ಹಾಸನಾಂಬ ಜಾತ್ರಾ ಮಹೋತ್ಸವ ಮಾಹಿತಿಯ ವೆಬ್ ಪೋರ್ಟಲ್‌ಗೆ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ; ಜಿಲ್ಲೆಯ ಅಧಿ ದೇವತೆ ಹಾಸನಾಂಬ ದೇವಿ ಜಾತ್ರಾ ಮಹೋತ್ಸವ ಅ.17 ರಿಂದ 29 ರವರೆಗೆ ನಡೆಯುವ ಹಿನ್ನೆಲೆಯಲ್ಲಿ ಇದರ ಮಹತ್ವ ಹಾಗೂ ಜಿಲ್ಲೆಯ ಪ್ರವಾಸಿ ತಾಣಗಳ‌ ಮಾಹಿತಿಯನ್ನು ಒಳಗೊಂಡ www.srihasanamba.com ಎಂಬ ವೆಬ್ ಸೈಟ್ ಅನ್ನು ಜಿಲ್ಲಾಧಿಕಾರಿ ಆರ್.ಗಿರೀಶ್ ಬಿಡುಗಡೆ ಮಾಡಿದರು.

ಜಲ್ಲಾಧಿಕಾರಿ ಕಚೇರಿಯಲ್ಲಿ ಇಂದು‌ ಸುದ್ದಿಗಾರರಿಗೆ ಕರೆಯಲಾಗಿದ್ದ ಸಭೆಯಲ್ಲಿ‌ ವೆಬ್ಸೈಟ್ ಬಿಡುಗಡೆ ನಂತರ ಮಾತನಾಡಿದ ಅವರು ಈ ವೆಬ್ ಪೋರ್ಟಲ್ ನಲ್ಲಿ 13 ದಿನಗಳ ಹಾಸನಾಂಬ ಜಾತ್ರೆಯ ಇತಿಹಾಸದ ಬಗ್ಗೆ ಮಾಹಿತಿ ,ಟಿಕೆಟ್ ಬುಕ್ಕಿಂಗ್ ಹಾಗೂ ಪ್ರಸಾಧ ವ್ಯವಸ್ಥೆ , ಜಿಲ್ಲೆಯ ಸುತ್ತಮುತ್ತಲಿನ ಪ್ರವಾಸಿ ತಾಣಗಳ‌‌ ಮಾಹಿತಿ ನೀಡಲಾಗುತ್ತದೆ ಎಂದರು.

ಸಾಲಿನಲ್ಲಿ‌ ನಿಂತು ದೇವಿ ದರ್ಶನ ಪಡೆಯುವ ಭಕ್ತಾದಿಗಳ ಅನುಕೂಲಕ್ಕಾಗಿ ಕೂರಲು ಹಾಗೂ ವಾಟರ್ ಪ್ರೂಫ್ ಚಾವಣಿಯ ಶೆಡ್ ನಿರ್ಮಾಣಕ್ಕೆ ಸೂಚನೆ ನೀಡಲಾಗಿದೆ, ಅಂಗವಿಕಲರಿಗೆ ಹಾಗೂ 70 ವರ್ಷ ಮೆಲ್ಪಟ್ಟವರಿಗೆ ವಿಶೇಷ ದರ್ಶನ ವ್ಯವಸ್ಥೆ ಮಾಡಲಾಗುವುದು , ಗಣ್ಯರಿಗೆ ಆಹ್ವಾನ ಪತ್ರಿಕೆ ನೀಡುವ ಮೂಲಕ ದರ್ಶನಕ್ಕೆ ವಿಶೇಷ ಆಹ್ವಾನ ನೀಡಲಾಗುವುದು ಎಂದರು.

ಅ.17 ನೇ ತಾರೀಖಿನ ಮೊದಲ ದಿನದ ದರ್ಶನದ‌ ವೇಳೆ ಹಾಸನಾಂಬ ದೇವಸ್ಥಾನ ದಿಂದ ಹಾಸನಾಂಬ ಕಲಾಕ್ಷೇತ್ರ ದವರೆಗೆ ಮಧ್ಯಾಹ್ನ 1 ರಿಂದ 2 ರವರೆಗೆ ವಿವಿಧ ಸಾಂಸ್ಕೃತಿಕ ಕಲಾ ತಂಡಗಳಿಂದ ವಿಶೇಷ ಪ್ರದರ್ಶನ / ಮೆರವಣಿಗೆ ನಡೆಯಲಿದೆ‌ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

Facebook Comments

Sri Raghav

Admin