಲಾಗಿದ್ದು 300 ಪೊಲೀಸ್ ಸಿಬ್ಬಂದಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಹಾಸನ ಜಿಲ್ಲಾ ವರಿಷ್ಠಧಿಕಾರಿ ರಾಮ್ ನಿವಾಸ್ ಸಪೇಟ್ ನೇತೃತವದಲ್ಲಿ ಭದ್ರತೆಗೆ ಕ್ರಮ ಕೈಗೊಳ್ಳಲಾಗಿದೆ.

Facebook Comments